More

    ಹಮಾಸ್​ ರೀತಿಯಲ್ಲಿ ದಾಳಿ ಮಾಡಬೇಕಾಗುತ್ತೆ… ಭಾರತಕ್ಕೆ ಖಲಿಸ್ತಾನಿ ಉಗ್ರನ ಬೆದರಿಕೆ!

    ನವದೆಹಲಿ: ಇಸ್ರೇಲ್-ಪ್ಯಾಲೆಸ್ತೀನ್​ ಯುದ್ಧದಿಂದ ಕಲಿತುಕೊಳ್ಳದಿದ್ದರೆ ಅದೇ ರೀತಿಯ ಪ್ರತಿಕ್ರಿಯೆ ಭಾರತದಲ್ಲೂ ಉಂಟಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಈ ಗುರುಪತ್ವಂತ್ ಸಿಂಗ್ ಪನ್ನುನ್ ನಿಷೇಧಿತ ಅಮೆರಿಕ ಮೂಲಕ ಸಿಖ್​ ಫಾರ್​ ಜಸ್ಟೀಸ್​ (ಎಸ್​ಎಫ್​ಜೆ) ಸಂಘಟನೆಯ ಮುಖ್ಯಸ್ಥ. ಪಂಜಾಬ್​ನಿಂದ ಪ್ಯಾಲೆಸ್ತೀನ್​ವರೆಗೂ ಅಕ್ರಮ ವಶದಲ್ಲಿರುವ ಜನರು ಪ್ರತಿಕ್ರಿಯಿಸಲಿದ್ದಾರೆ ಎಂದು ಪನ್ನುನ್​ ಎಚ್ಚರಿಸಿದ್ದಾನೆ. ಅಲ್ಲದೆ, ಭಾರತವು ಪಂಜಾಬ್​ ಆಕ್ರಮಿಸುವುದನ್ನು ಮುಂದುವರಿಸಿದರೆ ಅಲ್ಲಿ ಪ್ರತಿಕ್ರಿಯೆ ಇರಲಿದೆ ಮತ್ತು ಪಂಜಾಬ್​ನಲ್ಲಿ ಮುಂದಿನ ದಿನಗಳಲ್ಲಿ ಏನೇ ನಡೆದರೂ ಅದಕ್ಕೆ ಪ್ರಧಾನಿ ಮೋದಿ ಹೊಣೆಯಾಗಲಿದ್ದಾರೆ ಎಂದಿದ್ದಾನೆ.

    ಎಸ್​ಎಫ್​ಜೆ ಸಂಘಟನೆಯು ಮತ ಮತ್ತು ಮತದಾನವನ್ನು ನಂಬುತ್ತದೆ ಹಾಗೂ ಪಂಜಾಬ್​ ವಿಮೋಚನೆಯನ್ನು ಬಯಸುತ್ತದೆ. ಇದೀಗ ಆಯ್ಕೆಗಳು ಭಾರತದ ಮುಂದಿವೆ. ಬ್ಯಾಲೆಟ್​ ಆಫ್​ ಬುಲೆಟ್​ ಎಂದು ಶೂಟಿಂಗ್ ಮಾಡುವ ಸಂಕೇತದೊಂದಿಗೆ ಕ್ಯಾಮೆರಾ ಮುಂದೆ ಪನ್ನುನ್​ ಎಚ್ಚರಿಸಿದ್ದಾನೆ.

    ಇದನ್ನೂ ಓದಿ: ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

    ಪನ್ನುನ್​ ವಿರುದ್ಧ ಎಫ್​ಐಆರ್​ ದಾಖಲಾದ ಕೆಲವೇ ದಿನಗಳಲ್ಲಿ ಈ ವಿಡಿಯೋ ಸಂದೇಶ ಹರಿದುಬಂದಿದೆ. ಗುಜರಾತ್​ನ ಅಹಮದಾಬಾದ್​ನಲ್ಲಿ ಅ.14ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಬೆದರಿಕೆ ಮತ್ತು ದ್ವೇಷವನ್ನು ಹರಡುತ್ತಿರುವ ಆರೋಪದ ಮೇಲೆ ಪನ್ನುನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅಲ್ಲದೆ, ಕೆನಡಾದಲ್ಲಿ ನಡೆದ ಉಗ್ರ ಹರ್ದೀಪ್​ ಸಿಂಗ್​ ನಿಜ್ಜರ್​ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದೂ ಸಹ ವಿಡಿಯೋದಲ್ಲಿ ಪನ್ನುನ್​ ಬೆದರಿಕೆ ಹಾಕಿದ್ದಾನೆ.

    ಪಂಜಾಬ್​ನ ಅಮೃತಸರದಲ್ಲಿ ಹುಟ್ಟಿದ ಪನ್ನುನ್​, 2019ರಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ದ ಕಣ್ಗಾವಲಿನಲ್ಲಿ ಇದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಮತ್ತು ನಿಯೋಜಿಸುವಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸಿದ್ದಾನೆ ಮತ್ತು ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಬೆದರಿಕೆ ತಂತ್ರಗಳ ಮೂಲಕ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

    2021ರ ಫೆಬ್ರವರಿ 3ರಂದು ಪನ್ನುನ್​ ವಿರುದ್ಧ ಎನ್​ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್​ 29ರಂದು ಸರ್ಕಾರ ಘೋಷಣೆ ಮಾಡಿದೆ. (ಏಜೆನ್ಸೀಸ್​)

    ‘ಭಾಯ್’ ಎಂದು ಕರೆಯಲಿಲ್ಲ!; ಗುಂಪು ಘರ್ಷಣೆಯಲ್ಲಿ ಹೋಯಿತು ಇಬ್ಬರ ಜೀವ

    ಬ್ಯಾಂಕ್ ಆಫ್ ಬರೋಡ ವಿರುದ್ಧ ಕ್ರಮ ಜರುಗಿಸಿದ ಆರ್​ಬಿಐ; ಯಾರಿಗೆ ತೊಂದರೆ?

    ಮಲಾನ್​, ರೂಟ್​, ರೀಸ್ ಟೋಪ್ಲಿ ಮಿಂಚು: ಬಾಂಗ್ಲಾ ವಿರುದ್ಧ ಆಂಗ್ಲ ಪಡೆಗೆ 137 ರನ್​ಗಳ ಭರ್ಜರಿ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts