More

    ಮಲಾನ್​, ರೂಟ್​, ರೀಸ್ ಟೋಪ್ಲಿ ಮಿಂಚು: ಬಾಂಗ್ಲಾ ವಿರುದ್ಧ ಆಂಗ್ಲ ಪಡೆಗೆ 137 ರನ್​ಗಳ ಭರ್ಜರಿ ಗೆಲುವು

    ಧರ್ಮಶಾಲಾ: ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಸೋಲು ಅನುಭವಿಸಿ ಆರಂಭದಲ್ಲೇ ಎಡವಿದ್ದ ಇಂಗ್ಲೆಂಡ್​ ತಂಡ ಬಾಂಗ್ಲಾದೇಶದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 137 ರನ್​ಗಳ ಭಾರೀ ಅಂತರದಿಂದ ಜಯ ದಾಖಲಿಸುವ ಮೂಲಕ ಮತ್ತೆ ಗೆಲುವಿನತ್ತ ಮುಖ ಮಾಡಿದೆ.

    ಇಂದು ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಆಂಗ್ಲ ಪಡೆ, ಡೇವಿಡ್​ ಮಲಾನ್​ (140 ರನ್​, 107 ಎಸೆತ, 16 ಬೌಂಡರಿ, 5 ಸಿಕ್ಸರ್​), ಜೋ ರೂಟ್​ (82 ರನ್​, 68 ಎಸೆತ, 8 ಬೌಂಡರಿ, 1 ಸಿಕ್ಸರ್​) ಜಾನಿ ಬೈರ್​ಸ್ಟೋ (52 ರನ್​, 59 ಎಸೆತ, 8 ಬೌಂಡರಿ) ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 364 ರನ್​ಗಳ ಬೃಹತ್​ ಗುರಿಯನ್ನು ದಾಖಲಿಸಿತು.

    ಬಾಂಗ್ಲಾಪರ ಮೆಹದಿ ಹಸನ್​ 4 ವಿಕೆಟ್​ ಕಬಳಿಸಿ ಮಿಂಚಿದರೆ, ಶೋರಿಫುಲ್​ ಇಸ್ಲಾಮ್​ 3 ಮತ್ತು ತಸ್ಕಿನ್​ ಅಹ್ಮದ್ ಹಾಗೂ ನಾಯಕ ಶಕೀಬ್​ ತಲಾ ಒಂದೊಂದು ವಿಕೆಟ್​ ಕಬಳಿಸಿದರು. ವಿಕೆಟ್​ ಉರುಳಿಸಿದರು ಸಹ ಇಂಗ್ಲೆಂಡ್​ ತಂಡದ ರನ್​ ವೇಗಕ್ಕೆ ಯಾವುದೇ ಬೌಲರ್​ ಸಹ ಕಡಿವಾಣ ಹಾಕಲಿಲ್ಲ.​

    ಇದನ್ನೂ ಓದಿ: ಪುರುಷರಿಗೆ ನೋ ಎಂಟ್ರಿ! ಕೇವಲ ಮಹಿಳೆಯರೇ ಇರುವ ಈ ಗ್ರಾಮದ ಬಗ್ಗೆ ತಿಳಿದ್ರೆ ನೀವು ಅಚ್ಚರಿಪಡ್ತೀರಾ

    ಆಂಗ್ಲ ಪಡೆ ನೀಡಿದ ಗುರಿ ಬೆನ್ನತ್ತಿದ ಬಾಂಗ್ಲಾ, 48 ಓವರ್​ಗಳಲ್ಲಿ 227 ರನ್​ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾ ಪರ ಲಿಟನ್​ ದಾಸ್​ (76 ರನ್​, 66 ಎಸೆತ, 7 ಬೌಂಡರಿ, 2 ಸಿಕ್ಸರ್​), ಮುಶ್ಫಿಕರ್​ ರಹೀಮ್​ (54 ರನ್​, 64 ಎಸೆತ, 4 ಬೌಂಡರಿ), ತೌಹಿದ್ ಹೃದಯೋಯ್ (39 ರನ್​, 61 ಎಸೆತ, 2 ಬೌಂಡರಿ) ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್​​ಮೆನ್​ಗಳು ಕೂಡ ತಂಡಕ್ಕೆ ನೆರವಾಗಲಿಲ್ಲ.

    ಇಂಗ್ಲೆಂಡ್​ ಪರ ಮೊನೆಚಾದ ಬೌಲಿಂಗ್​ ದಾಳಿ ನಡೆಸಿದ ರೀಸ್ ಟೋಪ್ಲಿ 10 ಓವರ್​ಗಳಲ್ಲಿ 1 ಮೇಡನ್​ ಎಸೆದು ಕೇವಲ 43 ರನ್​ ನೀಡಿ 4 ವಿಕೆಟ್​ ಕಬಳಿಸಿದರು. ಕ್ರಿಸ್​ ವೋಕ್ಸ್​ 2 ವಿಕೆಟ್​ ಪಡೆದು ಗಮನ ಸೆಳೆದರು. ಉಳಿದಂತೆ ಸ್ಯಾಮ್​ ಕರನ್​, ಮಾರ್ಕ್​ವುಡ್​, ಆದಿಲ್​ ರಶೀದ್​ ಮತ್ತು ಲಿಯಾಮ್​ ಲಿವಿಂಗ್​ಸ್ಟೋನ್​ ತಲಾ ಒಂದೊಂದು ವಿಕೆಟ್​ ಪಡೆದರು. (ಏಜೆನ್ಸೀಸ್​)

    ಇಸ್ರೇಲ್​-ಹಮಾಸ್​ ಯುದ್ಧ: ನಿಜವಾಗುತ್ತಾ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾರ ಭವಿಷ್ಯವಾಣಿ?

    ಬದಲಾಗದ ಟ್ರುಡೊ…ಭಾರತದ ವಿರುದ್ಧ ಅರಬ್​ ರಾಷ್ಟ್ರಗಳನ್ನು ಎತ್ತಿಕಟ್ಟುವ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts