More

    ಬದಲಾಗದ ಟ್ರುಡೊ…ಭಾರತದ ವಿರುದ್ಧ ಅರಬ್​ ರಾಷ್ಟ್ರಗಳನ್ನು ಎತ್ತಿಕಟ್ಟುವ ಯತ್ನ

    ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅನುಸರಿಸುತ್ತಿರುವ ಭಾರತ ವಿರೋಧಿ ಧೋರಣೆಯಲ್ಲಿ ಬದಲಾವಣೆ ಲಕ್ಷಣ ಕಂಡುಬರುತ್ತಿಲ್ಲ. ಖಲೀಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಆರೋಪಿಸಿತ್ತ ಬಂದಿದ್ದ ಟ್ರುಡೊ ಈಗ ಇದೇ ವಿಷಯವಾಗಿ ಯುನೈಟೆಡ್ ಅರಬ್​ ಎಮಿರೇಟ್ಸ್​ನ ಸದಸ್ಯರಾಷ್ಟ್ರ ಜೋರ್ಡಾನ್ ರಾಜ ಅಬ್ದುಲ್ಲಾ ಬಿನ್​ ಅಲ್​ ಹುಸೇನ್​ ಜತೆ ಸೋಮವಾರ ದೂರವಾಣಿಯಲ್ಲಿ ಚರ್ಚಿದ್ದಾರೆ.

    ಕೆನಡಾ ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ಸಂಭಾಷಣೆಯ ಸಮಯದಲ್ಲಿ ಅವರು “ಕಾನೂನು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ವಿಯೆನ್ನಾ ಒಪ್ಪಂದದಂತೆ ಎಲ್ಲರಾಷ್ಟ್ರಗಳೂ ಗೌರವಿಸುವ ಅಗತ್ಯವಿದೆ. ಇದರ ಪ್ರಾಮುಖ್ಯತೆ ಕುರಿತು ಟ್ರುಡೊ ಒತ್ತಿಹೇಳಿದ್ದಾರೆ.

    ಇದನ್ಇನೂ ಓದಿ: ಇಸ್ರೇಲ್​ ಪ್ರಧಾನಿ ಜತೆ ನರೇಂದ್ರ ಮೋದಿ ಸಂಭಾಷಣೆ; ”ಭಾರತ ಇಸ್ರೇಲ್​ ಜೊತೆ ನಿಂತಿದೆ” ಎಂದು ಧೈರ್ಯದ ಮಾತುಗಳು

    ದೊಂದು ಭಾರತದ ವಿರುದ್ಧ ಟ್ರುಡೊ ಮಾಡುತ್ತಿರುವ ಮತ್ತೊಂದು ಪ್ರಚೋದನೆಯಾಗಿದೆ ಎಂದು ಭಾರತ ಭಾವಿಸುತ್ತದೆ. ಆದರೆ. ಟ್ರೂಡೊ ಸೋಮವಾರ ಜೋರ್ಡಾನ್ ರಾಜನಿಗೆ ಕೆನಡಾ ಮತ್ತು ಭಾರತದ ನಡುವಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
    ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಭಾರತ ಮತ್ತು ಕಾನೂನನ್ನು ಎತ್ತಿಹಿಡಿಯುವ ಪ್ರಾಮುಖ್ಯತೆ ಕುರಿತು ಟ್ರೂಡೊ ಸೋಮವಾರ ಮಾತನಾಡಿದ್ದರು. ಇದಾದ ಒಂದು ದಿನದ ಬಳಿಕ ಜೋರ್ಡಾನ್ ರಾಜ ಅಬ್ದುಲ್ಲಾ ಅವರೊಂದಿಗೆ ಅದೇ ರೀತಿಯಲ್ಲಿ ಮಾತನಾಡಿದ್ದಾರೆ.

    ಅಬ್ದುಲ್ಲಾ ಜತೆ ಚರ್ಚೆಯ ಇತರ ವಿಷಯಗಳು:
    ಜೋರ್ಡಾನ್ ರಾಜ ಅಬ್ದುಲ್ಲಾ ಬಿನ್ ಅಲ್ ಹುಸೇನ್ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಕೆನಡಾದ ಪ್ರಧಾನಿ ಟ್ರುಡೊ ಇಸ್ರೇಲ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದರು. ಇಸ್ರೇಲ್‌ನ ಮೇಲೆ ಹಮಾಸ್‌ನ ದೊಡ್ಡ ಪ್ರಮಾಣದ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಿದ ಅವರು, “ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಕೆನಡಾ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದರು.

    ಹಮಾಸ್​ ಉಗ್ರರು ಎಸಗಿರುವ ದೌರ್ಜನ್ಯಗಳನ್ನು ಖಂಡಿಸುತ್ತೇವೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಪುನಃಸ್ಥಾಪಿಸಲು ಕೆನಡಾ ತನ್ನ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಉಭಯ ನಾಯಕರು ಇಸ್ರೇಲ್-ಹಮಾಸ್​ ನಡುವಿದ ಉದ್ಧಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ಕೆನಡಾ ಮೂಲದ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ 18 ಜೂನ್ 2023ರ ಜೂನ್​ 18ರಂದು ಕೆನಡಾದಲ್ಲಿ ಅಪರಿಚಿತರು ಕೊಂದುಹಾಕಿದ್ದರು. ಈ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ಗಮನಾರ್ಹವಾಗಿ ಹದಗೆಟ್ಟಿದೆ, ಕೆನಡಾದ ಸರ್ಕಾರವು ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿ, ಹತ್ಯೆಯಲ್ಲಿ ನವದೆಹಲಿಯ ಪಾತ್ರವಿದೆ ಎಂದು ಆರೋಪಿಸಿತ್ತು. ಭಾರತವು ಇದನ್ನು ತಿರಸ್ಕರಿಸಿದ್ದಷ್ಟೇ ಅಲ್ಲದೆ ‘ಅಸಂಬದ್ಧ’ ಮತ್ತು ‘ಪ್ರಚೋದಿತ’ ತಿರುಗೇಟು ನೀಡಿತ್ತು. ನಂತರ ಭಾರತ ಸಹ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.

    ಹಮಾಸ್‌ ಉಗ್ರರ ದಾಳಿ ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts