More

    ಇಸ್ರೇಲ್​ ಪ್ರಧಾನಿ ಜತೆ ನರೇಂದ್ರ ಮೋದಿ ಸಂಭಾಷಣೆ; ”ಭಾರತ ಇಸ್ರೇಲ್​ ಜೊತೆ ನಿಂತಿದೆ” ಎಂದು ಧೈರ್ಯದ ಮಾತುಗಳು

    ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಾರೆ. ಭಾರತವು ಎಲ್ಲಾ ಆಯಾಮಗಳಲ್ಲಿಯೂ ಭಯೋತ್ಪಾದನೆಯನ್ನು ಖಂಡಿಸುತ್ತದೆ. ನಾವು ಭಯೋತ್ಪಾದಕರಿಗೆ ಕಿಂಚಿತ್ತು ಕುಮ್ಮಕ್ಕು ನೀಡೋದಿಲ್ಲ ಎಂದಿದ್ದಾರೆ ಭಾರತದ ಪ್ರಧಾನಿ.


    ಈ ಕುರಿತಂತೆ ಎಕ್ಸ್​​(ಟ್ವಿಟ್ಟರ್​​)ನಲ್ಲಿ ಪೋಸ್ಟ್​​ ಒಂದನ್ನ ಮಾಡಿದ ಅವರು, ಭಾರತದ ಜನರು ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಇಸ್ರೇಲ್‌ನೊಂದಿಗೆ ದೃಢವಾಗಿ ನಿಂತಿದ್ದೇವೆ. ಭಾರತವು ಭಯೋತ್ಪಾದನೆಯನ್ನು ಖಂಡಿಸುತ್ತೇವೆ ಎಂದು ಅದರಲ್ಲಿ ಬರೆಯಲಾಗಿದೆ.


    ಇಸ್ರೇಲ್ ಮೇಲೆ ಹಮಾಸ್‌ ಅನಿರೀಕ್ಷಿತ ದಾಳಿ ನಡೆಸಿದ್ದು, ಅಕ್ಟೋಬರ್ 7 ರಂದು ಪ್ರಾರಂಭವಾದ ಸಂಘರ್ಷವು ಇಒಲ್ಲಿಯವೆರೆಗೆ ,600 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇಸ್ರೇಲ್‌ನಲ್ಲಿ ಕನಿಷ್ಠ 00 ಜನರು ಸಾವನ್ನಪ್ಪಿ 2600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.


    ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲಿ ದಾಳಿಯಲ್ಲಿ, 143 ಮಕ್ಕಳು ಮತ್ತು 105 ಮಹಿಳೆಯರು ಸೇರಿದಂತೆ 704 ಜನರು ಸಾವನ್ನಪ್ಪಿದ್ದಾರೆ ಮತ್ತು 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.


    ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಗೆ ಸಹಾಯ ಮಾಡುತ್ತಿದ್ದು, ಹಮಾಸ್ ಭಯೋತ್ಪಾದಕ ಗುಂಪುಗಳು ಸತತ ಮೂರನೇ ದಿನವೂ ಇಸ್ರೇಲ್ ಮೇಲೆ ದಾಳಿ ಮುಂದುವರೆಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts