More

    ಲಕ್ಕುಂಡಿಯಲ್ಲಿ ಅಲ್ಲಮಪ್ರಭು ದೇವರಮಠದ ರಥೋತ್ಸವ

    ವಿಜಯವಾಣಿ ಸುದ್ದಿಜಾಲ ಗದಗ
    ತಾಲೂಕಿನ ಲಕ್ಕುಂಡಿ ಗ್ರಾಮದ ಅಲ್ಲಪ್ರಭುದೇವರ ಮಠದ ಲಿಂಗೈಕ್ಯ ಬಸವರಾಜೇಂದ್ರ ಮಹಾಸ್ವಾಮಿಜಿಗಳ 12 ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಥೋತ್ಸವವು ಭಕ್ತಿ ಭಾವದ ಮಧ್ಯೆ ಇತ್ತಿಚೆಗೆ ಸಂಭ್ರಮದಿಂದ ಜರುಗಿತು.
    ಮಠದಿಂದ ಚೌಕಿಮಠದವರೆಗೂ ಸಾಗಿದ ರಥಕ್ಕೆ ಭಕ್ತಾಧಿಗಳು ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ಸರ್ಮಪಿಸಿದರು. ಡೊಳ್ಳು ಮೇಳ, ಜಾಂಜಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಹರ ಹರ ಮಹಾದೇವ, ಬಸವರಾಜ ಸ್ವಾಮೀಜಿ ಜೈ ಎಂಬ ಘೋಷಣೆಗಳು ಮೊಳಗಿದವು. ಮಠದ ಸಿದ್ಧಲಿಂಗೇಶ್ವರ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
    ಇದಕ್ಕೂ ಪೂರ್ವ ಅಲ್ಲಮಪ್ರಭುದೇವರ ಹಾಗೂ ಬಸವರಾಜೇಂದ್ರ ಸ್ವಾಮೀಜಿಗಳ ಗದ್ದುಗೆಗೆ ಅಭೀಷೇಕ, ವಿಶೇಷ ಪೂಜೆ ನೆರವೇರಿತು. ನಂತರ ಸಾಮೂಹಿಕ ವಿವಾಹಗಳು ಹೊಸಳ್ಳಿ ಬೂದೀಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿದವು. ಸುಮಂಗಲಿಯರಿಂದ ರ್ಪೂಣ ಕುಂಭ ಮೆರವಣಿಗೆ, ಅಡ್ಡಪಲ್ಲಕ್ಕಿ ಮಹೋತ್ಸವವು ಜರುಗಿತು. ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮ ತಾಯಿ ಅವರು ಪ್ರವಚನದೊಂದಿಗೆ ಕಾರ್ಯಕ್ರಮ ಮಂಗಲಗೊಳಿಸಿದರು.
    ಆಧಿಶಕ್ತಿ ಬಳಗದ ಮಹಿಳೆಯರಿಂದ ಲಲಿತಾ ಸಹಸ್ರ ನಾಮವಳಿಯನ್ನು ಪಠಣ ಜರುಗಿತು. ಹರ್ಲಾಪೂರ ಕೊಟ್ಟೂರೇಶ್ವರ ಮಠದ ಶ್ರೀಗಳು, ಹೊಸರಿತ್ತಿಯ ಗುದ್ದಲಿಶ್ವರ ಶ್ರೀಗಳು, ಸಿದ್ಧಲಿಂಗೇಶ್ವರ ಶ್ರೀಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts