More

    4ಜಿ ಸ್ಮಾರ್ಟ್​ಫೋನ್​ ಬಳಕೆದಾರರೇ ಇನ್ನೆರಡು ವರ್ಷ ನಿಮಗಿಲ್ಲ ಚಿಂತೆ..!

    ನವದೆಹಲಿ: ಮಾರುಕಟ್ಟೆಯಲ್ಲಿ ಹೊಸತು ಬಂದಾಗ ಆಸೆಗೆ ಬಿದ್ದು ಹಲವರು ಸ್ಮಾರ್ಟ್​ಫೋನ್​ಗಳನ್ನು ಬದಲಾಯಿಸುತ್ತಾರೆ. ಅದು ಅವರ ಇಷ್ಟ ಎಂದುಕೊಂಡು ಸುಮ್ಮನಾಗಬಹುದು. ಆದರೆ, ನೆಟ್ವರ್ಕ್​ ಬದಲಾದರೆ?… ಫೋನ್ ಬದಲಾಯಿಸುವುದು ಅನಿವಾರ್ಯವಾಗುತ್ತದೆ.

    ಅಂಥದ್ದೇ ಪರಿಸ್ಥಿತಿ ಈ ವರ್ಷ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಅಂದರೆ, 4ಜಿ ಹೋಗಿ 5ಜಿ ನೆಟ್ವರ್ಕ್​ ಶುರುವಾಗುತ್ತೆ ಎಂದೇ ಹೇಳಲಾಗಿತ್ತು. ಸದ್ಯ ಅಂಥ ಆತಂಕವೇನೂ ಇಲ್ಲ, 4ಜಿ ಮೊಬೈಲ್​ ಬಳಕೆದಾರರು ತಮ್ಮ ಮೊಬೈಲ್​ಗಳನ್ನು ಇನ್ನೆರಡು ವರ್ಷ ಯಾವುದೇ ಚಿಂತೆಯಿಲ್ಲದೇ ಬಳಸಬಹುದು. ಏಕೆಂದರೆ, ಭಾರತದಲ್ಲಿ 5ಜಿ ಸೇವೆ ಇನ್ನೆರಡು ವರ್ಷ ಆರಂಭವಾಗುವ ಯಾವುದೇ ಲಕ್ಷಣಗಳಿಲ್ಲ..!

    ಇದನ್ನೂ ಓದಿ; ಹೀಗೆ ಮಾಡಿದ್ದಕ್ಕೇನಾ ಕರೊನಾವನ್ನು ಕಟ್ಟಿ ಹಾಕಿದ್ದು ಚೀನಾ?

    ಹೌದು…. ಈ ವೇಳೆಗಾಗಲೇ ಹಲವು ದೂರಸಂಪರ್ಕ ಕಂಪನಿಗಳು 5ಜಿ ಪರೀಕ್ಷಾರ್ಥ ಪ್ರಯೋಗದಲ್ಲಿ ತೊಡಗಿರಬೇಕಿತ್ತು. ಆದರೆ, ಈಗ ಎಲ್ಲವೂ ಅನಿಶ್ಚಿತವಾಗಿದ್ದು, 5ಜಿ ಸೇವೆ ಆರಂಭವಾಗುವುದು ಕನಿಷ್ಠ ಎರಡು ವರ್ಷ ವಿಳಂಬವಾಗುವ ಸಾಧ್ಯತೆಗಳಿವೆ.
    5ಜಿ ತರಂಗಗಳಿಗೆ ಅತಿ ಹೆಚ್ಚಿನ ಮೂಲ ಬೆಲೆಯನ್ನು ನಿಗದಿಪಡಿಸಿರುವುದು ಹಾಗೂ ಭಾರತದಲ್ಲಿ 5ಜಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ತೊಡಗಿಕೊಳ್ಳುವ ಬಗ್ಗೆ ಚೀನಾದ ಹುವೈ ಕಂಪನಿ ಈವರೆಗೂ ನಿರ್ಧಾರ ಕೈಗೊಳ್ಳದಿರುವುದು ಈ ವಿಳಂಬಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

    ಟೆಲಿಕಾಂ ಹಾಗೂ ಇತರ ತಾಂತ್ರಿಕ ಕ್ಷೇತ್ರದಲ್ಲಿ ಕೋವಿಡ್​ ಕಾರಣದಿಂದಾಗಿ ನಿಗದಿಯಂತೆ ಯೋಜನೆಗಳು ಸಾಗುತ್ತಿಲ್ಲ. ಜತೆಗೆ ದೂರಸಂಪರ್ಕ ಇಲಾಖೆ ಕಳೆದ ವಾರ 5ಜಿ ತರಂಗಗಳ ಹರಾಜು ಪ್ರಕ್ರಿಯೆಗಳ ಬಗ್ಗೆ ಟೆಲಿಕಾಂ ಕಂಪನಿಗಳ ಜತೆಗೆ ಮಾತುಕತೆ ನಡೆಸಿತ್ತು. 2021ರವರೆಗೆ ಹರಾಜು ಪ್ರಕ್ರಿಯೆ ನಡೆಸಲು ಸಾಧ್ಯವಾಗದ ಬಗ್ಗೆ ಚರ್ಚಿಸಿತ್ತು. ಹರಾಜು ಪ್ರಕ್ರಿಯೆಗೆ ಮುಂದೂಡಲ್ಪಟ್ಟರೆ ಅದಕ್ಕೆ ಸಂಬಂಧಿಸಿದ ಉಳಿದ ಕೆಲಸಗಳು ಮುಂದೂಲ್ಪಡಲಿವೆ. ಹೀಗಾಗಿ 2022ರವರೆಗೆ ಭಾರತದಲ್ಲಿ 5ಜಿ ಸೇವೆ ಆರಂಭವಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ; ಬಸ್​ ಸಂಚಾರ, ವಿಮಾನ ಹಾರಾಟ ಆರಂಭ ನಿರೀಕ್ಷೆ; ಲಾಕ್​ಡೌನ್​ 4.0ನಲ್ಲಿ ಸಿಗಲಿದೆ ಇನ್ನಷ್ಟು ವಿನಾಯ್ತಿ 

    ಸದ್ಯ ಭಾರತದ ಆರ್ಥಿಕತೆಯೂ ಮಂದಗತಿಯಲ್ಲಿದೆ. ಹೀಗಿರುವಾಗ 5ಜಿ ತರಂಗದ ಮೂಲ ಬೆಲೆಯನ್ನು ಘಟಕವೊಂದಕ್ಕೆ 492 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ. ಇದು ಹಲವು ಕಂಪನಿಗಳು ಹಿಂದೆ ಸರಿಯುವಂತೆ ಮಾಡಿದೆ. ಇದಲ್ಲದೇ, ಸಾವಿರಾರು ಕೊಟಿ ರೂ. ನಿವ್ವಳ ಆದಾಯದಲ್ಲಿ ಪಾಲು ನೀಡಬೇಕಿರುವ ಕಂಪನಿಗಳು ತೀರಾ ಸಂಕಷ್ಟದಲ್ಲಿವೆ. ಇದೇ ಕಾರಣಕ್ಕೆ ಹಿಂದೊಮ್ಮೆ ಭಾರತದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲು ಹೊಂದಿದ್ದ ವೋಡಾಫೋನ್​-ಐಡಿಯಾ ಕಂಪನಿ ಮುಚ್ಚುವ ಹಂತಕ್ಕೆ ತಲುಪಿತ್ತು.

    ಇದಲ್ಲದೇ, 5ಜಿ ಸೇವೆಗೆ ಮೂಲ ಸೌಕರ್ಯ ಕಲ್ಪಿಸಬೇಕಿರುವ ಹುವೈ ಕಂಪನಿ ಭಾರತದಲ್ಲಿ ಈ ಕಾರ್ಯಕ್ಕೆ ಕೈಜೋಡಿಸುತ್ತದೆಯೇ ಎಂಬ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಈ ಎಲ್ಲ ಕಾರಣಗಳಿಂದಾಗಿ ಭಾರತದಲ್ಲಿ 5ಜಿ ಸೇವೆ ಆರಂಭ ಇನ್ನೆರಡು ವರ್ಷ ವಿಳಂಬವಾಗುವುದಂತೂ ಖಚಿತ.

    ಶಾಲೆಗಳಲ್ಲಿ ಶುರುವಾಗಲಿದೆ ಶಿಫ್ಟ್​, ಎರಡು ದಿನಕ್ಕೊಮ್ಮೆ ಕ್ಲಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts