More

    ಕರೊನಾ ನಿಯಂತ್ರಣಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ ಮನೆ ಮನೆಗೆ ಆರೋಗ್ಯ ಸಮೀಕ್ಷೆ

    ಬೆಂಗಳೂರು: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆಗೆ ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ವಿಕಾಸ ಸೌಧದಲ್ಲಿ ಬೆಂಗಳೂರು ನಗರ, ಗ್ರಾಮಾಂತರ‌ ಜಿಲ್ಲಾ ಆಡಳಿತಗಳು, ಬಿಬಿಎಂಪಿ ಹಾಗೂ ಇಲಾಖೆಯ ಅಧಿಕಾರಿಗಳ ಜತೆ ಗುರುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ಕಾರ್ಯಕ್ಕಾಗಿ 8,500 ಬೂತ್ ಗಳಲ್ಲಿ ತಲಾ 1 ಕಾರ್ಯಪಡೆ ರಚಿಸಲಾಗುವುದು. ಪ್ರತಿ ಮನೆಗೆ ಭೇಟಿ ನೀಡಿ ಸೋಂಕಿತರಿದ್ದರೆ ತಪಾಸಣೆ, ಮಾರ್ಗದರ್ಶನ, ಐಸೋಲೇಷನ್ ಗೆ ಒಳಗಾದವರ ಮೇಲೆ ನಿಗಾ, ವಿಷಮಶೀತಜ್ವರ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಪತ್ತೆಗೆ ಈ ಕಾರ್ಯಪಡೆಗಳು ಆರೋಗ್ಯ ಸಮೀಕ್ಷೆ ನಡೆಸಲಿವೆ ಎಂದು ವಿವರಿಸಿದರು.

    ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ಸಿನಿಮಾ ನಿರ್ದೇಶಕನ ಹೆಂಡತಿ, ಮಗಳು

    ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನದ ಪರೀಕ್ಷೆ ಪ್ರಮಾಣವನ್ನು40,000 ದಿಂದ 1. ಲಕ್ಷಕ್ಕೆ ಏರಿಸಲು ಸೂಚಿಸಲಾಗಿದೆ. ಜನರು ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸರ್ಕಾರಕ್ಕೆ ಸಹಕರಿಸಬೇಕು ಎಂದು ಸುಧಾಕರ್ ಮನವಿ ಮಾಡಿದರು.

    VIDEO: ಮಗಳ ಜತೆ ಹನಿಮೂನ್​ ಟ್ರಿಪ್​, ಮದುವೆಗೆ ಮುಂಚೆ ಗರ್ಭಿಣಿ… ಈಗ ಮತ್ತೆ ಸುದ್ದಿಯಲ್ಲಿದ್ದಾರೆ ನಟಿ ದಿಯಾ

    ಮೂವತ್ತು ವರ್ಷಗಳ ನಂತರ ತನ್ನದೇ ದಾಖಲೆ ಮುರಿದು ಉಗುರು ಕತ್ತರಿಸಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts