More

    ‘ಸರ್ಜಿಕಲ್​ ಮಾಸ್ಕ್​ ನಿಮಗ್ಯಾಕೆ? ಈ ಮಾಸ್ಕ್ ಹಾಕದೆ ನಮ್ಮನ್ನು ರಕ್ಷಿಸಿ’ ವೈದ್ಯರ ಮನವಿ

    ಬೆಂಗಳೂರು: ಕರೊನಾ ಆರಂಭವಾದಾಗಿನಿಂದ ಮಾಸ್ಕ್​ ಕಡ್ಡಾಯವಾಗಿಬಿಟ್ಟಿದೆ. ಮನೆಯಲ್ಲೂ ಮಾಸ್ಕ್​ ಹಾಕಿಕೊಳ್ಳುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಅದರಲ್ಲೂ ಬಳಸಿ ಬಿಸಾಡುವ ನೀಲಿ ಬಣ್ಣದ ಸರ್ಜಿಕಲ್​ ಮಾಸ್ಕ್​ ಅತಿ ಹೆಚ್ಚು ಬಳಕೆಯಲ್ಲಿದೆ. ಆದರೆ ಈ ಮಾಸ್ಕ್​ ಬಳಕೆ ಎಷ್ಟರ ಮಟ್ಟಿಗೆ ಸರಿ?

    ಹೌದು! ಇಂತದ್ದೊಂದು ಪ್ರಶ್ನೆ ಇದೀಗ ಮೂಡಿದೆ. ಸಾಮಾನ್ಯವಾಗಿ ಈ ಸರ್ಜಿಕಲ್​ ಮಾಸ್ಕ್​ ಅನ್ನು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಾಗಿಯೇ ತಯಾರಿಸಲಾಗುತ್ತದೆ. ಆಪರೇಷನ್​ ಮಾಡುವ ವೇಳೆ ಅಥವಾ ಬೇರೆ ಯಾವುದೋ ಸೋಂಕಿತ ವ್ಯಕ್ತಿಯ ಪರೀಕ್ಷೆ ಮಾಡುವ ವೇಳೆ ಧರಿಸಲೆನ್ನುವ ಉದ್ದೇಶದಿಂದ ಮಾಡಲಾಗುತ್ತದೆ. ಆದರೆ ಕರೊನಾ ಬಂದಾಗಿನಿಂದ ಈ ಮಾಸ್ಕ್​ ಪ್ರತಿಯೊಬ್ಬರ ಬಳಕೆಗೆ ಬಂದುಬಿಟ್ಟಿದೆ. ಉತ್ಪಾದನೆಯಾಗುತ್ತಿರುವ ಸರ್ಜಿಕಲ್​ ಮಾಸ್ಕ್​ಗಳು ಆಸ್ಪತ್ರೆಗಳಿಗಿಂತ ಹೊರಗಡೆಯೇ ಹೆಚ್ಚಾಗಿ ಮಾರಾಟವಾಗುತ್ತಿದೆ. ಇದರಿಂದಾಗಿ ಆಸ್ಪತ್ರೆಗಳಿಗೆ ಬೇಕಾದ ಸಮಯಕ್ಕೆ ಮಾಸ್ಕ್​ ಸಿಗದೇ ಹೋಗಬಹುದು. ಇದರಿಂದ ಕರೊನಾ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ತುತ್ತಾಗಿ ಸಾವನ್ನಪ್ಪಬಹುದು ಎನ್ನುತ್ತಾರೆ ಡಾ. ದೇವಿ ಪ್ರಸಾದ್​ ಶೆಟ್ಟಿ.

    ಈ ಸರ್ಜಿಕಲ್​ ಮಾಸ್ಕ್​ಗಳನ್ನು ಆರು ಗಂಟೆಗಳ ಕಾಲ ಧರಿಸಬಹುದು. ಸಾಮಾನ್ಯ ಜನರು ಈ ಮಾಸ್ಕ್​ನ್ನು ಧರಿಸಿ ನಗರವನ್ನೆಲ್ಲ ಸುತ್ತಾಡಿ ಬಂದು, ಆಮೇಲೆ ಆ ಮಾಸ್ಕ್​ನ್ನು ಮನೆಯಲ್ಲಿ ಹಾಗೇ ಇಟ್ಟರೆ ಅದನ್ನು ಮಕ್ಕಳು ಅಥವಾ ಬೇರಾದರೂ ಮುಟ್ಟಿದರೆ ಅವರಿಗೂ ಸೋಂಕು ಹರಡಬಹುದು. ಒಣ ಕಸದೊಂದಿಗೆ ಹಾಕಿ ಕಳಿಸಿದರೆ, ಅದರಿಂದ ಕಸ ತೆಗೆದುಕೊಂಡು ಹೋಗುವವರಿಗೂ ಹಾಗೂ ಅದನ್ನು ಮರುಬಳಕೆ ಮಾಡುವ ಕೆಲಸಗಾರರಿಗೂ ಸೋಂಕು ಹರಡಬಹುದು ಎನ್ನುವುದು ವೈದ್ಯರ ಅಭಿಪ್ರಾಯ.

    ಸರ್ಜಿಕಲ್​ ಮಾಸ್ಕ್​ ಬದಲಾಗಿ ಬಟ್ಟೆಯಿಂದ ಮಾಡಿರುವ ಮಾಸ್ಕ್​ ಬಳಸಬಹುದು. ಬಟ್ಟೆಯಲ್ಲೂ ಸೋಂಕು ತಡೆಯುವ ಶಕ್ತಿ ಇರುವುದರಿಂದ ಸಾಮಾನ್ಯರಿಗೆ ಬಟ್ಟೆ ಮಾಸ್ಕ್​ ಸರ್ಜಿಕಲ್​ ಮಾಸ್ಕ್​ ರೀತಿಯಲ್ಲೇ ಕೆಲಸ ಮಾಡುತ್ತದೆ. ಆದ್ದರಿಂದ ಅದನ್ನೇ ಬಳಕೆ ಮಾಡಿ, ಸುರಕ್ಷಿತವಾಗಿರಿ ಎನ್ನುತ್ತಾರ ವೈದ್ಯಕೀಯ ವಲಯದವರು. (ಏಜೆನ್ಸೀಸ್)

    ತನ್ನ ಮನೆಗೆ ತಾನೇ ಬೆಂಕಿ ಹಚ್ಚಿ ಅರಾಮಾಗಿ ಕುಳಿತು ನೋಡಿದ ಮಹಿಳೆ! ವಿಚಿತ್ರ ವರ್ತನೆಯ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts