More

    ಸಚಿನ್​ಗೆ ಏನೂ ಅನ್ನಲು ಹೋಗಬೇಡಿ… ಅಂದಿರಿ ಎಂದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ… ಯಾರು, ಯಾರಿಗೆ ಎಚ್ಚರಿಸಿದ್ದರು?

    ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸಚಿನ್​ ತೆಂಡುಲ್ಕರ್​ ಕ್ರಿಕೆಟ್​ ದೇವರು ಎಂದೇ ಪ್ರಖ್ಯಾತರು. ಬದ್ಧವೈರಿ ಪಾಕಿಸ್ತಾನ ಸೇರಿ ಎದುರಾಳಿ ತಂಡದವರು ಕೂಡ ಇವರನ್ನು ಗೌರವಿಸುತ್ತಿದ್ದರು. ಆದರೂ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆಟಗಾರರು ಕೆಲವೊಮ್ಮೆ ಸಚಿನ್​ಗೆ ಸ್ಲೆಡ್ಜ್​ ಮಾಡಿ ಸಾಕಷ್ಟು ಪೆಟ್ಟು ತಿಂದಿದ್ದಾರೆ.

    ಹಾಗಾಗಿ, ಸಚಿನ್​ ತೆಂಡುಲ್ಕರ್​ ಅವರಿಗೆ ಏನೂ ಅನ್ನಲು ಹೋಗಬೇಡಿ… ಅಂದಿರಿ ಎಂದರೆ ಪಶ್ಚಾತ್ತಾಪ ಪಡುವುದು ಗ್ಯಾರಂಟಿ ಎಂದು ಆಸ್ಟ್ರೇಲಿಯಾ ತಂಡದ ಬೌಲಿಂಗ್​ ಕ್ಯಾಪ್ಟನ್​ ಆಗಿರುತ್ತಿದ್ದವರು ತಮ್ಮ ತಂಡದ ಯುವ ಬೌಲರ್​ಗಳಿಗೆ ಎಚ್ಚರಿಕೆ ನೀಡುತ್ತಿದ್ದಂತೆ!

    ಈ ವಿಷಯವನ್ನು ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್​ ಲೀ ಹೇಳಿದ್ದಾರೆ. ನಾನು ಅದೇ ತಾನೆ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದೆ. ಆಗ ಗ್ಲೆನ್​ ಮೆಕ್​ಗ್ರಾಥ್​ ನಮ್ಮ ತಂಡದ ಬೌಲಿಂಗ್​ ಕ್ಯಾಪ್ಟನ್​ ಆಗಿದ್ದರು. ಅವರು ತಂಡಕ್ಕೆ ಯಾರೇ ಹೊಸಬ ಬೌಲರ್​ ಬರಲಿ, ಅದು ಮಿಚೆಲ್​ ಜಾನ್ಸನ್​ ಇರಲಿ ಅಥವಾ ಬೇರೆ ಯಾರೇ ಆಗಿರಲಿ ಒಂದು ಮಾತನ್ನು ಮೊದಲಿಗೆ ಸ್ಪಷ್ಟಪಡಿಸುತ್ತಿದ್ದರು. ನೀವು ಯಾರಿಗಾದರೂ ಸ್ಲೆಡ್ಜ್​ ಮಾಡಿ, ಆದರೆ, ಭಾರತದ ಸಚಿನ್​ ತೆಂಡುಲ್ಕರ್​ ಎದುರು ಮಾತ್ರ ಇಂಥ ತಂತ್ರಗಾರಿಕೆ ಅನುಸರಿಸಬೇಡಿ. ಅವರನ್ನು ದುರುಗುಟ್ಟಿಕೊಂಡು ನೋಡಬೇಡಿ. ಹಾಗೇನಾದರೂ ಮಾಡಿದರೆ, ಕೊನೆಯಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳುತ್ತಿದ್ದರು ಎಂದು ಬ್ರೆಟ್​ ಲೀ ತಿಳಿಸಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಕಗಳ ಶತಕ ಸಾಧನೆ ಮಾಡಿರುವ ಸಚಿನ್​ ತೆಂಡುಲ್ಕರ್​ ಅವರ ಆಸ್ಟ್ರೇಲಿಯಾ ವಿರುದ್ಧದ ಸಾಧನೆಯನ್ನು ಗಮನಿಸಿದಾಗ ಮೆಕ್​ ಗ್ರಾಥ್​ ಮಾತಿನಲ್ಲಿ ಸತ್ಯ ಇದೆ ಎಂಬುದು ಸ್ಪಷ್ಟವಾಗುತ್ತದೆ.

    ಮೆಕ್​ಗ್ರಾಥ್​, ಬ್ರೆಟ್​ ಲೀ, ಶೇನ್​ ವಾರ್ನ್​ ಸೇರಿ ಆಸೀಸ್​ನ ಘಟಾನುಘಟಿ ಬೌಲರ್​ಗಳನ್ನು ಚೆಂಡಾಡಿರುವ ಕ್ರಿಕೆಟ್​ ದೇವರು, 39 ಟೆಸ್ಟ್​ಗಳಿಂದ 55ರ ಸರಾಸರಿಯಲ್ಲಿ 11 ಶತಕಗಳು ಒಳಗೊಂಡಂತೆ 3,630 ರನ್​ ಗಳಿಸಿದ್ದಾರೆ. 71 ಏಕದಿನ ಪಂದ್ಯಗಳಿಂದ 9 ಶತಕಗಳು ಸೇರಿ 3,077 ರನ್​ಗಳನ್ನು ಗಳಿಸಿದ್ದಾರೆ.

    ಕೆ.ಎಲ್​. ರಾಹುಲ್​ಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ವ್ಯಕ್ತಿಯೊಬ್ಬರು ಟೀಮ್​ ಇಂಡಿಯಾದಲ್ಲಿದ್ದಾರೆ ಅಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts