More

    ಕೆ.ಎಲ್​. ರಾಹುಲ್​ಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ವ್ಯಕ್ತಿಯೊಬ್ಬರು ಟೀಮ್​ ಇಂಡಿಯಾದಲ್ಲಿದ್ದಾರೆ ಅಂತೆ!

    ನವದೆಹಲಿ: ತಂಡ ಕ್ರೀಡೆಗಳಲ್ಲಿ ವೈಯಕ್ತಿಕ ಆಟಕ್ಕಿಂತ ಸಾಂಘಿಕ ಶ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಹೀಗಿದ್ದರೂ, ಕೆಲವರು ತಂಡಕ್ಕಿಂತ ವೈಯಕ್ತಿಕ ಲಾಭಕ್ಕೆ ಹೆಚ್ಚಿನ ಒತ್ತು ನೀಡಿ ಆಡುವ ಮನೋಭಾವ ಹೊಂದಿರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಭಾರತ ಕ್ರಿಕೆಟ್​ ತಂಡದಲ್ಲಿ ತನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಬಲ್ಲ ವ್ಯಕ್ತಿಯೊಬ್ಬರು ಇರುವುದಾಗಿ ಕರ್ನಾಟಕದ ಆಟಗಾರ ಕೆ.ಎಲ್​. ರಾಹುಲ್​ ಹೇಳಿಕೊಂಡಿದ್ದಾರೆ.

    ಅವರೇ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಎಂದು ರಾಹುಲ್​ ತಿಳಿಸಿದ್ದಾರೆ. ಟಿವಿ ನಿರೂಪಕ ಮತ್ತು ವೀಕ್ಷಕ ವಿವರಣೆಕಾರ ಸುಹೈಲ್​ ಚಾಂಡಾಕ್​ ಅವರ ದಿ ಮೈಂಡ್​ ಬಿಹೈಂಡ್​ ಎಂಬ ಕಾರ್ಯಕ್ರಮಕ್ಕೆ ನೀಡಿರುವ ಸಂದರ್ಶನದಲ್ಲಿ ರಾಹುಲ್​ ಈ ಹೇಳಿಕೆ ನೀಡಿದ್ದಾರೆ.

    ಭಾರತ ಕ್ರಿಕೆಟ್​ ತಂಡದ ಯಾವ ಸದಸ್ಯರೊಂದಿಗೆ ಜೀವನವಿಡೀ ಗೆಳೆತನ ಸಾಗಿಸಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಅವರು, ನಾನು ವಿರಾಟ್​ ಕೊಹ್ಲಿ ಅವರ ಹೆಸರು ತೆಗೆದುಕೊಳ್ಳಲು ಬಯಸುತ್ತೇನೆ. ಅವರೊಬ್ಬ ಶ್ರೇಷ್ಠ ಬ್ಯಾಟ್ಸ್​ಮನ್​ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೆ, ಅವರೊಂದಿಗೆ ಆಪ್ತ ಗೆಳೆತನ ಹೊಂದಿದ್ದೇನೆ. ಅವರು ನನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ ಎಂದು ಆತಿಹ್ಯ ಶೆಟ್ಟಿಯಲ್ಲಿ ಅನುರಕ್ತರಾಗಿರುವ ರಾಹುಲ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts