More

    ಮಿಷನರಿ ಶಾಲೆಗೆ ಮಕ್ಕಳನ್ನು ಕಳಿಸಬೇಡಿ, ಹೆಣ್ಣುಮಕ್ಕಳನ್ನು ನಡೆದಾಡುವ ಆಟಂಬಾಂಬುಗಳಂತಾಗಿಸಿ: ಸಾಧ್ವಿ ಪ್ರಜ್ಞಾ ಸಿಂಗ್

    ಶಿವಮೊಗ್ಗ: ಕಾಕತಾಳೀಯ ಎಂಬಂತೆ ಕ್ರಿಸ್​ಮಸ್​​ ದಿನವಾದ ಇಂದು ಶಿವಮೊಗ್ಗದಲ್ಲಿ ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಸಮ್ಮೇಳನ ಹಾಗೂ ಸಾರ್ವಜನಿಕ ಸಭೆ ನಡೆಯುತ್ತಿದ್ದು, ಇದರಲ್ಲಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಉಗ್ರ ಭಾಷಣ ಮಾಡಿದ್ದು, ಹಿಂದೂಗಳು ಮಕ್ಕಳನ್ನು ಮಿಷನರಿಗೆ ಶಾಲೆಗೆ ಕಳುಹಿಸಬಾರದು ಎಂದು ಕರೆ ನೀಡಿದ್ದಾರೆ.

    ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಾಧ್ವಿ ಮಾತನಾಡುತ್ತಿದ್ದು, ಮಿಷನರಿ ಶಾಲೆಗಳಲ್ಲಿ ಮಕ್ಕಳನ್ನು ಕಳಿದರೆ ಅಂತಹವರು ಮುಂದೆ ವೃದ್ಧಾಶ್ರಮಕ್ಕೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸಿ, ಗೀತೋಪದೇಶ, ರಾಮಾಯಣ, ಹನುಮಾನ್ ಚಾಲೀಸಾ ಕಲಿಸಿ, ದೇಶ-ಸಮಾಜದ ರಕ್ಷಣೆಗೆ ನಾವೆಲ್ಲ ಬದ್ಧರಾಗಿರಬೇಕು ಎಂದಿದ್ದಾರೆ.

    ಕಾಂಗ್ರೆಸ್​ನ ಇಲ್ಲಿನ ನಾಯಕರೊಬ್ಬರು ಇತ್ತೀಚೆಗೆ ಹಿಂದೂಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ, ಪೇಟ-ಧೋತಿ ಧರಿಸಲಾರಂಭಿಸಿದ್ದಾರೆ. ಆದರೆ ಅವರ ಪೇಟ ಬೀಳುತ್ತದೆ. ಹಿಂದೂಗಳನ್ನಾಗಿ ಯಾರನ್ನೂ ತಯಾರಿಸಲಾಗುವುದಿಲ್ಲ, ಬದಲಿಗೆ ಜನ್ಮತಃ ಹಿಂದೂಗಳಾಗಿರಬೇಕು. ಮೋದಿ ಸುಮ್ಮನೆ ಪ್ರಧಾನಿಯಾಗಿಲ್ಲ. ಅವರ ಮನದಲ್ಲಿ, ದೇಹದ ಕಣದಲ್ಲಿ ಹಿಂದುತ್ವ ಇದೆ. ಗೋಧ್ರಾ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಮೋದಿಗೆ ಅಮೇರಿಕ ಪ್ರವೇಶ ನಿರಾಕರಿಸಿತು, ಆದರೆ ಇಂದು ಅದೇ ಅಮೇರಿಕ ಮೋದಿಯ ಕೈ ಹಿಡಿದಿದೆ, ಮಾತು ಕೇಳುತ್ತಿದೆ ಎಂದು ಸಾಧ್ವಿ ಹೇಳಿದರು.

    ಈ ಮೊದಲು ದೇಶದ ಮೇಲೆ ಅತಿಕ್ರಮಣವಾಗಿ ನಮ್ಮ ಜನ ಸಾಯುತ್ತಿದ್ದರು, ಹಲ್ಲೆಗೊಳಗಾಗುತ್ತಿದ್ದರು. 2007ರಲ್ಲಿ ಮುಂಬೈ ಮೇಲೆ ದಾಳಿಯಾದಾಗ ಕಾಂಗ್ರೆಸ್‌ ಸರ್ಕಾರ ಪಾಕಿಸ್ತಾನದ ವಿರುದ್ಧ ಮಾತನಾಡುವ ಧೈರ್ಯ ಮಾಡಲಿಲ್ಲ. ಆದರೆ ಈಗ ಹಾಗಲ್ಲ, ಮೋದಿ ಆಡಳಿತದಲ್ಲಿ ನಮ್ಮ ದೇಶದ ಮೇಲೆ ದಾಳಿ ಮಾಡಿದವರಿಗೆ ಸರಿಯಾದ ಪಾಠ ಕಲಿಸಲಾಗುತ್ತಿದೆ ಎಂದು ಸಾಧ್ವಿ ಹೇಳಿದರು.

    ಪ್ರಭು ರಾಮಚಂದ್ರನ ದೇಗುಲ ನಿರ್ಮಾಣ ಗೊಳ್ಳುತ್ತಿದೆ. ಕಾಶಿಯಲ್ಲೂ ಮಹಾದೇವನ ದೇಗುಲವಿದೆ. ಕೋರ್ಟ್​ನಲ್ಲೂ ನ್ಯಾಯ ಸಿಗುತ್ತಿದೆ ಅಂದರೆ ಅಚ್ಛೇದಿನ ಬಂದಿದೆ ಅಂತ. ಹೀಗಾಗಿ ವಿರೋಧಿಗಳು ತಳಮಳಗೊಂಡಿದ್ದಾರೆ. ಭಾರತ ವಿಶ್ವಗುರುವಾಗುವ ಕಾಲ ಸನ್ನಿಹಿತವಾಗಿದೆ. ಇನ್ನು ಮುಂದೆ ಯಾವುದೇ ಅತ್ಯಾಚಾರ, ಅನಾಚಾರ ಆಗಲು ನಾವು ಬಿಡಬಾರದು ಎಂದ ಸಾಧ್ವಿ, ಪ್ರತಿ ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಅದು ಕಾನೂನುಬಾಹಿರ ಎನ್ನಬಹುದು, ಆದರೆ ನಮ್ಮ ರಕ್ಷಣೆಗೆ ಶಸ್ತ್ರ ಬೇಕು, ಅಗತ್ಯ ಪರವಾನಗಿಯೊಂದಿಗೆ ಅದನ್ನು ಇರಿಸಿಕೊಳ್ಳಿ ಎಂದಿದ್ದಾರೆ.

    ಏಕರೂಪ ನಾಗರಿಕ ಸಂಹಿತೆ ಬರಬೇಕು. ಜನಸಂಖ್ಯೆ ನಿಯಂತ್ರಣ ಆಗಲೇಬೇಕು. ಆರೋಗ್ಯಪೂರ್ಣ ಸಮಾಜಕ್ಕೆ ಇದು ಅಗತ್ಯ. ಆದರೆ ಇದಕ್ಕೂ ಕೆಲವರು ವಿರೋಧ ಮಾಡುತ್ತಿದ್ದಾರೆ. ಅದಾಗ್ಯೂ ಹಿಂದೂ ರಾಷ್ಟ್ರ ನಿರ್ಮಾಣ ಆಗಲೇಬೇಕು ಎಂದು ಹೇಳಿದ್ದಾರೆ. ನಾವು ಎಲ್ಲೇ ಇದ್ದರೂ ನಮ್ಮ ಗುರುತನ್ನು ಉಳಿಸಿಕೊಳ್ಳಬೇಕು. ನಮ್ಮ ಜನ್ಮ ಭೂಮಿ ಸ್ವರ್ಗಕ್ಕೆ ಸಮಾನ. ಇದರ ಋಣವನ್ನು ನಾವು ತೀರಿಸಲೇಬೇಕು. ಸತ್ಯ, ಧರ್ಮದ ಮೇಲೆ ನಡೆಯುವವರು ವಿರೋಧಿಗಳಿಗೆ ಕೊಡಬೇಕಾಗಿದೆ.

    ಮೊಘಲರ ಕಾಲದಲ್ಲಿ ವೀರ ಶಿವಾಜಿ ಸೇರಿ ಹಲವರು ವೀರಗತಿ ಪಡೆದಿದ್ದರು. ಶಿವಮೊಗ್ಗದಲ್ಲಿ ವೀರ ಶಿವಮೂರ್ತಿ, ಬಿಜೆಪಿ ಕಾರ್ಯಕರ್ತ ವಿಶ್ವನಾಥ ಶೆಟ್ಟಿ, ಗೋವಿಂದ್ ರಾಜ್, ಭಜರಂಗದಳ ಗೋಕುಲ್ ಇವರನ್ನು ಹತ್ಯೆಗೆಯಲಾಯಿತು. ಹಿಂದೂ ಹರ್ಷನ ಹತ್ಯೆಗೈದು ಹೆಚ್ಚು ದಿನ ಆಗಲಿಲ್ಲ. ರುದ್ರೇಶ್, ಪ್ರವೀಣ್ ನೆಟ್ಟಾರ್, ಕುಟ್ಟಪ್ಪ, ಸೌಮ್ಯ ಭಟ್ ಮೊದಲಾದವರ ಹತ್ಯೆ ಮಾಡಲಾಗಿದೆ, ಈ ವೀರರಿಗೆ ನನ್ನ ಪ್ರಣಾಮಗಳು. ಈಗ ಸಾಯುವ ಅಲ್ಲ. ಕಾಲ ಸಾಯಿಸುವ ಕಾಲ. ನಾವು ಪ್ರಾಣತ್ಯಾಗಕ್ಕೂ ಸಿದ್ಧ. ಪ್ರಾಣ ತೆಗೆಯುವುದಕ್ಕೂ ಸಿದ್ಧ. ನಾನು ಈ ರೀತಿ ಹೇಳಿಕೆ ಕೊಟ್ಟರೆ ಬಿಜೆಪಿ ಸಂಸದೆ ಎಂದು ಕರೆಯುತ್ತಾರೆ. ನಾನು ಹಿಂದುತ್ವದ ಕಾರಣದಿಂದಲೇ ಬಿಜೆಪಿ ಸಂಸದೆಯಾಗಿದ್ದೇನೆ. ನನ್ನನ್ನು ಸಾಯಿಸಲು ಬಹಳಷ್ಟು ಬೆದರಿಕೆಗಳು ಬರುತ್ತದೆ. ನಾನು ಅವರಿಗೆ ಎದುರಿಗೆ ಬನ್ನಿ ಎಂದು ಸವಾಲು ಒಡ್ಡುತ್ತೇನೆ. ನಾರಿ ಶಕ್ತಿ ಹೇಗಿರುತ್ತದೆ, ಸನಾತನ ಶಕ್ತಿ ಹೇಗಿರುತ್ತೆ ಎಂದು ತೋರಿಸುತ್ತೇನೆ. ರಾಜಕೀಯ ಇರುತ್ತೆ ಹೋಗುತ್ತೆ, ಆದರೆ ಸನ್ಯಾಸತ್ವ ಹಾಗಲ್ಲ ಎಂದು ಸಾಧ್ವಿ ಸವಾಲೆಸೆದಿದ್ದಾರೆ.

    ಲವ್ ಜಿಹಾದ್ ಮಾಡುವವರಿಗೆ ಲವ್ ಜಿಹಾದ್ ಮೂಲಕವೇ ಉತ್ತರ ಕೊಡಿ. ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿ ಸಿದ್ಧವಾಗಿಡಿ, ಯಾವ ಸಮಯ ಬರುತ್ತೋ ಗೊತ್ತಿಲ್ಲ. ಆತ್ಮರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ. ಹರ್ಷ ಹಿಂದೂ ಸೇರಿದಂತೆ ಹಲವರ ಮೇಲೆ ನಡೆದ ದಾಳಿ ನಮ್ಮ ಮೇಲೂ ಆಗಬಹುದು. ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂಬಾಂಬುಗಳಂತೆ ಸಿದ್ಧಪಡಿಸಬೇಕು. ಹೆಣ್ಣುಮಕ್ಕಳ ಮರ್ಯಾದೆಗೆ ಬಂದರೆ ತಿರುಗಿ ಬೀಳಬೇಕಿದೆ. ನಮ್ಮ ಹೆಣ್ಣುಮಕ್ಕಳನ್ನು ಲವ್ ಜಿಹಾದ್​ನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ಆತ್ಮರಕ್ಷಣೆಗಾಗಿ ಆಯುಧಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಪರವಾನಗಿ ಇರಿಸಿಕೊಳ್ಳಿ ಎಂದು ಸಾಧ್ವಿ ಹೇಳಿದ್ದಾರೆ.

    ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts