More

    ತೆಲಂಗಾಣದ ಅಭಿವೃದ್ಧಿಗೆ ತೊಡಕಾಗಬೇಡಿ; ಕೆಸಿಆರ್​ಗೆ​ ಕುಟುಕಿದ ಪ್ರಧಾನಿ ಮೋದಿ

    ಹೈದರಾಬಾದ್​: ತೆಲಂಗಾಣದ ಜನತೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಬೇಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರನ್ನು ಕುಟುಕಿದ್ದಾರೆ.

    ಶನಿವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಇದು ತೆಲಂಗಾಣದ ಜನತೆಯ ಕನಸುಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಿದ್ದಾರೆ.

    ಕುಟುಂಬ ರಾಜಕಾರಣದ ವಿರುದ್ಧ ಕಿಡಿ

    ಕೆಲವರು ಕುಟುಂಬ ರಾಜಕಾರಣವನ್ನು ಬಂಬಲಿಸುತ್ತಿದ್ದಾರೆ ತೆಲಂಗಾಣದ ಜನರಿಗಾಗಿ ತರುತ್ತಿರುವ ಕಾರ್ಯಕ್ರಮಗಳನ್ನು ಕಸಿಯಲು ಯತ್ನಿಸುತ್ತಿದ್ದಾರೆ. ಇಂತಹ ಪರಿವಾರದಿಂದ ಭ್ರಷ್ಟಾಚಾರ ಬೆಳೆಯುತ್ತಾ ಸಾಗುತ್ತದೆ.

    ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಬೇರೆ ಬೇರೆಯಲ್ಲ. ಕುಟುಂಬದಿಂದ ಭ್ರಷ್ಟಾಚಾರ ಬೇಳೆಯುತ್ತದೆ. ಕೆಲವರು ಬಡವರಿಗೆ ನೀಡುವ ಆಹಾರ ಪದರ್ಥಾಗಳನ್ನು ಲೂಟಿ ಮಾಡುತ್ತಾರೆ. ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯಗಳ ಪ್ರಗತಿ ಅತ್ಯಂತ ಮುಖ್ಯವಾದ ವಿಷಯ ಎಂದು ಕೆಸಿಆರ್-ಕಟಿಆರ್​ ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.

    ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ

    ಕೋವಿಡ್​, ರಷ್ಯಾ-ಉಕ್ರೇನ್​ ನಡುವಿನ ಯುದ್ದದಿಂದಾಗಿ ವಿಶ್ವವು ಆರ್ಥಿಕ ಏರಿಳಿತಕ್ಕೆ ಸಾಕ್ಷಿಯಾಗಿದೆ. ಇದೆಲ್ಲದರ ನಡುವೆ ಭಾರತವು ಮೂಲಬೂತ ಸೌಕರ್ಯಗಳಿಗೆ ಹೆಚ್ಚು ಒತ್ತು ಕೊಡುವ ಕೆಲವೇ ಕೆಲವು ದೇಶಗಳಲ್ಲಿ ನಮ್ಮ ದೇಶವು ಒಂದು ಎಂದು ಹೇಳಿದ್ದಾರೆ.

    ಈ ವರ್ಷದ ಬಜೆಟ್​ನಲ್ಲಿ ನಮ್ಮ ಸರ್ಕಾವು ಮೂಲಸೌಕರ್ಯಗಳಿಗೆ 10 ಲಕ್ಷ ಕೊಟಿ ಮೊತ್ತದ ಬಜೆಟ್​ ಮೀಸಲಿಟ್ಟಿದೆ ಎಂದು ತಿಳಿಸಿದ್ದಾರೆ.

    ವಂದೇ ಭಅರತ್​ ಎಕ್ಸ್​​ಪ್ರೆಸ್​ಗೆ ಚಾಲನೆ

    ಶನಿವಾರ ಪ್ರಧಾನಿ ನರೇಂದ್ರ ಮೋದಿ ಸಿಕಂದ್ರಬಾದ್​​-ತಿರುಪತಿ ನಡುವೆ ಸಂಚರಿಸುವ ವಂದೇ ಭಅರತ್​ ಎಕ್ಸ್​​ಪ್ರೆಸ್​ ರೈಲಿಗೆ ಚಾಲನೆ ನೀಡಿದ್ದರು. ಇದಲ್ಲದೇ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯನ್ನು ವರ್ಚುವಲ್​ ಮೂಲಕ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts