More

    ಮಂಕಡಿಂಗ್​ ವಿಚಾರದಲ್ಲಿ ಜಾವಗಲ್ ಶ್ರೀನಾಥ್ ಬೌಲರ್‌ಗಳ ಪರ ನಿಂತಿದ್ದೇಕೆ?

    ನವದೆಹಲಿ: ಕಳೆದ ವರ್ಷದ ಐಪಿಎಲ್‌ನಲ್ಲಿ ಸ್ಪಿನ್ನರ್ ಆರ್. ಅಶ್ವಿನ್ ಎದುರಾಳಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್‌ರನ್ನು ನಾನ್-ಸ್ಟ್ರೈಕರ್‌ನಲ್ಲಿ ಮಂಕಡಿಂಗ್ ಮೂಲಕ ಔಟ್ ಮಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ವರ್ಷದ ಐಪಿಎಲ್‌ಗೆ ಮುನ್ನ ಕೂಡ ಇದೇ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಮಾಜಿ ವೇಗದ ಬೌಲರ್ ಹಾಗೂ ಹಾಲಿ ಐಸಿಸಿ ಮ್ಯಾಚ್ ರೆಫ್ರಿಯಾಗಿರುವ ಕನ್ನಡಿಗ ಜಾವಗಲ್ ಶ್ರೀನಾಥ್ ಕೂಡ ಈ ವಿಷಯದಲ್ಲಿ ತಮ್ಮ ವಾದವನ್ನು ಮಂಡಿಸಿದ್ದು, ಅವರು ಬೌಲರ್‌ಗಳ ಪರವಾಗಿ ನಿಂತಿದ್ದಾರೆ. ಈ ಮೂಲಕ ಅಶ್ವಿನ್‌ಗೆ ಪರೋಕ್ಷವಾಗಿ ತಮ್ಮ ಬೆಂಬಲವನ್ನೂ ಸೂಚಿಸಿದ್ದಾರೆ.

    ನಾನ್-ಸ್ಟೈಕರ್‌ನಲ್ಲಿರುವ ಬ್ಯಾಟ್ಸ್‌ಮನ್, ಬೌಲರ್ ಚೆಂಡೆಸೆಯುವುದಕ್ಕೆ ಮುನ್ನವೇ ಕ್ರೀಸ್ ಬಿಟ್ಟರೆ ಆತ ಕ್ರೀಡಾಸ್ಫೂರ್ತಿಯನ್ನು ಪಾಲಿಸುತ್ತಿಲ್ಲ ಎಂದೇ ಅರ್ಥ. ಹೀಗಾಗಿ ಆಗ ಆತನನ್ನು ರನೌಟ್ ಅಥವಾ ಮಂಕಡಿಂಗ್ ಮೂಲಕ ಔಟ್ ಮಾಡುವುದನ್ನು ಬೇರೆ ರೀತಿಯಲ್ಲಿ ನೋಡಬಾರದು ಎಂದು ಸೋಮವಾರವಷ್ಟೇ 51ನೇ ವಯಸ್ಸಿಗೆ ಕಾಲಿಟ್ಟ ಶ್ರೀನಾಥ್ ಹೇಳಿದ್ದಾರೆ.

    ಮಂಕಡಿಂಗ್ ಮೂಲಕ ನಾನ್-ಸ್ಟ್ರೈಕರ್ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡುವುದರಲ್ಲಿ ಬೌಲರ್‌ಗಳ ಯಾವ ತಪ್ಪು ಕೂಡ ಇಲ್ಲ ಎಂದಿರುವ ಶ್ರೀನಾಥ್, ‘ಬೌರ್‌ಗಳು ಯಾವಾಗಲೂ ಬ್ಯಾಟ್ಸ್‌ಮನ್‌ಗಳ ಮೇಲೆ ದೃಷ್ಟಿ ಇಟ್ಟಿರುತ್ತಾರೆ. ನಾನ್-ಸ್ಟೈಕರ್‌ನಲ್ಲಿರುವ ಬ್ಯಾಟ್ಸ್‌ಮನ್, ಬೌಲರ್ ಚೆಂಡೆಸೆಯುವುದಕ್ಕೆ ಮುನ್ನ ಕ್ರೀಸ್ ಬಿಡಬೇಕಾಗಿಲ್ಲ. ಯಾಕೆಂದರೆ ಆತ ಬ್ಯಾಟಿಂಗ್ ಮಾಡುತ್ತಿರುವುದಿಲ್ಲ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನ ಯೋಗಿ…ನಾನು ಅವರ ಅಭಿಮಾನಿ’

    ಅಶ್ವಿನ್ ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದಾಗ ಮಂಕಡಿಂಗ್ ಮಾಡಿದ್ದರು. ಆಗ ಆ ತಂಡವೂ ಅವರ ಪರ ನಿಂತಿತ್ತು. ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವರ್ಗಾವಣೆಗೊಂಡಿರುವ ಅವರಿಗೆ ಮಂಕಡಿಂಗ್ ಮಾಡದಂತೆ ಈಗಾಗಲೆ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಎಚ್ಚರಿಕೆಯನ್ನೂ ನೀಡಿದ್ದಾರೆ.

    ‘ನಾನ್-ಸ್ಟೈಕ್ ಬ್ಯಾಟ್ಸ್‌ಮನ್‌ಗಳು ಬೇಗನೆ ಕ್ರೀಸ್ ಬಿಡಬಾರದು. ಬೌಲರ್‌ಗಳು ಬೌಲಿಂಗ್‌ನತ್ತ ಗಮನಹರಿಸಿರುವ ಸಮಯದಲ್ಲಿ ನಾನ್-ಸ್ಟೈಕ್ ಬ್ಯಾಟ್ಸ್‌ಮನ್‌ಗಳು ನ್ಯಾಯವಲ್ಲದ ಲಾಭ ಪಡೆಯುವುದಾದರೆ ಅವರು ರನೌಟ್ ಆಗಲು ಕೂಡ ಸಿದ್ಧರಾಗಿರಬೇಕು. ಆಗ ಮಂಕಡಿಂಗ್ ಮಾಡುವುದಕ್ಕೆ ನಾನು ಓಕೆ ಎನ್ನುವೆ’ ಎಂದು ಶ್ರೀನಾಥ್ ವಿವರಿಸಿದ್ದಾರೆ.

    ರೋಚಕ ಪಂದ್ಯಗಳಲ್ಲಿ ನಾನ್-ಸ್ಟೈಕರ್ ಬ್ಯಾಟ್ಸ್‌ಮನ್‌ಗಳು ಬೌಲರ್ ಚೆಂಡೆಸೆಯುವುದಕ್ಕೆ ಮುನ್ನವೇ ಕ್ರೀಸ್ ಬಿಟ್ಟರೆ ಅದು ಪಂದ್ಯದ ಲಿತಾಂಶದ ಮೇಲೆಯೂ ಪರಿಣಾಮ ಬೀರಬಹುದು. ಚೆಂಡೆಸೆಯುವುದಕ್ಕೆ ಮುನ್ನವೇ ಬ್ಯಾಟ್ಸ್‌ಮನ್ ಕೆಲ ಹೆಜ್ಜೆ ದೂರ ಹೋಗಿದ್ದರೆ ಆಗ ರನೌಟ್ ಚಾನ್ಸ್ ಕಡಿಮೆಯಾಗಿರುತ್ತದೆ. ಇದು ಬೌಲಿಂಗ್ ತಂಡಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಬಹುದು ಎಂದು ಶ್ರೀನಾಥ್ ಅಭಿಪ್ರಾಯಪಟ್ಟಿದ್ದಾರೆ.

    ಐಪಿಎಲ್ ವೇಳೆ ಕರೊನಾ ಟೆಸ್ಟ್‌ಗೆ ಬಿಸಿಸಿಐ ಎಷ್ಟು ಕೋಟಿ ರೂ. ಖರ್ಚು ಮಾಡಲಿದೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts