More

    ಗ್ರಾಮಸ್ಥರ ವಿರೋಧಕ್ಕೆ ಡೋಂಟ್ ಕೇರ್; ಕೇರಳಕ್ಕೆ ವಿದ್ಯುತ್ ಸರಬರಾಜಿಗಾಗಿ ಜಾಗ ಸಮತಟ್ಟು

    ಕಾರ್ಕಳ: ಉಡುಪಿಯಿಂದ ಕೇರಳಕ್ಕೆ ವಿದ್ಯುತ್ ಸರಬರಾಜಿಗಾಗಿ ಸರ್ವೇ ನಡೆಸಿ ಟವರ್ ನಿರ್ಮಾಣಕ್ಕೆ ಇನ್ನಾ ಗ್ರಾಮದ ಗ್ರಾಮಸ್ಥರ ಭಾರಿ ವಿರೋಧದ ನಡುವೆ ಜೆಸಿಬಿ ಯಂತ್ರ ಬಳಸಿ ಜಾಗ ಸಮತಟ್ಟು ಮಾಡಲಾಗಿದೆ.

    ಇನ್ನಾ ಗ್ರಾಪಂ ವ್ಯಾಪ್ತಿಯ ಹೈಸ್ಕೂಲ್ ಸಮೀಪದ ಸರ್ಕಾರಿ ಜಾಗದಲ್ಲಿ ಟವರ್ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಎರಡು ವರ್ಷಗಳಿಂದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರೂ, ಶಾಲೆಯ 50 ಮೀಟರ್ ಅಂತರದಲ್ಲೇ ಟವರ್ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು, ಅಪಾಯಕಾರಿ. ಮುಂದಿನ ದಿನಗಳಲ್ಲಿ ಅನಾಹುತ ನಡೆದಲ್ಲಿ ಅಧಿಕಾರಿಗಳೇ ಹೊಣೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ಘಟನಾ ಸ್ಥಳಕ್ಕೆ ಕಾರ್ಕಳ ತಹಸೀಲ್ದಾರ್ ನರಸಪ್ಪ, ಪೊಲೀಸ್ ಉಪಾಧೀಕ್ಷ ಅರವಿಂದ ಕಲಗುಜ್ಜಿ, ಪಡುಬಿದ್ರೆ ಪೊಲೀಸ್ ಠಾಣಾಧಿಕಾರಿ ಪ್ರಸನ್ನ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts