More

    ನನ್ನಷ್ಟು ದೊಡ್ಡ ದೇಶಭಕ್ತ ಇನ್ಯಾರೂ ಇಲ್ಲ…ನೋಡಿ ಮಾಸ್ಕ್​ ಧರಿಸಿದ್ದೇನೆ: ಯುಎಸ್​ ಅಧ್ಯಕ್ಷ ಟ್ರಂಪ್​ ಟ್ವೀಟ್​

    ವಾಷಿಂಗ್ಟನ್​ ಡಿಸಿ: ಕರೊನಾ ಸೋಂಕಿನಿಂದ ತೀವ್ರ ಹೊಡೆತಕ್ಕೆ ಒಳಗಾದ ದೇಶಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಅಲ್ಲಿ ಪ್ರತಿದಿನ ದಾಖಲೆಯ ಸಂಖ್ಯೆಯಲ್ಲಿ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.

    ಇಡೀ ರಾಷ್ಟ್ರಾದ್ಯಂತ ಕರೊನಾ ವೈರಸ್​ ಹೆಚ್ಚುತ್ತಿದ್ದರೂ ಕೂಡ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ, ಚುನಾವಣೆ ಪ್ರಚಾರಕ್ಕೆ ತೆರಳುವಾಗಲೂ ಅವರು ಮಾಸ್ಕ್​ ಹಾಕಿಕೊಂಡಿರಲಿಲ್ಲ.
    ಆದರೆ ಕಳೆದ ವಾರ ಆಸ್ಪತ್ರೆಯೊಂದಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಮಾಸ್ಕ್​ ಧರಿಸಿಕೊಂಡಿದ್ದರು. ಅಮೆರಿಕ ಅಧ್ಯಕ್ಷರು ಮಾಸ್ಕ್​ ಹಾಕಿಕೊಂಡಿದ್ದೇ ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೀಗ ಡೊನಾಲ್ಡ್​ ಟ್ರಂಪ್​ ಅವರು ಮಾಸ್ಕ್​ ವಿಚಾರದ ಬಗ್ಗೆ ಟ್ವೀಟ್​ ಮಾಡಿ ಇನ್ನೊಂದು ಸುದ್ದಿ ಮಾಡಿದ್ದಾರೆ. ಇದನ್ನೂ ಓದಿ: ಪಾಂಡ್ಯ ಸಹೋದರರ ಜತೆ ಧೋನಿ ಬರ್ತ್ ಡೇ ಸೆಲೆಬ್ರೇಷನ್​ ಫೋಟೋ ರಿಲೀಸ್​ ಮಾಡಿದ ಸಾಕ್ಷಿ

    ಕಣ್ಣಿಗೆ ಕಾಣದ ಚೀನಾ ವೈರಸ್​ ವಿರುದ್ದ ಹೋರಾಡಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಮಾಡುತ್ತಿದ್ದೇವೆ. ಕರೊನಾ ಸಂದರ್ಭದಲ್ಲಿ ಮಾಸ್ಕ್​ ಧರಿಸುವುದೂ ಕೂಡ ದೇಶಭಕ್ತಿ ತೋರಿಸಿದಂತೆ ಎಂದು ಅನೇಕರು ಹೇಳಿದ್ದಾರೆ. ಈಗ ಹೇಳುತ್ತಿದ್ದೇನೆ…ನನ್ನಂತಹ ದೊಡ್ಡ ದೇಶಭಕ್ತ ಇನ್ಯಾರೂ ಇಲ್ಲ. ನಾನು ನಿಮ್ಮ ನೆಚ್ಚಿನ ಅಧ್ಯಕ್ಷ ಎಂದು ಟ್ವೀಟ್ ಮಾಡಿ, ಮಾಸ್ಕ್​ ಧರಿಸಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ‘ಪೊರಕೆ’ಗಾಗಿ ತಹಸೀಲ್ದಾರ್​ ಸಮ್ಮುಖದಲ್ಲೇ ಅಧಿಕಾರಿಗಳ ಕಿತ್ತಾಟ!

    ಕಳೆದ ವಾರ ಅವರು ಮಿಲಿಟಿರಿ ಮೆಡಿಕಲ್​ ಸೆಂಟರ್​ಗೆ ಭೇಟಿಕೊಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಮಾಸ್ಕ್ ಧರಿಸಿದ್ದು. ಅಲ್ಲಿಯೇ ತೆಗೆದ ಫೋಟೋವನ್ನು ಈಗ ಟ್ವೀಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಕೊವಿಡ್​-19 ನಿಂದ ಪಾರಾಗಲು ಸಾಮಾಜಿಕ ಅಂತರ ಹಾಗೂ ಮಾಸ್ಕ್​ ಧರಿಸುವುದು ತುಂಬ ಮುಖ್ಯ ಎಂದು ಆರೋಗ್ಯ ತಜ್ಞರೇ ಹೇಳಿದ್ದರೂ ಅಮೆರಿಕ ಅಧ್ಯಕ್ಷರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಕೊವಿಡ್​-19 ವಾರಿಯರ್ಸ್​ ಜತೆ ಸಂವಾದ ನಡೆಸುವಾಗಲೂ ಅವರು ಮಾಸ್ಕ್​ ಧರಿಸಿರಲಿಲ್ಲ. ಈ ಬಗ್ಗೆ ತುಂಬ ಟೀಕೆಯನ್ನೂ ಎದುರಿಸಿದ್ದರು. ಮಾದರಿಯಾಗಬೇಕಾದ ಅಧ್ಯಕ್ಷರೇ ಹೀಗಾಡುತ್ತಿದ್ದಾರೆ. ಅವರಿಗೆ ದೇಶದ ಬಗ್ಗೆ ಕಾಳಜಿಯಿಲ್ಲ ಎಂಬ ಮಾತುಗಳೂ ವ್ಯಕ್ತವಾಗಿದ್ದವು.(ಏಜೆನ್ಸೀಸ್​)

    ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ ನಿರ್ಧಾರವನ್ನು ಸ್ವಾಗತಿಸಿದ ಆಸ್ಟ್ರೇಲಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts