More

    ಪಾಕಿಸ್ತಾನದಲ್ಲಿ ಪಂಜಾಬಿ ಹಾಡು ಹಾಡ್ತಿದ್ದಾರೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್!

    ಇಸ್ಲಾಮಾಬಾದ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ನಿಮಗೆ ಗೊತ್ತಿರುತ್ತದೆ. ಅಮೆರಿಕದಲ್ಲಿರುವ ಅವರು ಪಾಕಿಸ್ತಾನದಲ್ಲಿ ಆಗಾಗ ಕಾಣಿಸಿಕೊಳ್ತಾರಂತೆ. ಅದರಲ್ಲೂ ಜುಬ್ಬ ಪೈಜಾಮ್ ಧರಿಸಿ, ಪಂಜಾಬಿ ಹಾಡು ಹೇಳಿಕೊಂಡು ಇರುತ್ತಾರಂತೆ.

    ಇದೇನಪ್ಪಾ ಎನಿಸಿದರೂ ಇದು ನಿಜವೇ. ಆದರೆ ಪಾಕಿಸ್ತಾನದಲ್ಲಿ ಇರುವುದು ಟ್ರಂಪ್​ ಅಲ್ಲ ಬದಲಾಗಿ ಅವರಿಗೆ ಹೋಲುವ ಸಲೀಂ. ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಸಲೀಂ ನೋಡುವುದಕ್ಕೆ ಸೇಮ್ ಟ್ರಂಪ್​ ರೀತಿಯೇ ಕಾಣುತ್ತಾರಂತೆ. 2017ರಲ್ಲಿ ಟ್ರಂಪ್ ಪಾಕ್​ಗೆ ಬಂದ ನಂತರ ಸಲೀಂ ಸ್ನೇಹಿತರು ಆತನನ್ನು ಟ್ರಂಪ್ ಎಂದೇ ಕರೆಯುತ್ತಾರಂತೆ.

    ಪಾಕಿಸ್ತಾನದಲ್ಲಿ ಟ್ರಂಪ್ ಬಗ್ಗೆ ಅಷ್ಟೇನು ಒಳ್ಳೆಯ ಅಭಿಪ್ರಾಯವೇನಿಲ್ಲ. ಟ್ರಂಪ್​ ಮುಸಲ್ಮಾನರ ವಿರೋಧಿ ಎನ್ನುವ ಆರೋಪವಿದೆ. ಹಾಗಿದ್ದರೂ ಟ್ರಂಪ್​ ಎಂದು ಕರೆದಾಗ ಸಲೀಂ ಖುಷಿಯಿಂದ ನಗುತ್ತಾರಂತೆ. ಚರ್ಮದ ಕಾಯಿಲೆಯಿಂದ ಬಳಲುತ್ತಿರುವುದು ನಾನು ವೈರಲ್ ಆಗುವಂತೆ ಮಾಡಿದೆ. ಆದರೆ ಅತ್ಯಂತ ಸೂಕ್ಷ್ಮವಾಗಿರುವ ಚರ್ಮವನ್ನಿಟ್ಟುಕೊಂಡು ಹೊರಗಡೆ ಹೋಗುವುದು ಕೂಡ ಕಷ್ಟವಾಗಿದೆ ಎಂದು ಸಲೀಂ ಹೇಳಿದ್ದಾರೆ. (ಏಜೆನ್ಸೀಸ್)

    ಎಲ್​ಜೆಪಿಯಲ್ಲಿ ಚಿರಾಗ್​ ಒಬ್ಬಂಟಿ! ಅಧ್ಯಕ್ಷ ಸ್ಥಾನದಿಂದ ಕಿಕ್​ಔಟ್!

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts