More

    ಕ್ಯಾಪಿಟಲ್ ಹಿಲ್ ಹಿಂಸಾಚಾರ: ಎರಡನೇ ಬಾರಿ ದೋಷಾರೋಪಣೆಗೆ ಗುರಿಯಾದ ಡೊನಾಲ್ಡ್​ ಟ್ರಂಪ್!​

    ವಾಷಿಂಗ್ಟನ್: ಕ್ಯಾಪಿಟಲ್ ಹಿಲ್ ಹಿಂಸಾಚಾರಕ್ಕೆ ಸಂಬಂಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಸ್​ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಿಂದ ದೋಷಾರೋಪಣೆಗೆ ಗುರಿಯಾದರು. ಈ ಮೂಲಕ ಎರಡು ಬಾರಿ ದೋಷಾರೋಪಣೆಗೆ ಗುರಿಯಾದ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿ ಪಡೆದಿದ್ದಾರೆ.

    ಕ್ಯಾಪಿಟಲ್​ ಹಿಲ್​ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಟ್ರಂಪ್​ ವಿರುದ್ಧ ದೋಷಾರೋಪಣೆ ಮಾಡಲಾಗಿದೆ. ನಿಲುವಳಿಗು ಮುನ್ನ ಸಶಸ್ತ್ರ ನ್ಯಾಷನಲ್ ಗಾರ್ಡ್ ಪಡೆಗಳನ್ನು ಕ್ಯಾಪಿಟಲ್​ ಹಿಲ್​ ಕಟ್ಟಡದ ಒಳಗೆ ಮತ್ತು ಹೊರಗೆ ಭದ್ರಪಡಿಸಲಾಯಿತು. ಬಳಿಕ ಸದನದ ನಿಲುವಳಿಯಲ್ಲಿ ಟ್ರಂಪ್‌ಗೆ ದೋಷಾರೋಪಣೆ ಗುರಿಮಾಡಲು 232ರಲ್ಲಿ 197 ಮತಗಳನ್ನು ಸದಸ್ಯರು ಚಲಾಯಿಸಿದರು.

    ಇದನ್ನೂ ಓದಿರಿ: ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ನೀರಿನ ತೊಂದರೆ ಉಂಟಾಗಲಿದೆ..

    ಇದಕ್ಕೂ ಮುನ್ನ ಪದಚ್ಯುತಿಗೆ 25ನೇ ತಿದ್ದುಪಡಿ ಪ್ರಯೋಗ ಮಾಡುವಂತೆ ಒತ್ತಡ ಹೇರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತದಾನದ ಫಲಿತಾಂಶವನ್ನು ಉಪಾಧ್ಯಕ್ಷ ಮೈಕ್ ಪೆನ್ಸ್ ನಯವಾಗಿ ತಿರಸ್ಕರಿಸಿದರು. ಅಮೆರಿಕದ ಸಂವಿಧಾನದ ಘನತೆ ಮತ್ತು ದೇಶದ ಹಿತದೃಷ್ಟಿಯಿಂದ ಇದನ್ನು ಮಾಡಲಾಗದು ಎಂದು ಪೆನ್ಸ್ ಸ್ಪಷ್ಟಪಡಿಸಿದರು. ಆದಾಗ್ಯೂ, ಪದಚ್ಯುತಿ ನಿಲುವಳಿಯನ್ನು ಮುಂದುವರಿಸಿರುವ ಡೆಮಾಕ್ರಟನ್ನರಿಗೆ ಸೆನೆಟ್​ನಲ್ಲಿ ಕೆಲವು ರಿಪಬ್ಲಿಕನ್ನರ ಬೆಂಬಲ ಸಿಕ್ಕಿದೆ.

    ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ನಿರ್ಣಯವನ್ನು ಅಂಗೀಕರಿಸುವುದರೊಂದಿಗೆ ಎರಡು ದೋಷಾರೋಪಣೆಗಳನ್ನು ಎದುರಿಸಿದ ಮೊದಲ ಯು.ಎಸ್. ಅಧ್ಯಕ್ಷರಾಗಿ ಟ್ರಂಪ್ ಇತಿಹಾಸದಲ್ಲಿ ಉಳಿಯಲಿದ್ದಾರೆ. (ಏಜೆನ್ಸೀಸ್​)

    ಕ್ಯಾಪಿಟಲ್ ಹಿಲ್ ಮುತ್ತಿಗೆ, ಕೆಲವು ಪ್ರಶ್ನೆಗಳು| ಪ್ರೇಮಶೇಖರ ಅವರ ಜಗದಗಲ ಅಂಕಣ

    Web Exclusive |ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ

    ಬಿಎಸ್​ವೈ ಗಟ್ಟಿತನ ಇನ್ನಷ್ಟು ವಿಸ್ತರಣೆ, ನಾಯಕತ್ವ ಅಚಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts