More

    ಫೆಬ್ರವರಿಯಲ್ಲಿ ಒಮಿಕ್ರಾನ್​ ಜಾಸ್ತಿ ಆಗುತ್ತಾ?; ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು..

    ಮೈಸೂರು: ಜಗತ್ತಿನಾದ್ಯಂತ ಆವರಿಸಿಕೊಂಡಿರುವ ಒಮಿಕ್ರಾನ್​ ದೇಶದ ಹಲವು ರಾಜ್ಯಗಳಲ್ಲಷ್ಟೇ ಅಲ್ಲ, ಕರ್ನಾಟಕದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದೆ. ಅದರಲ್ಲೂ ಡೆಲ್ಟಾ ವೇರಿಯಂಟ್​​ಗಿಂತಲೂ ಒಮಿಕ್ರಾನ್​ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದೂ ಹೇಳಲಾಗುತ್ತಿದೆ.

    ಈ ಮಧ್ಯೆ ಹೊಸ ವರ್ಷ, ನಂತರದ ಹಬ್ಬ ಇತ್ಯಾದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಒಮಿಕ್ರಾನ್​ ಪ್ರಕರಣ ಶೀಘ್ರದಲ್ಲೇ ತೀವ್ರಗತಿಯಲ್ಲಿ ಏರಬಹುದು ಎಂದೂ ಹೇಳಲಾಗುತ್ತಿದೆ. ಅಲ್ಲದೆ ಫೆಬ್ರವರಿಯಲ್ಲಿ ಒಮಿಕ್ರಾನ್​ ಹೆಚ್ಚಾಗಲಿದೆಯೇ ಎಂಬುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ಅವನಿಂದ ಅವಳಿಗೆ ಕರಿಮಣಿ ಪ್ರಯೋಗ; ಮಾವನ ಮನೆಯಲ್ಲಿ ಆತನಿಗೇ ಕತ್ತರಿ ಪ್ರಯೋಗ; ತಪ್ಪಿಹೋಯ್ತು ಸಂಸಾರದ ವ್ಯಾಕರಣ!

    ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಫೆಬ್ರವರಿಯಲ್ಲಿ ಒಮಿಕ್ರಾನ್​ ಸೋಂಕು ಪ್ರಕರಣ ಹೆಚ್ಚಾಗುತ್ತದೆ ಎಂಬುದಕ್ಕೆ ಪೂರಕ ದಾಖಲೆಗಳಿಲ್ಲ, ಆ ಸಂಬಂಧ ಯಾವುದೇ ಸಂಶೋಧನೆಯೂ ನಡೆದಿಲ್ಲ. ಹೀಗಾಗಿ ಫೆಬ್ರವರಿಯಲ್ಲಿ ಒಮಿಕ್ರಾನ್​ ಜಾಸ್ತಿ ಆಗಬಹುದು ಎನ್ನುವುದು ಅಂದಾಜು ಮಾತ್ರ. ಅದಾಗ್ಯೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ ಎಂದರು.

    ಈ ಮೈ ಕೊರೆಯುವ ಚಳಿ ರಾಜ್ಯದಲ್ಲಿ ಇನ್ನೆಷ್ಟು ದಿನ?; ಇಲ್ಲಿದೆ ಹವಾಮಾನ ಮುನ್ಸೂಚನೆ..

    ಒಬ್ಬನೇ ಆರೋಪಿ ಮನೆಯಲ್ಲಿ ಸಿಕ್ತು 10 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ; 1.5 ಕೋಟಿ ರೂ. ಬೆಲೆಯ ಆ್ಯಂಬರ್ ಗ್ರೀಸ್​ ಕೇಸ್​ಗೆ ಮೇಜರ್ ಟ್ವಿಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts