More

    ನೀಟ್ ಬರೆಯುವ ವಿದ್ಯಾರ್ಥಿಗಳಿಗೆ ಮೋದಿ ರೋಡ್ ಶೋ ಅಡ್ಡಿ ಆಗಿತ್ತೇ?

    ಬೆಂಗಳೂರು: ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆಯಲಿರುವವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೋಡ್​ ಶೋನಿಂದ ಅಡ್ಡಿ ಆಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಅದಾಗ್ಯೂ ಈ ಪರೀಕ್ಷೆ ಯಾವುದೇ ಅಡ್ಡಿ-ಆತಂಕ ಇಲ್ಲದೆ ಬಹಳ ನೀಟಾಗಿಯೇ ಭಾನುವಾರ ನಡೆದಿದೆ.

    ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಯಾವುದೇ ಸಮಸ್ಯೆ ಇಲ್ಲದೆಯೇ ಪರೀಕ್ಷಾ ಕೇಂದ್ರ ತಲುಪಿದ್ದರು. ರೋಡ್ ಶೋ ಇದ್ದಿದ್ದರಿಂದ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತಲುಪುವ ಬಗ್ಗೆ ಸಾಕಷ್ಟು ಆತಂಕವಿತ್ತು. ಮಧ್ಯಾಹ್ನ 2ರಿಂದ 5.20ರವರೆಗೆ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲು ತಲುಪಬೇಕೆಂಬ ಸೂಚನೆಯನ್ನು ಪರೀಕ್ಷೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ನೀಡಿತ್ತು. ಈ ಹಿನ್ನೆಲೆಯಲ್ಲಿ ರೋಡ್ ಶೋ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದರಿಂದ ಸಮಸ್ಯೆ ಎದುರಾಗಲಿಲ್ಲ. ರೋಡ್ ಶೋ ಬೆಳಗ್ಗೆ 10ಗಂಟೆಯಿಂದ 11.30ರ ಸುಮಾರಿಗೆ ಮುಕ್ತಾಯವಾದ್ದರಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಂಚಾರದ ಅಡಚಣೆ ಎದುರಾಗಲಿಲ್ಲ. ಇದರಿಂದ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಿದ್ದರು.

    ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

    ನೀಟ್ ಬರೆದ 1.34 ಲಕ್ಷ ವಿದ್ಯಾರ್ಥಿಗಳು

    ರಾಜ್ಯದಲ್ಲಿ 1.34 ಲಕ್ಷ ವಿದ್ಯಾರ್ಥಿಗಳು ನೀಟ್ ಬರೆದಿದ್ದಾರೆ. ಪರೀಕ್ಷೆ ಮಧ್ಯಾಹ್ನ ಇದ್ದರೂ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಬೆಳಗ್ಗೆಯೇ ತಲುಪಿದ್ದರು. ಪ್ರತಿ ಕೇಂದ್ರದ ಹೊರಗಡೆ ವಿದ್ಯಾರ್ಥಿಗಳು ಕೊನೆಯ ಕ್ಷಣದ ಅಭ್ಯಾಸದಲ್ಲಿ ತೊಡಗಿದ್ದು ಕಂಡು ಬಂದಿತ್ತು.

    ಇದನ್ನೂ ಓದಿ: ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಪರೀಕ್ಷೆ ನಡೆಯಿತು. ರಾಜ್ಯದ 1,34,379 ವಿದ್ಯಾರ್ಥಿಗಳು ಸೇರಿ ದೇಶಾದ್ಯಂತ 20,87,445 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ 14,753 ಹೆಚ್ಚಿನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.

    ಒಂದು ದಿನದ ಮೊದಲೇ ಬಂದಿದ್ದರು

    ರೋಡ್ ಶೋನಿಂದ ಪರೀಕ್ಷೆ ಕೇಂದ್ರಕ್ಕೆ ತಲುಪುವ ಅಡಚಣೆಯಾಗಬಹುದು ಎಂಬ ಆಂತಕದಲ್ಲಿ ಕೆಲವು ಪಾಲಕರು ಹಿಂದಿನ ದಿನವೇ ಕೆಲವು ಹೊಟೇಲ್‌ಗಳಲ್ಲಿ ಉಳಿದುಕೊಂಡಿರುವ ಉದಾಹರಣೆ ಕೂಡ ಇದೆ. ಕೆಂಗೇರಿಯಲ್ಲಿದ್ದ ಅಭ್ಯರ್ಥಿ ಓರ್ವರಿಗೆ ಸರ್ಜಾಪುರದಲ್ಲಿ ಪರೀಕ್ಷಾ ಕೇಂದ್ರ ಇದ್ದು, ಈ ವಿದ್ಯಾರ್ಥಿ ಪಾಲಕರ ಜತೆಗೆ ಶನಿವಾರ ರಾತ್ರಿಯೇ ತೆರಳಿ ಹೊಟೇಲ್ ಒಂದರಲ್ಲಿ ಉಳಿದುಕೊಂಡು ಬೆಳಗ್ಗೆ ಪರೀಕ್ಷೆ ಬರೆದಿರುವುದಾಗಿ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?

    ಮತ್ತೊಬ್ಬ ವಿದ್ಯಾರ್ಥಿ ಜೆ.ಪಿ.ನಗರದಿಂದ ಟ್ರಿನಿಟಿ ವೃತ್ತದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ತೆರಳಲು ಬೆಳಗ್ಗೆ 10.30ಕ್ಕೆ ಮನೆ ಬಿಟ್ಟಿದ್ದು, ಪರ್ಯಾಯ ರಸ್ತೆಯ ಮೂಲಕ ಸಂಚಾರ ಮಾಡಿದರೂ, ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿರುವುದಾಗಿ ತಿಳಿಸಿದ್ದಾರೆ.

    ಕ್ಲಿಷ್ಟಕರ ಪ್ರಶ್ನೆಗಳು ಇರಲಿಲ್ಲ

    ಈ ಬಾರಿ ಭೌತಶಾಸ್ತ್ರದ ಪ್ರಶ್ನೆಪತ್ರಿಕೆ ಬಹಳ ಸುಲಭವಾಗಿತ್ತು ಎಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಾಮಾನ್ಯವಾಗಿ ಭೌತಶಾಸ್ತ್ರದ ಪತ್ರಿಕೆ ಬಹಳ ಕಠಿಣವಾಗಿರುತ್ತದೆ. ಆದರೆ, ಈ ಬಾರಿಯ ಪತ್ರಿಕೆ ನೋಡಿ ಬಹಳ ಖುಷಿಯಾಗಿದೆ. ಕ್ಲಿಷ್ಟಕರ ಪ್ರಶ್ನೆಗಳು ಇರಲಿಲ್ಲ ಎಂದು ಹೇಳಿದ್ದಾರೆ.

    ಇನ್ನೂ ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರದ ಪತ್ರಿಕೆಗಳು ಸುಲಭವಾಗಿರದೇ ಇದ್ದರೂ, ಎನ್‌ಸಿಇಆರ್‌ಟಿ ಪಠ್ಯಕ್ರಮ ಹೊರತಾಗಿ ಪ್ರಶ್ನೆಗಳನ್ನು ಕೇಳಿರಲಿಲ್ಲ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ವರ್ಷ ನೀಟ್ ಬರೆದವರು ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಿದೆ. ಇನ್ನೂ ಎರಡಕ್ಕಿಂತ ಹೆಚ್ಚಿನ ಬಾರಿ ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಸುಲಭ ಎನಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಷಯ ತಜ್ಞರು ತಮ್ಮ ಅಭಿಪ್ರಾಯಪಟ್ಟಿದ್ದಾರೆ.

    ಟಿ-ಶರ್ಟ್ ತರಿಸಿಕೊಂಡು ಬಟ್ಟೆ ಬದಲಾವಣೆ

    ನೀಟ್ ಪರೀಕ್ಷೆಯ ಸೂಚನೆಗಳನ್ನು ವಿದ್ಯಾರ್ಥಿಗಳು ಮೊದಲೇ ತಿಳಿದಿದ್ದರಿಂದ ಆ ಪ್ರಕಾರವಾಗಿಯೇ ಕೇಂದ್ರಕ್ಕೆ ಆಗಮಿಸಿದ್ದವರಿಗೆ ಸಮಸ್ಯೆ ಎದುರಾಗಿಲ್ಲ. ಆದರೂ, ಕೆಲವರು ಮರೆತು ಶೂ, ಕಿವಿಯೋಲೆ, ಬೆಲ್ಟ್ ಹಾಕಿದವರು ಕೇಂದ್ರದಲ್ಲಿ ತೆಗೆದು ಆನಂತರ ಕೊಠಡಿ ಪ್ರವೇಶ ಪಡೆದುಕೊಂಡರು.

    ಇದನ್ನೂ ಓದಿ: ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

    ಬನಶಂಕರಿ ಜೆಎಸ್‌ಎಸ್ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿಯು ಪೂರ್ತಿ ತೋಳಿನ ಟಿ-ಶರ್ಟ್ ಹಾಕಿಕೊಂಡು ಬಂದಿದ್ದರಿಂದ ಅವನಿಗೆ ಪರೀಕ್ಷಾ ಕೇಂದ್ರದ ಒಳಗಡೆ ಪ್ರವೇಶ ಕಲ್ಪಿಸಿರಲಿಲ್ಲ. ಆನಂತರ ಸ್ನೇಹಿತರ ಸಹಾಯದಿಂದ ಅಲ್ಲೇ ಬಟ್ಟೆ ಅಂಗಡಿ ಹುಡುಕಿ ಅರ್ಧ ತೋಳಿನ ಟಿ-ಶರ್ಟ್ ತರಿಸಿಕೊಂಡು ಬದಲಾಯಿಸಿ ಆನಂತರ ಪ್ರವೇಶ ಪಡೆದುಕೊಂಡ ಘಟನೆ ನಡೆದಿದೆ.

    ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts