More

    ರಸ್ತೆಯಲ್ಲಿ 3 ಕಿ.ಮೀ. ಓಡಿ ಆಸ್ಪತ್ರೆ ತಲುಪಿ ಸರ್ಜರಿ ನಡೆಸಿದ ವೈದ್ಯ; ಕಾರಣ ಟ್ರಾಫಿಕ್​..

    ಬೆಂಗಳೂರು: ರಾಜಧಾನಿಯಲ್ಲಿನ ಸಂಚಾರ ದಟ್ಟಣೆಯಿಂದ ಏನೆಲ್ಲ ಸಮಸ್ಯೆ ಆಗುತ್ತದೆ, ಎಂಥವರೂ ಎಂಥೆಂಥ ಪರದಾಟ ಅನುಭವಿಸಬೇಕಾಗಿ ಬರುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಇಲ್ಲೊಬ್ಬರು ವೈದ್ಯರು ಬೆಂಗಳೂರಿನ ಟ್ರಾಫಿಕ್​ ಕಾರಣಕ್ಕೆ ರಸ್ತೆಯಲ್ಲಿ 3 ಕಿ.ಮೀ. ಓಡಿ ಆಸ್ಪತ್ರೆಗೆ ತಲುಪಿದ್ದಾರೆ.

    ಸರ್ಜಾಪುರದ ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೊಎಂಟೆರಾಲಜಿ ಸರ್ಜನ್​ ಡಾ.ಗೋವಿಂದ್ ನಂದಕುಮಾರ್ ಈ ಸಾಹಸ ಮಾಡಿದ್ದಾರೆ. ಸರ್ಜರಿಗೆ ಸಮಯ ನಿಗದಿಯಾಗಿದ್ದ ದಿನ ಆಸ್ಪತ್ರೆಗೆ ತೆರಳುತ್ತಿದ್ದ ಇವರು ಮಾರ್ಗಮಧ್ಯೆ ಟ್ರಾಫಿಕ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅಲ್ಲಿಂದ ಆಸ್ಪತ್ರೆಯವರೆಗೆ 3 ಕಿ.ಮೀ. ಓಡಿಹೋಗಿ ಸರ್ಜರಿ ನಡೆಸಿದ್ದಾರೆ.

    ಇವರು ಸರ್ಜಾಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಆ. 30ರಂದು ಮಧ್ಯವಯಸ್ಕ ಮಹಿಳೆಯೊಬ್ಬರಿಗೆ ತುರ್ತು ಲ್ಯಾಪರೊಸ್ಕೋಪಿಕ್ ಗಾಲ್​ಬ್ಲಾಡರ್​ ಸರ್ಜರಿ ನಡೆಸುವುದು ನಿಗದಿಯಾಗಿತ್ತು. ಅದಕ್ಕೆಂದೇ ಸಾಕಷ್ಟು ಸಮಯ ಮುಂಚಿತವಾಗಿ ಮನೆಯಿಂದ ಹೊರಟ್ಟಿದ್ದ ಇವರು ಸರ್ಜಾಪುರ-ಮಾರತಹಳ್ಳಿ ಮಾರ್ಗದಲ್ಲಿ ಟ್ರಾಫಿಕ್​ ಸಿಲುಕಿಕೊಂಡಿದ್ದರು.

    ತುರ್ತು ಸರ್ಜರಿ ಆಗಿದ್ದರಿಂದ ನಿಗದಿತ ಸಮಯಕ್ಕೆ ಹೋಗಿದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದ್ದಿದ್ದರಿಂದ ಎರಡನೇ ಯೋಚನೆ ಮಾಡದೆ ಕಾರ್​ ಜವಾಬ್ದಾರಿ ಡ್ರೈವರ್​​ಗೆ ಒಪ್ಪಿಸಿ, ಅಲ್ಲಿಂದ 3 ಕಿ.ಮೀ. ದೂರದಲ್ಲಿದ್ದ ಆಸ್ಪತ್ರೆಗೆ ಓಡಿಕೊಂಡೇ ಹೋಗಿದ್ದೆ. ನಂತರ ಆಕೆಗೆ ಸರ್ಜರಿ ನಡೆಸಲಾಗಿದ್ದು, ಆಕೆ ನಂತರ ನಿಗದಿತ ಸಮಯಕ್ಕೆ ಡಿಸ್​ಚಾರ್ಜ್​ ಆಗಿದ್ದು, ಸದ್ಯ ಆರಾಮಾಗಿ ಇದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಇವರು ಓಡುತ್ತ ಆಸ್ಪತ್ರೆಗೆ ತಲುಪಿದ ದೃಶ್ಯಾವಳಿಯ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.

    ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..

    ಲೋಕಾಯುಕ್ತ ದಾಳಿ: 4 ಲಕ್ಷ ರೂ. ಸಮೇತ ಸಿಕ್ಕಿಬಿದ್ದ ಜಂಟಿ ಆಯುಕ್ತರ ಆಪ್ತ ಸಹಾಯಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts