blank

ಅನುಮಾನಾಸ್ಪದ ರೀತಿಯಲ್ಲಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ವೈದ್ಯೆ ಸಾವು

Doctor death

ಚಾಮರಾಜನಗರ: ಅನುಮಾನಾಸ್ಪದ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಡೆದಿದೆ.

ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ ಡಾ.ಸಿಂದುಜಾ (28) ಸಾವನ್ನಪ್ಪಿದವರು. ಚೆನ್ನೈ ಮೂಲದ ವೈದ್ಯೆ ಸಿಂದುಜಾ ಕೊಳ್ಳೇಗಾಲದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಇದನ್ನೂ ಓದಿ: ಸಿನಿಮಾ ಸೆನ್ಸಾರ್​ ಮಾಡಲು ಲಂಚಕ್ಕೆ ಬೇಡಿಕೆ; ನಟ ವಿಶಾಲ್​ ಆರೋಪದ ಬೆನ್ನಲ್ಲೇ ತನಿಖೆಗೆ ಆದೇಶಿಸಿದ MIB

ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳ ಜತೆ ಉತ್ತಮ ಒಡನಾಟ ಹೊಂದಿದ್ದ ಸಿಂಧುಜಾ ಗುರುವಾರ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಶುಕ್ರವಾರ ಕೆಲಸಕ್ಕೆ ಬಾರದೇ ಇದ್ದದ್ದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಅವರ ಮೊಬೈಲ್​ ಫೋನಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಸದೆ ಇದ್ದಾಗ ಅನುಮಾನಗೊಂಡ ಸಿಬ್ಬಂದಿ ಮನೆ ಬಳಿ ತೆರಳಿ ಪರಿಶೀಲನೆ ನಡೆಸಿದಾಗ ಮಲಗಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸಿಂಧುಜಾ ಅವರ ದೇಹದ ಪಕ್ಕದಲ್ಲಿ ಚಾಕು, ಸಿರಿಂಜ್, ಔಷಧಿ ಸೇರಿದಂತೆ ಇನ್ನಿತರ ವಸ್ತುಗಳು ಪತ್ತೆಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವೈದ್ಯೆ ಸಿಂಧುಜಾ ಅವರ ಸಾವು ಅನುಮಾನಸ್ಪದವಾಗಿದ್ದು, ಕುಟುಂಬದವರು ದೂರು ನೀಡಿದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…

ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್​ ಯಾವುದು ಉತ್ತಮ! | Better In Summer

Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ…

ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ! ಅಕಸ್ಮಾತ್​ ನೀರು ಕುಡಿದ್ರೆ ಏನಾಗುತ್ತದೆ ಗೊತ್ತಾ? Fruits

Fruits: ಕೆಲವು ಸಂದರ್ಭಗಳಲ್ಲಿ, ಕೆಲವು ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಅತಿಸಾರದ ಅಪಾಯ ಹೆಚ್ಚಾಗುತ್ತದೆ.…