More

    ಒಬ್ಬ ವ್ಯಕ್ತಿಗೆ ಕರೊನಾ ಇದೆಯೆಂದು ಆತನ ನೆರೆಹೊರೆಯವರಿಗೆ ತಿಳಿಸಿದ ಡಾಕ್ಟರ್ ಗತಿ ಏನಾಯ್ತು ನೋಡಿ….

    ನವದೆಹಲಿ: ಕರೊನಾ ವೈರಸ್​ನಿಂದ ಮೃತಪಟ್ಟ ರೋಗಿಯ ವಿಚಾರದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ವೈದ್ಯರೊಬ್ಬರ ಮೇಲೆ ಆರು ಮಂದಿ ಕಿಡಿಗೇಡಿಗಳು ಕ್ಲೀನಿಕ್​ನ ಒಳಗಡೆಯೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕ ನಗರದ ಬಿಂದಾಪುರ್​ ಏರಿಯಾದಲ್ಲಿ ಶನಿವಾರ ರಾತ್ರಿ ನಡೆದಿದೆ.​

    ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಸುಖ್ಜಿಂದರ್​ ಮತ್ತು ಜೀತೆಂದರ್​ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್​!

    ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಸಂತ್ರಸ್ತ ವೈದ್ಯ ಡಾ. ಅವ್ತಾರ್​ ಹನ್ಸ, ಸುಮಾರು ಐದರಿಂದ ಆರು ಮಂದಿ ಕ್ಲೀನಿಕ್​ನಲ್ಲೇ ಎಳೆದಾಡಿ ಥಳಿಸಿದರು. ಅಲ್ಲದೇ ಕ್ಲೀನಿಕ್​ನಲ್ಲಿದ್ದ ವಸ್ತುಗಳನ್ನು ದೋಚಿ, ರೋಗಿಗಳ ಮೇಲೂ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

    ಆರೋಪಿ ಸುಖ್ಜಿಂದರ್​ ತಂದೆ ಇತ್ತೀಚೆಗಷ್ಟೇ ಕೋವಿಡ್​-19ನಿಂದ ಮೃತಪಟ್ಟಿದ್ದರು. ಹೀಗಾಗಿ ಸುಖ್ಜಿಂದರ್​ ಕುಟುಂಬಕ್ಕೂ ಕರೊನಾ ಹರಡಿರುವ ಸಾಧ್ಯತೆ ಇದೆ ಎಂದು ನೆರೆಯವರಿಗೆ ಮುನ್ನೆಚ್ಛರಿಕಾ ಕ್ರಮವಾಗಿ ವೈದ್ಯರು ಮಾಹಿತಿ ನೀಡಿದ್ದರು. ಇದು ಸುಖ್ಜಿಂದರ್​ ಕೋಪಕ್ಕೆ ಕಾರಣವಾಗಿದ್ದು, ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆಪಾದಿಸಿ, ತನ್ನ ಸಹಚರರೊಂದಿಗೆ ಸೇರಿ ಥಳಿಸಿದ್ದಾನೆ. ಇದನ್ನೂ ಓದಿ: ಸಚಿವ ಸುಧಾಕರ್ ತಂದೆಗೆ ಕರೊನಾ ಸೋಂಕು ಬೆನ್ನಲ್ಲೇ ಪತ್ನಿ, ಮಗಳಿಗೂ ಮಹಾಮಾರಿ ಕಂಟಕ

    ಸಾಮಾನ್ಯವಾಗಿ ಕರೊನಾ ಸೋಂಕು ದೃಢವಾದರೆ ಸ್ಥಳೀಯರಿಗೆ ಎಚ್ಚರಿಕೆ ನೀಡುವುದು ವೈದ್ಯರ ಕರ್ತವ್ಯ. ಹಗಲಿರುಳು ಶ್ರಮಿಸುವ ಕರೊನಾ ವಾರಿಯರ್ಸ್​ ಮೇಲೆಯೇ ಹಲ್ಲೆ ಮಾಡುವುದು ಎಷ್ಟು ಸರಿ? ಇಂತಹ ಜನರು ಯಾವಾಗ ಬುದ್ಧಿ ಕಲಿಯುತ್ತಾರೋ? ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಮನುಷ್ಯರಾಗಿ ವರ್ತಿಸುವುದು ತುಂಬಾ ಮುಖ್ಯವಾಗಿದೆ. (ಏಜೆನ್ಸೀಸ್​)

    ಟ್ರಂಪ್​ ಸರ್ಕಾರದ ನಿರ್ಧಾರದಿಂದ ಭಾರತದ ಐಟಿ ಕಂಪನಿಗಳಿಗೆ ಹೊಡೆತ: ಹೆಚ್ಚಲಿದೆ ನಿರುದ್ಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts