More

    ಐಪಿಎಲ್ ಆಡಲು ಯುಎಇಗೆ ತೆರಳಲಿರುವ ಮೊದಲ ತಂಡ ಯಾವುದು ಗೊತ್ತೆ?

    ಬೆಂಗಳೂರು: 3 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 10ರಂದೇ ಯುಎಇಗೆ ಪ್ರಯಾಣ ಬೆಳೆಸಲು ಸಿದ್ಧತೆ ಕೈಗೊಂಡಿದೆ. ಕೆಕೆಆರ್ ಆಗಸ್ಟ್ 19 ಅಥವಾ 20 ರಂದು ಪ್ರಯಾಣಿಸುವ ಸಾಧ್ಯತೆಗಳಿವೆ. ಈಗಾಗಲೇ ಈ ಬಗ್ಗೆ ಆಟಗಾರರಿಗೆ ಸೂಚನೆ ನೀಡಿರುವ ಸಿಎಸ್‌ಕೆ ಆ.10ಕ್ಕೆ ಪ್ರಯಾಣಿಸಲು ಸಿದ್ಧವಾಗಿರುವಂತೆ ಹೇಳಿದೆ. ಬಿಸಿಸಿಐ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಸಿದ್ಧಪಡಿಸಿಕೊಂಡಿದ್ದರೂ ಯುಎಇಯಲ್ಲಿ ಟೂರ್ನಿ ಆಯೋಜಿಸಲು ಕೇಂದ್ರ ಸರ್ಕಾರ ಇನ್ನಷ್ಟೇ ಅನುಮತಿ ನೀಡಬೇಕಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಹಾಗೂ ಕೋವಿಡ್-19ರಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಭಾರತೀಯರನ್ನು ಮಾತ್ರ ವಿದೇಶದಿಂದ ಕರೆತರುವ ವಿಮಾನಗಳ ಸಂಚಾರ ಇರುವುದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಯುಎಇ ಅಧಿಕಾರಿಗಳಲ್ಲಿ ಫ್ರಾಂಚೈಸಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

    ಐಪಿಎಲ್ ಆಡಲು ಯುಎಇಗೆ ತೆರಳಲಿರುವ ಮೊದಲ ತಂಡ ಯಾವುದು ಗೊತ್ತೆ?ಕಾಡಲಿದೆ ನೆಟ್ ಬೌಲರ್‌ಗಳ ಸಮಸ್ಯೆ!
    ಭಾರತದಲ್ಲಿ ಟೂರ್ನಿ ನಡೆದಿದ್ದರೆ ನೆಟ್‌ಬೌಲರ್‌ಗಳ ಸಮಸ್ಯೆ ಕಾಡುತ್ತಿರಲಿಲ್ಲ. ಸ್ಥಳೀಯ ಕ್ರಿಕೆಟ್ ಸಂಸ್ಥೆಗಳು ತಂಡಗಳಿಗೆ ನೆಟ್ ಬೌಲರ್‌ಗಳನ್ನು ಪೂರೈಕೆ ಮಾಡುತ್ತಿದ್ದದ್ದು ಇದಕ್ಕೆ ಕಾರಣ. ಆದರೆ, ಯುಎಇಯಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ಎರಡರಿಂದ ಎರಡೂವರೆ ತಿಂಗಳು ಯುಎಇಯಲ್ಲೇ ತಂಡ ಉಳಿಯುವುದರಿಂದ ನೆಟ್ ಅಭ್ಯಾಸದ ವೇಳೆ ನೆಟ್ ಬೌಲರ್‌ಗಳ ಅಗತ್ಯವಿರುತ್ತದೆ. ಆದರೆ ಈ ಸಮಸ್ಯೆಯನ್ನು ಫ್ರಾಂಚೈಸಿಗಳು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.

    ಇದನ್ನೂ ಓದಿ: ಕುಟುಂಬದವರಿಂದ 150 ದಿನ ದೂರ ಉಳಿಯಲಿದ್ದಾರೆ ಕ್ರಿಕೆಟಿಗರು..!

    ಶೇ 30-50 ಸ್ಟೇಡಿಯಂ ಭರ್ತಿಗೆ ಯುಎಇ ಮನವಿ
    ಐಪಿಎಲ್ ಟೂರ್ನಿ ವೇಳೆ ಸ್ಟೇಡಿಯಂನ ಶೇ.30 ರಿಂದ 50 ಭಾಗ ಪ್ರೇಕ್ಷಕರನ್ನು ಕರೆತರಲು ವ್ಯವಸ್ಥೆಗೊಳಿಸುವ ಬಗ್ಗೆ ಎಮಿರೈಟ್ಸ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಮುಬಾಷೀರ್ ಉಸ್ಮಾನಿ ಒಲವು ಹೊಂದಿದ್ದಾರೆ. ಇದಕ್ಕಾಗಿ ಅವರು ತಮ್ಮ ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ. ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸಲು ಭಾರತ ಸರ್ಕಾರ ಅನುಮತಿಸುತ್ತಿದ್ದಂತೆ, ನಾವು ನಮ್ಮ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಪ್ರಸ್ತಾವನೆ ಮತ್ತು ಪಾಲಿಸಬೇಕಾದ ಎಸ್‌ಒಪಿ ಸಲ್ಲಿಸಲಿದ್ದೇವೆ. ಇದನ್ನು ನಾವು ಮತ್ತು ಬಿಸಿಸಿಐ ಒಟ್ಟಾಗಿ ಕುಳಿತು ಸಿದ್ಧಪಡಿಸಲಿದ್ದೇವೆ ಎಂದು ಹೇಳಿದ್ದಾರೆ. ಇಂಥ ಪ್ರತಿಷ್ಠಿತ ಟೂರ್ನಿಯನ್ನು ಸ್ಥಳೀಯ ಪ್ರೇಕ್ಷಕರು ಆಸ್ವಾದಿಸುವಂತಾಗಬೇಕು ಎಂಬುದು ನಮ್ಮ ಅಭಿಲಾಷೆ. ಆದರೆ ಅದು ಸ್ಥಳೀಯ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿಸಿದೆ. ಯಾವುದೇ ಟೂರ್ನಿ ನಡೆದರೂ ಸ್ಟೇಡಿಯಂಗಳು ಶೇ.30ರಿಂದ 50 ಭರ್ತಿಯಾಗುತ್ತವೆ. ಈ ಟೂರ್ನಿಗೂ ಕೂಡ ನಾವು ಅದೇ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ಬಂಧಿಸುವಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts