More

    ಎಸ್ಸೆಸ್ಸೆಲ್ಸಿ ಪರೀಕ್ಷಾ ಅಭಿಯಾನದ ಅಂತಿಮ ಸಭೆಯಲ್ಲಿ ಸಚಿವರು ಏನು ಹೇಳಿದ್ರು ಗೊತ್ತಾ?

    ಬೆಂಗಳೂರು: ಜೂ.25ರಿಂದ ಆರಂಭವಾಗಲಿರುವ 2020ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ಕಳೆದ 15 ದಿನದಿಂದ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್​ ಅಧಿಕಾರಿಗಳ ಸಭೆ ನಡೆಸಿದ್ದಾರೆ. 31 ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಿ ನಿರ್ದೇಶನ ನೀಡಿರುವ ಸಚಿವರು ಪರೀಕ್ಷಾ ಅಭಿಯಾನದ ಕಡೆಯ ಭಾಗವಾಗಿ ಬುಧವಾರ ಬೆಂ.ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದರು. ಈ ಅಂತಿಮ ಸಭೆಯಲ್ಲಿ ಏನು ಹೇಳಿದ್ದರು ಎಂಬುದರ ಡಿಟೇಲ್ಸ್​ ಇಲ್ಲಿದೆ ನೋಡಿ.

    ಇದನ್ನೂ ಓದಿರಿ ಮೃತ ರೈತನ ಕುಟುಂಬಕ್ಕೆ ಎಸ್‌ಪಿ ಸಹಾಯ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದನ್ನು ಇಡೀ ಸಮಾಜವೇ ಎದುರು ನೋಡುತ್ತಿದೆ. ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸುಪ್ರೀಂ ಕೋರ್ಟ್​ ತಿಳಿಸಿದೆ. ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸದೇ ನಮ್ಮ ಸಾಮಾಜಿಕ ಬದ್ಧತೆಗೆ ಸವಾಲಾಗಿ ಪರಿಗಣಿಸಿ ಎಲ್ಲ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿ ಪಾಲಕರ ನಿರೀಕ್ಷೆಗೆ ಅನುಗುಣವಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಬೇಕೆಂದು ಸಚಿವರು ಸೂಚನೆ ನೀಡಿದರು.

    ಇದನ್ನೂ ಓದಿರಿ ಮೇ ತಿಂಗಳಲ್ಲಿ ಜಾಗತಿಕವಾಗಿ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಯಾವುದು? ಭಾರತವೇ ಮೊದಲು…!

    ಪರೀಕ್ಷೆಗೂ ಮೊದಲೇ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಸಹಕಾರದಿಂದ ಸ್ಯಾನಿಟೈಸ್​ ಮಾಡಬೇಕಲ್ಲದೆ, ಪ್ರತಿ ದಿನ ಪರೀಕ್ಷೆಯ ಬಳಿಕವೂ ಸ್ಯಾನಿಟೈಸ್​ ಕ್ರಮಗಳನ್ನು ಅನುಸರಿಸಬೇಕು. ಜೂ.12ರಿಂದ 17ರವರೆಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪುನರ್​ಮನನ ತರಗತಿಗಳ ಉಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಆರೋಗ್ಯ ಇಲಾಖೆಯು ಸಹಕಾರ ನೀಡುತ್ತಿದೆ ಎಂದರು.

    ಇದನ್ನೂ ಓದಿರಿ 18 ರಾಷ್ಟ್ರಗಳ ಅಭಿಮಾನಿಗಳ ಜತೆ ‘ಕಿಚ್ಚ’ ಸುದೀಪ್ ನೇರ ಮಾತುಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts