More

    ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಎಷ್ಟು ರೂಪಾಯಿ ಕೊಡಬೇಕು ಗೊತ್ತಾ?

    ಬೆಂಗಳೂರು: ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕಿಯ ಕಾಲೇಜುಗಳಲ್ಲಿ ಫಿವರ್​ ಕ್ಲಿನಿಕ್​ಗಳನ್ನು ಪ್ರಾರಂಭಿಸಲು ಆದೇಶಿಸಿರುವ ಆರೋಗ್ಯ ಇಲಾಖೆ ಪ್ರತಿ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ 350 ರೂ. ದರ ನಿಗದಿ ಪಡಿಸಿದೆ.

    ಈ ವಿಚಾರವಾಗಿ ಸರ್ಕಾರ ಈಗಾಗಲೇ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕಿಯ ಕಾಲೇಜುಗಳ ಮುಖ್ಯಸ್ಥರ ಜತೆಗೆ ಸಭೆ ನಡೆಸಿ ಬೆಂಬಲ ಪಡೆದಿದೆ. ಶೀತಜ್ವರ (ಐಎಲ್​ಐ) ಸಮಸ್ಯೆ ಹಾಗೂ ತೀವ್ರ ಉಸಿರಾಟದ (ಸಾರಿ)ತೊಂದರೆಯಿಂದ ಬಳಲುತ್ತಿರುವವರು ಹಾಗೂ ಕರೊನಾ ಸೋಂಕು ಶಂಕಿತರು ಈ ಫಿವರ್​ ಕ್ಲಿನಿಕ್​ಗಳಿಗೆ ತರಳಿ ಗಂಟಲು ದ್ರವವನ್ನು ನೀಡಬಹುದು. ಅದನ್ನು ಆಸ್ಪತ್ರೆಯವರು ಪ್ರಯೋಗಾಲಯಗಳಿಗೆ ರವಾನಿಸದರೆ, ಸರ್ಕಾರಿ ವೆಚ್ಚದಲ್ಲಿ ಕೋವಿಡ್​ ಪರೀಕ್ಷೆ ನಡೆಸಲಾಗುವುದು ಎಂದು ಆದೇಶದಲ್ಲಿ ಹೇಳಿದೆ. ಇದನ್ನೂ ಓದಿರಿ video/ ಕರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್​ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಈ ಕ್ರಮದಿಂದ ಪ್ರಯೋಗಾಲಯಗಳಲ್ಲಿ ಬೇಗ ವರದಿಗಳನ್ನು ನೀಡಲು ಹಾಗೂ ಸೋಂಕಿತರನ್ನು ಶೀಘ್ರ ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಲು ಅನುಕೂಲವಾಗುತ್ತದೆ. ರಾಜ್ಯದಲ್ಲಿ ಈಗಾಗಲೇ 600ಕ್ಕೂ ಹೆಚ್ಚು ಫಿವರ್​ ಕ್ಲಿನಿಕ್​ಗಳು ಹಾಗೂ 1,172ಕ್ಕೂ ಅಧಿಕ ಗಂಟಲು ದ್ರವ ಸಂಗ್ರಹ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

    ನಗರದಲ್ಲಿ ವಿವಿಧ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಫಿವರ್​ ಚಿಕಿತ್ಸಾಲಯಗಳಾಗಿ ಪರಿವರ್ತಿಸಲಾಗಿದೆ. ಈಗಾಗಲೇ 52 ಸರ್ಕಾರಿ ಫಿವರ್​ ಕ್ಲಿನಿಕ್​ಗಳು ಹಾಗೂ ಗಂಟಲು ದ್ರವ ಸಂಗ್ರಹ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಐಎಲ್​ಐ ಹಾಗೂ ಸಾರಿ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸೋಂಕಿತರ ಪತ್ತೆಗೆ ಫಿವರ್​ ಕ್ಲಿನಿಕ್​ಗಳು ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

    ಪಿಪಿಇ ಕಿಟ್​ ಧರಿಸದೆ ಕೋವಿಡ್​ ಸೋಂಕಿತನ ಅಂತ್ಯಸಂಸ್ಕಾರ ನೆರವೇರಿಸಿದ ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts