More

    ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊಪ್ಪಳ 16 ಸ್ಥಾನ ಕುಸಿತ

    ಕೊಪ್ಪಳ: ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಶೇ.64.01ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ 16 ಸ್ಥಾನಗಳಲ್ಲಿ ಕುಸಿತ ಕಂಡಿದ್ದು, ತೀವ್ರ ಹಿನ್ನಡೆ ಕಂಡಿದೆ. ಗಂಗಾವತಿಯ ಮಹಾನ್​ ಕಿಡ್ಸ್​ ಸ್ಕೂಲ್​ನ ಪಿ.ರೇವಂತ ಕುಮಾರ್​ ಪ್ರಸಾದ 621 ಅಂಕ ಪಡೆದು ಜಿಲ್ಲೆಗೆ ಟಾಪರ್​ ಎನಿಸಿಕೊಂಡಿದ್ದಾನೆ.

    ಕಳೆದ ವರ್ಷ ಶೇ.90.27ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ರಾಜ್ಯಮಟ್ಟದಲ್ಲಿ 16ನೇ ಸ್ಥಾನಕ್ಕೆ ಏರಿಕೆ ಕಂಡಿತ್ತು. ಕೋವಿಡ್​ ವರ್ಷಗಳ ಬಳಿಕ ಸತತ ಎರಡು ವರ್ಷ ಜಿಲ್ಲೆಯ ಲಿತಾಂಶ ಗಣನೀಯವಾಗಿ ಏರಿಕೆ ಕಂಡಿದ್ದು ವಿಶೇಷ. ಕಳೆದ ವರ್ಷ ದಣ ರಾಜ್ಯ ಜಿಲ್ಲೆಗಳನ್ನ ಹಿಂದಿಕ್ಕಿ ಟಾಪ್​ 16ನೇ ಜಿಲ್ಲೆ ಎನಿಸಿಕೊಂಡಿತ್ತು. ಆದರೆ, ಈ ವರ್ಷ ಶೇ.30ರಷ್ಟು ಫಲಿತಾಂಶ ಕುಸಿತ ಕಂಡಿದೆ. ರಾಜ್ಯ ಮಟ್ಟದ ಸರಾಸರಿಯಷ್ಟು ಫಲಿತಾಂಶವನ್ನು ಪಡೆಯುವಲ್ಲಿ ವಿಫಲವಾಗಿರುವುದು ಶಿಕ್ಷಣ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ.ಫಲಿತಾಂಶ ಸುಧಾರಣೆಗೆ ಇಲಾಖೆ ಕೈಗೊಂಡ ಕ್ರಮಗಳು ಪರಿಣಾಮ ಬೀರಿಲ್ಲ.

    ಇದೇ ಮೊದಲ ಬಾರಿಗೆ ವೆಬ್​ ಕಾಸ್ಟಿಂಗ್​ ವಿಧಾನ ಅಳವಡಿಸಲಾಗಿದೆ. ಹೀಗಾಗಿ ಪರೀೆಯಲ್ಲ ಸಣ್ಣ ಅಕ್ರಮಕ್ಕೂ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಫಲಿತಾಂಶ ಗಣನೀಯವಾಗಿ ಕುಸಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ಈ ಹಿಂದಿನ ವರ್ಷಗಳಲ್ಲಿ ಬಂದ ಫಲಿತಾಂಶವನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ಮೂರು ಪರೀೆ ಬರೆಯಲು ಅವಕಾಶ ನೀಡಿದ್ದು, ಯಾವ ಪರೀೆಯಲ್ಲಿ ಹೆಚ್ಚು ಅಂಕಗಳು ಬರುತ್ತವೆ, ಅದನ್ನು ಪರಿಗಣಿಸಲು ಅವಕಾಶ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಪರೀೆಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಕೆಲ ಶಿಕ್ಷಕರ ಅಭಿಪ್ರಾಯ.

    ಮತ್ತೊಂದೆಡೆ ಒಂದನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಅರ್ಹತೆ ಇಲ್ಲದಿದ್ದರೂ ಉತ್ತೀರ್ಣಗೊಳಿಸಲಾಗುತ್ತದೆ. ಇದರಿಂದ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಫಲಿತಾಂಶ ನಿರೀಸಿದಂತೆ ಬರುವುದಿಲ್ಲ. ಮೊದಲಿನಂತೆ ವಿದ್ಯಾರ್ಥಿ ಅರ್ಹತೆ ಹೊಂದಿದ್ದರೆ ಮಾತ್ರ ಮುಂದಿನ ತರಗತಿಗೆ ಪ್ರವೇಶ ನೀಡಬೇಕು. ಇಲ್ಲದಿದ್ದರೆ, ಅದೇ ತರಗತಿಯಲ್ಲಿ ಮುಂದುವರಿಸಬೇಕು. ಇದರಿಂದ ಉತ್ತಮ ಲಿತಾಂಶ ನಿರೀಸಬಹುದು ಎಂಬುದು ಇನ್ನು ಕೆಲವರ ಅಭಿಪ್ರಾಯ.

    ಶೇ.64.01ರಷ್ಟು ಮಕ್ಕಳು ಪಾಸ್​
    ಈ ವರ್ಷ 11,129 ಬಾಲಕ, 11,584 ಬಾಲಕಿಯರು ಸೇರಿ 22,713 ವಿದ್ಯಾರ್ಥಿಗಳು ಪರೀೆ ಬರೆದಿದ್ದಾರೆ. ಇವರಲ್ಲಿ 6165 ಬಾಲಕ, 8374 ಬಾಲಕಿಯರು ಒಳಗೊಂಡು 14539 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.64.01ರಷ್ಟು ಲಿತಾಂಶ ಬಂದಿದೆ. 16731 ಸರ್ಕಾರಿ ಶಾಲಾ ಮಕ್ಕಳಲ್ಲಿ 10243 (ಶೇ.61.22) ಪಾಸ್​ ಆಗಿದ್ದಾರೆ. ಇನ್ನು 2614 ಅನುದಾನಿತ ಶಾಲಾ ಮಕ್ಕಳಲ್ಲಿ 1550 (ಶೇ.59.30) ಮತ್ತು 3368 ಖಾಸಗಿ ಶಾಲಾ ಮಕ್ಕಳಲ್ಲಿ 2246 (ಶೇ.81.53) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
    9001 ಗ್ರಾಮೀಣ ಬಾಲಕರು, 9119 ಬಾಲಕಿಯರು ಸೇರಿ 22713 ಮಕ್ಕಳು ಪರೀೆಗೆ ಹಾಜರಾಗಿದ್ದು, 4849 ಗಂಡು, 6604 ಹೆಣ್ಣು ಸೇರಿ 11453 ವಿದ್ಯಾರ್ಥಿಗಳು (ಶೇ.63.21) ಪಾಸ್​ ಆಗಿದ್ದು ನಗರ ಪ್ರದೇಶದವರಿಗಿಂದ ಹಿಂದುಳಿದಿದ್ದಾರೆ. ನಗರ ಪ್ರದೇಶದ 2128 ಬಾಲಕ, 2465 ಬಾಲಕಿಯರು ಒಟ್ಟು 4593 ಮಕ್ಕಳು ಪರೀೆ ಎದುರಿಸಿದ್ದು, 1316 ಬಾಲಕ, 1770 ಬಾಲಕಿಯರು ಒಟ್ಟು 3086 (ಶೇ.67.19)ಜನ ಉತ್ತೀರ್ಣರಾಗಿದ್ದಾರೆ .

    ರೇವಂತ್​ ಜಿಲ್ಲಾ ಟಾಪರ್​
    ಗಂಗಾವತಿಯ ಮಹಾನ್​ ಕಿಡ್ಸ್​ ಶಾಲೆಯ ಪಿ. ರೇವಂತ ಕುಮಾರ್​ ಪ್ರಸಾದ 621 ಅಂಕ ಪಡೆದು ಜಿಲ್ಲೆಗೆ ಟಾಪರ್​ ಆಗಿದ್ದಾನೆ. ಕೊಪ್ಪಳದ ಎಸ್​ಎ್​ಎಸ್​ ಶಾಲೆಯ ಪ್ರಕಾಂಕ್ಷ 616 ಅಂಕ ಪಡೆದು ದ್ವೀತಿಯ ಹಾಗೂ ಬೇವೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ತಿರುಪತಿ ಗುರಿಕಾರ 615 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾನೆ. ಮಲಕನಮರಡಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಹಾಲಕ್ಷಿ$್ಮ ಸಿದ್ದಯ್ಯ ಸ್ವಾಮಿ 613 ಅಂಕ (ನಾಲ್ಕನೇ), ಬೇವೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶರಣಬಸವ ಅಂಗಡಿ, ಗಂಗಾವತಿ ಅಕ್ಷರ ಪಬ್ಲಿಕ್​ ಶಾಲೆಯ ಸುಪ್ರಜಾ ಕಾರಂತ ತಲಾ 612 ಅಂಕ (ಐದನೇ), ಕಾಟಗಿ ಕ್ಯಾಂಬ್ರಿಡ್ಜ್​ ಪಬ್ಲಿಕ್​ ಶಾಲೆಯ ಸಾಯಿ ನಾಗೇಶ, ಮೆಣೆದಾಳ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿಕ್ರಮ ರಾಠೋಡ್​, ಕೊಪ್ಪಳದ ಎಸ್​ಎ್​ಎಸ್​ ಶಾಲೆಯ ನಿಖಿತಾ ರಾಟಿ, ಶ್ರೀರಾಮನಗರದ ಡಿ. ಸರೋಜಿನಿದೇವಿ ಆಂಗ್ಲ ಮಾಧ್ಯಮ ಶಾಲೆಯ ಯುವರಾಜ ಜೀರ್​ಹಾಳ ತಲಾ 611 ಅಂಕ ಪಡೆದು ಆರನೇ ಸ್ಥಾನ ಪಡೆದಿದ್ದಾರೆ.

    ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆ ಕಳೆದ ಬಾರಿಗಿಂತ 16 ಸ್ಥಾನ ಕುಸಿತ ಕಂಡಿದೆ. ವೆಬ್​ ಕಾಸ್ಟಿಂಗ್​ ವಿಧಾನ ಅಳವಡಿಸಿದ ಕಾರಣ ಯಾವುದೇ ಅಕ್ರಮಕ್ಕೆ ಅವಕಾಶ ಸಿಕ್ಕಿಲ್ಲ. ಫಲಿತಾಂಶ ವಿಶ್ಲೇಷಣೆ ಮಾಡುತ್ತಿದ್ದೇವೆ. ಸುಧಾರಣೆಯಲ್ಲಿ ವಿಫಲವಾದವರಿಗೆ ನಿಯಮಾನುಸಾರ ನೋಟಿಸ್​ ಜಾರಿಗೊಳಿಸಿ ಕ್ರಮ ಕೈಗೊಳ್ಳಲಾಗುವುದು.

    ಶ್ರೀಶೈಲ ಬಿರಾದಾರ. ಡಿಡಿಪಿಐ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts