More

    ಪುರುಷರಂತೆ ಮಹಿಳಾ ಕ್ರಿಕೆಟರ್ಸ್​ ಕೂಡ ಗಾರ್ಡ್ಸ್​ ಧರಿಸುತ್ತಾರೆಯೇ? ನಿಮಗೆ ಗೊತ್ತಿರದ ಮತ್ತೊಂದು ರಕ್ಷಾಕವಚವಿದೆ!

    ನವದೆಹಲಿ: ಇತ್ತೀಚೆಗೆ ನಡೆದ ಪಂದ್ಯದಲ್ಲಿ ಸರ್ಫರಾಜ್​ ಖಾನ್​ ಹೆಲ್ಮೆಟ್​ ಧರಿಸದಿದ್ದಕ್ಕೆ ನಾಯಕ ರೋಹಿತ್​ ಶರ್ಮ ಬೈದು ಬುದ್ಧಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದರಿಂದ ಕ್ರಿಕೆಟ್ ಆಡುವಾಗ ಹೆಲ್ಮೆಟ್ ಮತ್ತು ಗಾರ್ಡ್ಸ್ ಅವಶ್ಯಕತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಇಲ್ಲದಿದ್ದರೆ ತಲೆ ಮತ್ತು ಇತರ ಪ್ರಮುಖವಾದ ಅಂಗಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

    ಕ್ರಿಕೆಟ್​ನಲ್ಲಿ ಬ್ಯಾಟರ್​ಗೆ ಮಾತ್ರ ಚೆಂಡನ್ನು ಬಡಿಯುವುದಿಲ್ಲ, ಅದೇ ಚೆಂಡು ಮೈದಾನದಲ್ಲಿರುವವರಿಗೂ ಬಡಿಯುತ್ತದೆ. ಕೀಪರ್‌, ಫೀಲ್ಡರ್‌ ಹಾಗೂ ಬೌಲರ್​ಗೂ ಬಡಿಯಬಹುದು. ಅಷ್ಟೇ ಯಾಕೆ ಕೆಲವೊಮ್ಮೆ ಅಂಪೈರ್​ಗೂ ಬೀಳಬಹುದು. ಚೆಂಡು ಆಟಗಾರನಿಗೆ ಬಿದ್ದಾಗ ಅದರ ನೋವು ಸಹಿಸುವುದು ತುಂಬಾನೆ ಕಷ್ಟ. ಅದರಲ್ಲೂ ಸೂಕ್ಷ್ಮ ಅಂಗಗಳಿಗೆ ಬಿದ್ದರಂತೂ ಕತೆ ಮಗಿಯಿತು. ಕೆಲವೊಮ್ಮೆ ಚೆಂಡು ಬಿದ್ದು ಮೈದಾನದಲ್ಲೇ ಆಟಗಾರ ಸಾವಿಗೀಡಾದ ಉದಾಹರಣೆಗಳು ಇವೆ.

    ಅದಕ್ಕಾಗಿಯೇ ಸುರಕ್ಷತೆಗಾಗಿ ಹೆಲ್ಮೆಟ್, ಪ್ಯಾಡ್, ತೊಡೆ ಪ್ಯಾಡ್, ಕೀಪರ್ ಪ್ಯಾಡ್, ಬ್ಯಾಟಿಂಗ್ ಗ್ಲೌಸ್, ಕೀಪಿಂಗ್ ಗ್ಲೌಸ್ ಮುಂತಾದ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ಇವುಗಳ ಜೊತೆಗೆ ಇನ್ನೊಂದು ಮುಖ್ಯವಾದ ವಿಷಯವಿದೆ. ಅದೇ ಗಾರ್ಡ್ಸ್. ಸೆಲೆಬ್ರಿಟಿಗಳಿಗೆ ಬಾಡಿಗಾರ್ಡ್ ಇದ್ದಂತೆ, ಕ್ರಿಕೆಟ್ ಆಟಗಾರರಿಗೆ ಈ ಗಾರ್ಡ್ಸ್. ಪ್ರತಿಯೊಬ್ಬ ಕ್ರಿಕೆಟಿಗರು ಕಡ್ಡಾಯವಾಗಿ ಗಾರ್ಡ್ಸ್ ಧರಿಸಬೇಕು. ಚೆಂಡು ಕಾಲುಗಳ ನಡುವೆ ಬಡಿದರೆ ಗಾಯವಾಗದಂತೆ ತಡೆಯಲು ಈ ಗಾರ್ಡ್ಸ್ ಅನ್ನು ಧರಿಸಲಾಗುತ್ತದೆ. ಕೇವಲ ಪುರುಷ ಕ್ರಿಕೆಟಿಗರು ಮಾತ್ರ ಗಾರ್ಡ್ಸ್ ಧರಿಸುವುದಿಲ್ಲ, ಮಹಿಳಾ ಕ್ರಿಕೆಟಿಗರು ಕೂಡ ಗಾರ್ಡ್ಸ್ ಧರಿಸುತ್ತಾರೆ. ಪುರುಷ ಕ್ರಿಕೆಟಿಗರಂತೆ ಹೆಲ್ಮೆಟ್, ತೊಡೆಯ ಪ್ಯಾಡ್ ಮತ್ತು ಪ್ಯಾಡ್‌ಗಳನ್ನು ಧರಿಸುವ ಮಹಿಳಾ ಕ್ರಿಕೆಟಿಗರು ಗಾರ್ಡ್ಸ್ ಕೂಡ ಧರಿಸುತ್ತಾರೆ. ಚೆಂಡು ಬಡಿದರೆ ಗಾಯವಾಗುವುದನ್ನು ತಪ್ಪಿಸಲು ಸೊಂಟದ ಕೆಳಗೆ ಮತ್ತು ಕಾಲುಗಳ ನಡುವೆ ಈ ಗಾರ್ಡ್ಸ್ ಅನ್ನು ಧರಿಸಲಾಗುತ್ತದೆ.

    ಆದರೆ ಇಲ್ಲಿ ನಿಮಗೆ ಗೊತ್ತಿಲ್ಲದ ಮತ್ತೊಂದು ಗಾರ್ಡ್​ ಇದೆ. ಅದೇ ಸ್ತನ ರಕ್ಷಕ (ಬ್ರೆಸ್ಟ್​ ಗಾರ್ಡ್​). ಇದನ್ನು ಗ್ರೋಯಿನ್ ಗಾರ್ಡ್ ಎಂದೂ ಕರೆಯುತ್ತಾರೆ. ಇದು ಮಹಿಳಾ ಕ್ರಿಕೆಟಿಗರ ಎದೆಗೆ ಚೆಂಡು ಬಡಿದರೆ ಗಾಯದಿಂದ ರಕ್ಷಿಸುತ್ತದೆ. ಅಂದಹಾಗೆ ಸ್ತನವು ಮಹಿಳೆಯ ದೇಹದ ಅತ್ಯಂತ ಸೂಕ್ಷ್ಮ ಭಾಗವಾಗಿದೆ. ಮಹಿಳೆಯರು ಬ್ರೆಸ್ಟ್ ಗಾರ್ಡ್ಸ್ ಇಲ್ಲದೆ ಕ್ರಿಕೆಟ್ ಆಡಿದರೆ ಅದು ತುಂಬಾ ಅಪಾಯಕಾರಿ. ವೇಗದ ಚೆಂಡನ್ನು ಬಡಿದಾಗ ಗಾಯದ ತೀವ್ರತೆಯು ಕೆಟ್ಟದಾಗಿರುತ್ತದೆ. ಮಹಿಳಾ ಕ್ರಿಕೆಟಿಗರಿಗೆ ಬ್ರೆಸ್ಟ್ ಗಾರ್ಡ್ಸ್ ಇರುವಂತೆಯೇ ಪುರುಷ ಕ್ರಿಕೆಟಿಗರಿಗೂ ಎದೆಗಾವಲು ಇರುತ್ತದೆ. ಅದು ಎದೆ ಮತ್ತು ಹೃದಯವನ್ನು ಹಾನಿಯಿಂದ ರಕ್ಷಿಸುತ್ತದೆ. ಪುರುಷ ಕ್ರಿಕೆಟಿಗರಿಗೆ ಇರುವ ಎಲ್ಲಾ ಸುರಕ್ಷತಾ ಸಾಧನಗಳು ಮಹಿಳಾ ಕ್ರಿಕೆಟಿಗರಿಗೂ ಇವೆ. (ಏಜೆನ್ಸೀಸ್​) 

    ಏಕಕಾಲದಲ್ಲಿ 5 ಸರ್ಕಾರಿ ಕೆಲಸ ಗಿಟ್ಟಿಸಿದ ಯುವತಿ! ಆಯ್ದುಕೊಂಡ ಹುದ್ದೆ, ಕಾರಣ ತಿಳಿದ್ರೆ ಮೆಚ್ಚಿಕೊಳ್ತೀರಾ

    ಕಡು ಬಡತನದಿಂದಾಗಿ ಕನಸಾಗೇ ಉಳಿದಿದ್ದ ತಾಯಿಯ ಆಸೆಯನ್ನು ಈಡೇರಿಸಿದ ಮಕ್ಕಳು! ಮನಕಲಕುತ್ತೆ ಈ ಸ್ಟೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts