More

    ಒತ್ತಡ ನಿಯಂತ್ರಣಕ್ಕೆ ‘ವಜ್ರಾಸನದಲ್ಲಿ ಪರ್ವತಾಸನ’ ಮಾಡಿ!

    ದೇಹವನ್ನು ವಜ್ರದಂತೆ ಕಾಪಾಡುವ ಆಸನವೇ ವಜ್ರಾಸನ. ವಜ್ರಾಸನದಲ್ಲಿ ಪರ್ವತಾಸನ ಮಾಡುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ. ಮನಸ್ಸಿನ ಒತ್ತಡ ನಿವಾರಿಸಲು ವಜ್ರಾಸನದಲ್ಲಿ ಪರ್ವತಾಸನದ ವಿನ್ಯಾಸವು ಸಹಕಾರಿಯಾಗುತ್ತದೆ. ಈ ಆಸನದಲ್ಲಿ ಕೈಗಳನ್ನು ಶಿರಸ್ಸಿನ ಮೇಲಕ್ಕೆ ಹಾಗೂ ಕೆಳಕ್ಕೆ ತರುವಾಗ ಮನಸ್ಸಿಗೆ ಹಾಯಾಗಿ ಹಿತವಾದ ಅನುಭವವಾಗುತ್ತದೆ.

    ಉಪಯೋಗಗಳು: ವಜ್ರಾಸನದಲ್ಲಿ ಪರ್ವತಾಸನ ಮಾಡುವುದರಿಂದ ಒತ್ತಡ ನಿಯಂತ್ರಣವಾಗುತ್ತದೆ. ಕಶೇರುಕಗಳ ಮಾಂಸಖಂಡಗಳು ದೃಢಗೊಳ್ಳುತ್ತದೆ ಹಾಗೂ ಶಕ್ತಿಯುತವಾಗುತ್ತದೆ. ಭುಜ, ಕುತ್ತಿಗೆ, ಹೆಗಲು ನೋವು ನಿಯಂತ್ರಣವಾಗುತ್ತದೆ. ಮೊಣಕಾಲು ನೋವು, ಪಾದಗಳ ಗಂಟಿನ ನೋವು, ಕಾಲುಗಳ ಸೆಳೆತ ಇತ್ಯಾದಿ ನಿವಾರಣೆಯಾಗುತ್ತವೆ. ವಜ್ರಾಸನದಲ್ಲಿ ಕುಳಿತುಕೊಂಡಾಗ ಬೆನ್ನು ನೇರವಾಗುವುದಲ್ಲದೆ, ಬೆನ್ನು ನೋವು, ಸೆಳೆತ ಕಡಿಮೆಯಾಗುತ್ತದೆ. ಈ ಆಸನದಿಂದ ಉಸಿರಾಟ ನಿರಾಯಾಸವಾಗುವುದು. ಹೆಗಲುಗಳು ಬಲಿಷ್ಠಗೊಳ್ಳುತ್ತವೆ.

    ಇದನ್ನೂ ಓದಿ: ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

    ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಕಾಲುಗಳನ್ನು ಹಿಂದಕ್ಕೆ ಮಡಚಿ ಕುಳಿತುಕೊಳ್ಳಬೇಕು – ಪಾದಗಳು ಮೇಲ್ಮುಖವಾಗಿರಬೇಕು. ಕಾಲ ಹೆಬ್ಬೆರಳು ಒಂದಕ್ಕೊಂದು ತಗಲುವಂತಿರಬೇಕು. ಕೈಗಳನ್ನು ನೇರವಾಗಿ ಚಾಚಿ ಆಯಾ ಮಂಡಿಗಳ ಮೇಲಿರಿಸಬೇಕು. ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿರಬೇಕು. ಇದೀಗ ವಜ್ರಾಸನ ಭಂಗಿಯಾಗಿದೆ.

    ವಜ್ರಾಸನದಲ್ಲಿ ಕೂತು, ಬೆರಳುಗಳನ್ನು ಪರಸ್ಪರ ಹೆಣೆದುಕೊಂಡು ಕೈಗಳನ್ನು ಶಿರಸ್ಸಿನ ಮೇಲೆ ತರಬೇಕು. ಇದು ವಜ್ರಾಸನದಲ್ಲಿ ಪರ್ವತಾಸನದ ವಿಧಾನ. ಇದನ್ನು ವಜ್ರಾಸನದ ವಿನ್ಯಾಸ ಎಂದೂ ಕರೆಯಲಾಗುತ್ತದೆ. ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಕೈಗಳನ್ನು ಕೆಳಕ್ಕೆ ತರಬೇಕು. ಈ ರೀತಿ ಸುಮಾರು ಆರರಿಂದ ಒಂಭತ್ತು ಬಾರಿ ಅಭ್ಯಾಸ ನಡೆಸಿರಿ. ಅನಂತರ ಶವಾಸನವನ್ನು ಸ್ವಲ್ಪ ಹೊತ್ತು ಅಭ್ಯಾಸ ಮಾಡಿರಿ. ತೀವ್ರ ಮಂಡಿನೋವು ಅಥವಾ ಗಾಯಗಳಿದ್ದರೆ ಈ ಆಸನ ಮಾಡಬಾರದು.

    ತುಂಬಾ ಹೊತ್ತು ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಕೆಲವೊಮ್ಮೆ ಮನಸ್ಸಿಗೆ ಒತ್ತಡವಾಗುತ್ತದೆ. ಅಂಥವರು ಕುರ್ಚಿಯ ಮೇಲೆ ಕೂತು ಪರ್ವತಾಸನದ ರೀತಿಯಲ್ಲಿ ಕೈಗಳನ್ನು ಜೋಡಿಸಿ ಮೇಲಕ್ಕೆ ಚಾಚುವ ಅಭ್ಯಾಸ ಮಾಡಬಹುದು.

    ಭೂವಿವಾದಗಳಿಗೆ ತಲೆ ಹಾಕಬೇಡಿ: ಖಾಕಿಪಡೆಗೆ ಸಿಎಂ ಫರ್ಮಾನು

    ಕಿಮ್​ ಶರ್ಮ – ಲಿಯಾಂಡರ್​ ಪೇಸ್ ಪ್ರೇಮಸಂಬಂಧ ಜಗಜ್ಜಾಹೀರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts