More

    ಅಪ್ಪಿತಪ್ಪಿ ತಾಮ್ರದ ಬಾಟಲ್/ಪಾತ್ರೆಯಲ್ಲಿ ಇವುಗಳನ್ನು ಸೇವಿಸಬೇಡಿ… ನಿಮಗಿದು ತಿಳಿದಿರಲಿ

    ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ತುಂಬಾನೇ ಒಳ್ಳೆಯದು ಮತ್ತು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಆದರೆ ಕೆಲವು ಪಾನೀಯಗಳನ್ನು ತಾಮ್ರದ ಪಾತ್ರೆಯಲ್ಲಿ ಕುಡಿಯುವುದರಿಂದ ಅದು ವಿಷಕಾರಿಯಾಗಬಹುದು. ಹೀಗಾಗಿ ಅವುಗಳ ಬಗ್ಗೆ ನಿಮಗೆ ಅರಿವಿರಲಿ ಮತ್ತು ಆ ರೀತಿ ಕುಡಿಯುವುದನ್ನು ತಪ್ಪಿಸಿ. ಹಾಗಾದರೆ, ತಾಮ್ರದ ಪಾತ್ರೆಯಲ್ಲಿ ಯಾವ ಪಾನೀಯಗಳನ್ನು ದೂರ ಇಡಬೇಕು ಎಂದು ನಾವೀಗ ತಿಳಿದುಕೊಳ್ಳೋಣ.

    ಮುಂಜಾನೆ ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಹೊಟ್ಟೆ, ಮೂತ್ರಪಿಂಡ ಮತ್ತು ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಅನೇಕ ಜನರು ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ ಬೆಳಿಗ್ಗೆ ಕುಡಿಯುತ್ತಾರೆ.

    ಮಜ್ಜಿಗೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಆದರೆ ತಾಮ್ರದ ಪಾತ್ರೆಯಲ್ಲಿ ಮಜ್ಜಿಗೆ ಸೇವಿಸುವುದು ಒಳ್ಳೆಯದಲ್ಲ. ಮೊಸರು ಅಥವಾ ಮಜ್ಜಿಗೆಯಲ್ಲಿರುವ ಅಂಶಗಳು ಲೋಹದೊಂದಿಗೆ ಪ್ರತಿಕ್ರಿಯಿಸುತ್ತವೆ. ಇದು ನಿಮ್ಮ ಆರೋಗ್ಯದ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ. ಕೆಲವರು ತಾಮ್ರದ ತಟ್ಟೆಯಲ್ಲಿ ಅನ್ನವನ್ನೂ ತಿನ್ನುತ್ತಾರೆ. ಆದರೆ, ಅದರಲ್ಲಿ ಮೊಸರು ತಿನ್ನದಿರುವುದು ಒಳ್ಳೆಯದು. ಇಲ್ಲದಿದ್ದರೆ, ಜೀರ್ಣಕಾರಿ ಸಮಸ್ಯೆಗಳ ಸಾಧ್ಯತೆ ಇರುತ್ತದೆ.

    ಇನ್ನೂ ಡೈರಿ ಉತ್ಪನ್ನಗಳನ್ನು ತಾಮ್ರದ ಪಾತ್ರೆಯಲ್ಲಿ ಇಡುವುದು ಹಾನಿಕಾರಕ. ತಾಮ್ರವು ಹಾಲಿನಲ್ಲಿರುವ ಖನಿಜಗಳು ಮತ್ತು ವಿಟಮಿನ್​ಗಳೊಂದಿಗೆ ಪ್ರತಿಕ್ರಿಯಿಸುತ್ತವೆ. ಇದು ಆಹಾರ ವಿಷಕ್ಕೆ ಕಾರಣವಾಗಬಹುದು. ಇದಲ್ಲದೆ, ಪ್ರತಿಕ್ರಿಯೆಯಿಂದಾಗಿ ನೀವು ವಾಕರಿಕೆ ಮತ್ತು ಆತಂಕವನ್ನು ಅನುಭವಿಸಬಹುದು.

    ಮಾವಿನಕಾಯಿ, ಉಪ್ಪಿನಕಾಯಿ, ಸಾಸ್, ಜಾಮ್ ಅನ್ನು ಎಂದಿಗೂ ತಾಮ್ರದ ಪಾತ್ರೆಯಲ್ಲಿ ಶೇಖರಿಸಿ ಇಡಬಾರದು. ಈ ಆಹಾರಗಳು ತಾಮ್ರದೊಂದಿಗೆ ಪ್ರತಿಕ್ರಿಯಿಸುತ್ತವೆ. ಕಾಲಾನಂತರದಲ್ಲಿ ಇವುಗಳು ನಿಮಗೆ ದೌರ್ಬಲ್ಯ, ವಾಕರಿಕೆ ಅಥವಾ ಆತಂಕವನ್ನು ಉಂಟುಮಾಡಬಹುದು. ತಾಮ್ರದ ವಿಷಕ್ಕೂ ಇವುಗಳು ಕಾರಣವಾಗಬಹುದು.

    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿದರೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದರೆ ತಾಮ್ರದ ಲೋಟದಿಂದ ಕುಡಿಯುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ನಿಂಬೆಯಲ್ಲಿರುವ ಆಮ್ಲವು ತಾಮ್ರದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ ಮತ್ತು ವಾಂತಿಗೆ ಕಾರಣವಾಗಬಹುದು. (ಏಜೆನ್ಸೀಸ್​)

    ವಿಶ್ವಕಪ್​ ಫೈನಲ್​ನಲ್ಲಿ​ ಭಾರತ ಹೀನಾಯ ಸೋಲು: ರೋಹಿತ್​ ಶರ್ಮ ಕೊಟ್ಟ ಕಾರಣ ಹೀಗಿದೆ…

    ಪರೀಕ್ಷಾ ಅಕ್ರಮಕ್ಕೆ 10 ಕೋಟಿ ರೂ. ದಂಡ!; ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗೆ ಕಠಿಣ ಕಾಯ್ದೆ; ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ

    ವರ್ಗಾಯಿಸಿ ಇಲ್ಲವೇ ದಯಾಮರಣ ಕೊಡಿ!; ಪೊಲೀಸರಿಗೆ ಸಿಗದ ಅಂತರ ಜಿಲ್ಲಾ ವರ್ಗ ಭಾಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts