More

    “ಅಧ್ಯಕ್ಷನಾಗಿದ್ದಾಗ ನಿದ್ದೆ ಮಾಡಿಲ್ಲ”: ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದ ಡಿಕೆಶಿ!

    ಬೆಂಗಳೂರು: ಎಕ್ಸಿಟ್ ಪೋಲ್​ನಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷ ಎಂದು ಬಿಂಬಿತವಾಗುತ್ತಿದ್ದು ಇದೀಗ ಕಾಂಗ್ರೆಸ್​ನಲ್ಲಿ ಸಿಎಂ ಗಾದಿಗಾಗಿ ಜಟಾಪಟಿ ಶುರುವಾಗಿದೆ. ಇದೀಗ ನೇರವಾಗಿ ಡಿಕೆ ಶಿವಕುಮಾರ್​, ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.

    ಮುಖ್ಯಮಂತ್ರಿ ತಾವೇ ಆಗಬೇಕು ಎಂದು ಪಟ್ಟು ಹಿಡಿದಿರುವ ಕೆಪಿಸಿಸಿ ಅಧ್ಯಕ್ಷರು, “ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಅಧ್ಯಕ್ಷನಾಗಿ ನಿದ್ದೆ ಮಾಡಿಲ್ಲ, ನಿದ್ದೆ ಮಾಡಲು ಬಿಟ್ಟಿಲ್ಲ” ಎಂದಿದ್ದಾರೆ. ಈ ಸಂದರ್ಭ ಅವರು “ನನಗೆ ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ. ನನ್ನ ಸಂಖ್ಯೆ 141. ಎಕ್ಸಿಟ್ ಪೋಲ್​ನ ಸಂಖ್ಯೆ ಬಹಳ ಕಡಿಮೆ ಇದೆ. ನಮ್ಮ ಎಕ್ಸಿಟ್ ಪೋಲ್ ಸ್ಯಾಂಪಲ್ಸ್ ಹೆಚ್ಚಿದೆ. ಕಾಂಗ್ರೆಸ್ ಪರವಾಗಿ ದೊಡ್ಡ ಅಲೆ ಇದೆ. ಮೊದಲು ಹೆಚ್ಚು ತೋರಿಸಿದವರು 20 ಸೀಟ್ ಆಮೇಲೆ ಕಡಿಮೆ ತೋರಿಸಿದರು.

    ಯಾವ ಕಾರಣಕ್ಕೂ ಸಂಖ್ಯೆ ಕಡಿಮೆಯಾಗುವುದಿಲ್ಲ. ನಿಚ್ಚಳವಾದ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಬರುತ್ತದೆ. ಬ್ಯಾಲೆಟ್ ಇಸ್ ಸ್ಟ್ರಾಂಗರ್ ದೆನ್ ದಿ ಬುಲೆಟ್. ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಾಗ ಜನ ಹೇಗೆ ಬುಲೆಟ್​ಗೆ ಹೆದರಲಿಲ್ಲವೋ, ಹಾಗೆ ಜನ ಈ ಬಾರಿ ಆಸೆ ಆಮಿಷಗಳಿಗೆ ಮನ್ನಣೆ ನೀಡಿಲ್ಲ. ನಾಳೆ ಒಂದು ಗಂಟೆ ಅಷ್ಟೊತ್ತಿಗೆ ಎಲ್ಲ ತೀರ್ಪು ಹೊರಬರಲಿದೆ” ಎಂದಿದ್ದಾರೆ.

    ತೆರೆಯೂ ಇಲ್ಲ. ಮರೆಯೂ ಇಲ್ಲ.

    ಇನ್ನು ಜೆಡಿಎಸ್​ ಪಕ್ಷದ ಜತೆ ಮೈತ್ರಿಯ ಬಗ್ಗೆ ಮಾತನಾಡಿದ ಡಿಕೆಶಿ, “ಎಚ್ಡಿಕೆ ಏನು ಹೇಳ್ತಾರೆ ಮಾಡ್ತಾರೆ ಗೊತ್ತಿಲ್ಲ. ಮೈತ್ರಿ ಬಗ್ಗೆ ಎಚ್​ಡಿಕೆ ಮಾತು ಗೊತ್ತಿಲ್ಲ. ಕುಮಾರಣ್ಣನ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು, ಹಾಗಾಗಿ ಮಾತಾಡ್ತಾರೆ. ನಾನಂತೂ ಹೋರಾಟ ಮಾಡುವವನು, ಈಗಲೇ ರಿಟೈರ್ ಆಗುವವನಲ್ಲ. ನಾನು ಕೊನೆ ಉಸಿರು ಇರುವ ತನಕ ಫೈಟ್ ಮಾಡುವವನು. ಬಂದು ನನ್ನ ಸೇರಿಕೊಳ್ಳಿ ಅಂತ ಜೆಡಿಎಸ್ ನಾಯಕರು ಕಾರ್ಯಕರ್ತರಿಗೆ ಹಾಗೂ ಹೇಳ್ತಾ ಇದ್ದೇನೆ” ಎಂದಿದ್ದಾರೆ.

    ರೆಸಾರ್ಟ್ ರಾಜಕಾರಣ ಮುಗಿದು ಹೋಯ್ತು

    ರೆಸಾರ್ಟ್​ ರಾಜಕಾರಣದ ಬಗ್ಗೆಯೂ ಹೇಳಿಕೆ ನೀಡಿದ ಡಿಕೆಶಿ, “ಎಷ್ಟೇ ನಂಬರ್ ಬಂದರೂ ಸರ್ಕಾರ ಮಾಡ್ತೀವಿ ಅಂತ ಹೇಳಿದ್ದಾರಲ್ಲ, ಎಲ್ಲ ಪಾರ್ಟಿಯವರು ಅವರವರ ಶಾಸಕರನ್ನು ಹಿಡಿದಿಟ್ಟುಕೊಳ್ತಾರೆ. ಯಾವ ಅಧಿಕಾರ ಹಂಚಿಕೆಯ ಮಾತೂ ಇಲ್ಲ. ಖರ್ಗೆ ಸೋನಿಯಾ ರಾಹುಲ್ ಏನು ಹೇಳ್ತಾರೋ ಹಾಗೆ ಕೇಳ್ತೀವಿ. ಕಪ್ಪು ಟೊಪ್ಪಿ ಎಲ್ಲ ಅಶೋಕ್​ ಮಡಿಕೊಳ್ಳಲಿ” ಎಂದು ವ್ಯಂಗ್ಯವಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts