More

    ಕರೊನಾ ಸೋಂಕು ತಡೆಯಲು ‘ಮುಳ್ಳಿನ ಬೇಲಿ’ಯ ಮೊರೆಹೋದ ಜಿಲ್ಲಾಡಳಿತ!

    ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ವಿಪರೀತ ಹೆಚ್ಚಾಗಿರುವ ಕಾರಣ ರಾಜ್ಯದ ಗಡಿಭಾಗಗಳ ಜಿಲ್ಲಾಡಳಿತ ಚುರುಕುಗೊಂಡಿದ್ದು, ಸೋಂಕು ವ್ಯಾಪಿಸುವುದನ್ನು ತಡೆಯಲು ಮುಳ್ಳಿನ ಬೇಲಿಯ ಮೊರೆ ಹೋಗಿದ್ದಾರೆ.

    ಮುಂಬೈ ಮತ್ತಿತರರ ಕಡೆ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗಿರುವುದರಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ವಿಶೇಷವೆಂದರೆ ಗಡಿ ಭಾಗದ ಕೆಲವು ರಸ್ತೆಗಳನ್ನೇ ಬಂದ್‌ ಮಾಡಲಾಗಿದೆ.

    ಚಿಕ್ಕೋಡಿ, ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ರಸ್ತೆಯಲ್ಲಿ ಜೆಸಿಬಿ ಮೂಲಕ ಮುಳ್ಳಿನ ಗಿಡಗಳನ್ನು ಹರಡಿ ಬಂದ್‌ ಮಾಡಲಾಗಿದೆ. ಚಿಕ್ಕೋಡಿಯಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದ್ದು, ಕೇವಲ ಕುಗನೊಳ್ಳಿ ಚೆಕ್‌ಪೋಸ್ಟ್ ಹಾಗೂ ಕಾಗವಾಡ ಚೆಕ್‌ಪೋಸ್ಟ್ ದಾರಿಯಿಂದಲೇ ಬರುವಂತೆ ಸೂಚನೆ ನೀಡಲಾಗಿದೆ.

    ಜಿಲ್ಲಾಡಳಿತದ ಆದೇಶದ ಪ್ರಕಾರ ಅಧಿಕಾರಿಗಳು ಮುಂದೆ ನಿಂತು ಈ ಕೆಲಸವನ್ನು ಮಾಡಿಸುತ್ತಿದ್ದು, ಆರ್‌ಟಿಪಿಸಿಆರ್‌ ಟೆಸ್ಟ್‌ ರಿಪೋರ್ಟ್‌ ನೆಗೆಟಿವ್‌ ಇದ್ದರೆ ಮಾತ್ರ ಎರಡು ಟೋಲ್‌ಗಳ ಮೂಲಕ ಕರ್ನಾಟಕಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

    ಚಿನ್ನದ ಹುಡುಕಾಟದಲ್ಲಿ ವಜ್ರ ಕಳೆದುಕೊಂಡವರೆಷ್ಟೋ?; ಇಲ್ಲಿವೆ ಆ ಚಿನ್ನ-ವಜ್ರಗಳು…

    ಪೊಲೀಸ್‌ ಆಗಬೇಕಿದ್ದ ಇಬ್ಬರು ಜೈಲು ಸೇರಿದರು; ಅಂದು ಫಿಟ್‌ ಅನಿಸಿಕೊಂಡಿದ್ದವರು ಇಂದು ಅನ್‌ಫಿಟ್‌; ಅವರು ಮಾಡಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts