More

    ಆರೋಗ್ಯಕರ ಆಯುಷ್ ಪಾನಕ ವಿತರಣೆ

    ರಾಯಚೂರು: ಜಿಲ್ಲಾ ಆಯುಷ್ ಇಲಾಖೆಯಿಂದ ಸಿದ್ಧ ಪಡಿಸಲಾದ ಆರೋಗ್ಯಕರ ಪಾನಕ ಚಿಂಚಾ ಪಾನಕ ವಿತರಣೆ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಕಾರಿ ಅಶೋಕ ದುಡಗುಂಟಿ ಗುರುವಾರ ಚಾಲನೆ ನೀಡಿದರು.
    ಸ್ಥಳೀಯ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಪಾನಕ ವಿತರಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಆಯುಷ್ ಇಲಾಖೆ ಮಾರ್ಗಸೂಚಿಯಂತೆ ಪಾನಕವನ್ನು ಸಿದ್ಧಪಡಿಸಿಕೊಂಡು ಕುಡಿದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೆಕು ಎಂದರು.
    ಪಂಚಕರ್ಮ ಘಟಕದ ವೈದ್ಯ ಡಾ.ಎನ್.ಡಿ.ನವೀನ್ ಚಿಂಚಾ ಪಾನಕ ತಯಾರಿಸುವ ವಿಧಾನ ಕುರಿತು ವಿವರಿಸಿ, 100 ಗ್ರಾಂ ಹುಣಸಿ ಹಣ್ಣು, 400 ಮಿಲಿ ಗ್ರಾಂ ಬೆಲ್ಲದ ಪುಡಿ, 10 ಗ್ರಾಂ ಜೀರಿಗೆ ಪುಡಿ, ತಲಾ 5 ಗ್ರಾಂ ಕಾಳು ಮೆಣಸಿನ ಪುಡಿ ಹಾಗೂ ಸೈಂದವ ಲವಣದಿಂದ ಮನೆಯಲ್ಲಿಯೇ ಪಾನಕ ತಯಾರಿಸಬಹುದಾಗಿದೆ ಎಂದು ತಿಳಿಸಿದರು.
    ವೈದ್ಯ ಡಾ.ಬಸವರಾಜ ಕಟ್ಟಿ ಮಾತನಾಡಿ, ಚಿಂಚಾ ಪಾನಕ ಸೇವನೆಯಿಂದ ಜೀರ್ಣ ಕ್ರಿಯೆ ಉತ್ತಮವಾಗುತ್ತಿದ್ದು, ಮಲಬದ್ಧತೆ ನಿವಾರಣೆಯಾಗುತ್ತದೆ. ದೇಹದ ಉಷ್ಣ ಕಡಿಮೆ ಮಾಡುವುದರೊಂದಿಗೆ ಬಾಯಾರಿಕೆ ನೀಗಿಸುವುದು ಎಂದು ಹೇಳಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಕಾರಿ ಡಾ.ಶಂಕರಗೌಡ ಪಾಟೀಲ್, ವೈದ್ಯರಾದ ಡಾ.ಮಹ್ಮದ್ ಅಮೀನುದ್ದೀನ್ ಅಸ್ಲಂ, ಡಾ.ರಾಜೇಂದ್ರ ಬೆನಕಿನಾಳ, ಡಾ.ಪೂಜಾ, ಸಹಾಯಕ ಆಡಳಿತಾಕಾರಿ ಆಸ್ಮಾ ಬೇಗಂ, ಕಚೇರಿ ಅೀಕ್ಷ ನರಸಪ್ಪ ಹಾಗೂ ಜಿಲ್ಲಾಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts