More

    ಚೀನಾ ಹೂಡಿಕೆಯ ಕಂಪನಿಗೆ ಪ್ರಚಾರ, ಸಚಿನ್ ವಿರುದ್ಧ ಆಕ್ರೋಶ

    ನವದೆಹಲಿ: ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರವೂ ವಿವಿಧ ಕಂಪನಿಗಳಿಗೆ ಪ್ರಚಾರ ರಾಯಭಾರಿಯಾಗಿ ಮುಂದುವರಿದಿರುವ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹೊಸ ಒಪ್ಪಂದವೊಂದು ವಿವಾದಕ್ಕೀಡಾಗಿದೆ. ಚೀನಾ ಹೂಡಿಕೆ ಇರುವ ಪೇಟಿಎಂ ಕಂಪನಿಯ ‘ಪೇಟಿಎಂ ಫಸ್ಟ್​ ಗೇಮ್ಸ್’ಗೆ ಪ್ರಚಾರ ರಾಯಭಾರಿಯಾಗಿ ಸಚಿನ್ ತೆಂಡುಲ್ಕರ್ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಅಖಿಲ ಭಾರತ ಟ್ರೇಡರ್ಸ್‌ ಕಾನ್ಫೆಡರೇಷನ್ (ಸಿಎಐಟಿ) ಆಕ್ರೋಶ ವ್ಯಕ್ತಪಡಿಸಿದೆ.

    ಚೀನಾ ಜತೆಗಿನ ಭಾರತದ ಹಾಲಿ ಸಂಘರ್ಷದ ನಡುವೆ ಜನರ ಭಾವನೆಗಳಿಗೆ ಬೆಲೆ ನೀಡಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಮತ್ತು ಈ ಒಪ್ಪಂದವನ್ನು ತಿರಸ್ಕರಿಸಿ ಎಂದು ಸಿಎಐಟಿ ಮನವಿ ಸಲ್ಲಿಸಿದೆ.

    ‘ದೇಶವನ್ನು ಅತಿಯಾಗಿ ಪ್ರೀತಿಸುವ ನಿಮ್ಮಂಥ ಈ ಮಣ್ಣಿನ ಮಗ ಮತ್ತು ಅಪಾರವಾದ ದೇಶಭಕ್ತಿ ಹೊಂದಿರುವ ನೀವು, ಚೀನಾದ ಹೂಡಿಕೆ ಇರುವ ಕಂಪನಿ ಜತೆಗೆ ಪ್ರಚಾರ ರಾಯಭಾರಿಯಾಗಿ ಒಪ್ಪಂದವನ್ನು ಒಪ್ಪಿಕೊಂಡಿರುವ ಆಘಾತ ಮತ್ತು ಅಸಹ್ಯ ತಂದಿದೆ. ನೀವು ಇಂಥ ಒಪ್ಪಂದವನ್ನು ಒಪ್ಪಿಕೊಳ್ಳುವ ವೇಳೆ ಹಣದ ವಿಚಾರ ಪರಿಗಣನೆಗೆ ಬಂದಿರದು ಎಂದು ಭಾವಿಸುತ್ತೇವೆ. ಹಾಗಾದರೆ ದೇಶದ ಜನರ ಭಾವನೆಗಳ ವಿರುದ್ಧ ಹೋಗಲು ನಿಮ್ಮನ್ನು ಪ್ರೇರೇಪಿಸಿರುವುದು ಯಾವುದು? ನಾವಿದನ್ನು ಅರ್ಥ ಮಾಡಿಕೊಳ್ಳಲು ವಿಲರಾಗಿದ್ದೇವೆ’ ಎಂದು ಸಚಿನ್ ಬರೆದಿರುವ ಪತ್ರದಲ್ಲಿ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೆಲ್‌ವಾಲ್ ಹೇಳಿದ್ದಾರೆ.

    ಇದನ್ನೂ ಓದಿ: ಈ 6 ಕ್ರಿಕೆಟ್ ತಾರೆಯರು ಇಂಜಿನಿಯರ್ ಕೂಡ ಆಗಿದ್ದಾರೆ!

    ಪೇಟಿಎಂ ಕಂಪನಿಯಲ್ಲಿ ಚೀನಾ ಮೂಲದ ಅಲಿಬಾಬಾ ಕಂಪನಿಯ ಭಾರಿ ಹೂಡಿಕೆ ಇದ್ದು, ಇತ್ತೀಚೆಗೆ ಪೇಟಿಎಂ ಫಸ್ಟ್​ ಗೇಮ್ಸ್ ಹೆಸರಿನಲ್ಲಿ ಹೊಸ ಗೇಮಿಂಗ್ ಆ್ಯಪ್ ಆರಂಭಿಸಲಾಗಿದೆ. ಈ ಒಪ್ಪಂದವನ್ನು ತಿರಸ್ಕರಿಸುವ ಮೂಲಕ ಚೀನಾಗೆ ಕಟುವಾದ ಸಂದೇಶವನ್ನು ರವಾನಿಸಲು ದೇಶಕ್ಕೆ ನೆರವಾಗಿ ಎಂದೂ ಸಿಎಐಟಿ ಮನವಿ ಸಲ್ಲಿಸಿದೆ. ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬಳಿಕ ಸಿಎಐಟಿ, ಚೀನಾ ವಿರುದ್ಧ ದೊಡ್ಡ ಅಭಿಯಾನವನ್ನೇ ನಡೆಸುತ್ತಿದ್ದು, ಕಳೆದ ಜೂನ್‌ನಲ್ಲಿ ಚೀನಾದ ಸುಮಾರು 450 ಬಗೆಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿತ್ತು. ಜತೆಗೆ ಸೆಲೆಬ್ರಿಟಿಗಳು ಚೀನಾ ಉತ್ಪನ್ನಗಳನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದೂ ಮನವಿ ಮಾಡಿಕೊಂಡಿತ್ತು.

    ಮುಂಬೈ ಇಂಡಿಯನ್ಸ್ ತಂಡದಲ್ಲಿ ತೆಂಡುಲ್ಕರ್ ಪುತ್ರ ಅರ್ಜುನ್ ಏನು ಮಾಡುತ್ತಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts