More

    ಮತ್ತೆ ಚರ್ಚೆಗೀಡಾದ ದಿಶಾ: ಅಧಿವೇಶನದ ನಡುವೆ ಸಂಸದೆ ಸುಮಲತಾ ಸಭೆ ಕರೆದಿರುವ ಉದ್ದೇಶ ಇದೆನಾ?

    ಮಂಡ್ಯ: ಮಳೆಗಾಲದ ವಿಧಾನಮಂಡಲ ಅಧಿವೇಶನದ ನಡುವೆಯೇ ಸಂಸದೆ ಸುಮಲತಾ ಅವರು ಸೆ.16ರಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯನ್ನು ಕರೆದಿದ್ದಾರೆ. ಅಂತೆಯೇ ಶಾಸಕರು ಸಭೆಗೆ ಭಾಗವಹಿಸಬಾರದೆನ್ನುವ ಕಾರಣಕ್ಕಾಗಿಯೇ ಇಂಥ ಹುನ್ನಾರ ಮಾಡಲಾಗುತ್ತಿದೆ ಎನ್ನುವ ಚರ್ಚೆ ನಡೆಯುತ್ತಿದೆ.

    ಸದ್ಯ ಜಿಲ್ಲೆಯಲ್ಲಿ ಸಂಸದೆ ಹಾಗೂ ಜೆಡಿಎಸ್ ಶಾಸಕರ ನಡುವೆ ಮೈಶುಗರ್ ಕಾರ್ಖಾನೆ, ಅಭಿವೃದ್ಧಿ ವಿಚಾರ ಹಾಗೂ ‘ಕಮಿಷನ್ ದಂಧೆ’ ಬಗ್ಗೆ ಆರೋಪ, ಪ್ರತ್ಯಾರೋಪ ಜೋರಾಗಿಯೇ ನಡೆಯುತ್ತಿದೆ. ಒಬ್ಬರಿಗೊಬ್ಬರು ಪ್ರತ್ಯೇಕವಾಗಿಯೇ ಹೇಳಿಕೆ ಕೊಡುತ್ತಿದ್ದಾರೆ. ಇದೀಗ ಆಣೆ, ಪ್ರಮಾಣದ ಹಂತಕ್ಕೂ ಹೋಗಿದೆ. ಆದರೆ ಎಲ್ಲರೂ ಒಂದೇ ವೇದಿಕೆಗೆ ಬಂದರೆ ನೇರ ಮಾತುಗಳು ನಡೆಯುತ್ತಿದ್ದವು. ಇದಕ್ಕೆ ದಿಶಾ ಸಭೆ ವೇದಿಕೆಯಾಗಬಹುದೆಂಬ ನಿರೀಕ್ಷೆ ಇತ್ತು. ಇದೀಗ ಅಧಿವೇಶನದ ನಡುವೆಯೇ ಸಭೆ ಆಯೋಜಿಸಿರುವುದರಿಂದ ಶಾಸಕರು ಬಹುತೇಕ ಭಾಗವಹಿಸುವುದಿಲ್ಲ.

    ವಿವಾದಕ್ಕೆ ತಿರುಗಿದ್ದ ಸಭೆ: ಹಿಂದೆಯೂ ಇದೇ ಅಧಿವೇಶನದ ಸಮಯದಲ್ಲಿಯೇ ದಿಶಾ ಸಮಿತಿ ಸಭೆ ಕರೆಯಲಾಗಿತ್ತು. ಆ ವೇಳೆ ಸುಮಲತಾ ಅವರ ವಿರುದ್ಧ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತೆಯೇ ವಿವಾದಕ್ಕೂ ಕಾರಣವಾಗಿತ್ತು. ಅಲ್ಲದೆ ತಾವುಗಳು ಭಾಗವಹಿಸುವುದರಿಂದ ಸಭೆಗೆ ಅನುಮತಿ ಕೊಡಬಾರದೆಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ನೀಡಿದ್ದರು. ಅದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕಳುಹಿಸಲಾಗಿತ್ತು. ಈ ಎಲ್ಲದರ ನಡುವೆ ಸಭೆಯೂ ನಡೆದೇ ಹೋಯಿತು. ಇತ್ತ ಇಲಾಖೆಯಿಂದ ಉತ್ತರ ಬಂದಿರಲಿಲ್ಲ.

    2022ರ ಮೇ 6ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಅಧಿವೇಶನದ ಸಮಯದಲ್ಲಿ ಸಭೆ ಆಯೋಜಿಸುವ ಸ್ಪಷ್ಟನೆ ನೀಡುವಂತೆ ಸ್ಪಷ್ಟೀಕರಣ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದಕ್ಕೆ ಮೇ 26ರಂದು ಉತ್ತರ ನೀಡಿದ್ದ ಅವರು, ಅಧಿವೇಶನ ನಡೆಯುವ ಸಮಯದಲ್ಲಿ ದಿಶಾ, ಕೆಡಿಪಿ ಸಭೆಗಳನ್ನು ಕರೆಯಲು ಯಾವುದೇ ಅಡ್ಡಿ ಇರುವುದಿಲ್ಲ. ಆದರೆ ಸಭೆಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಲು ಅನುವಾಗುವಂತೆ ಅಧಿವೇಶನ ನಡೆಯುವ ಸಮಯದಲ್ಲಿ ಸಭೆ ನಿಗದಿಪಡಿಸಬಾರದಾಗಿ ಸ್ಪಷ್ಪಪಡಿಸಿದ್ದರು. ಈ ಪತ್ರ ವ್ಯವಹಾರದಂತೆ ದಿಶಾ ಸಭೆ ಬಗ್ಗೆ ಸ್ಪಷ್ಟತೆ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts