More

    ಇಂಗ್ಲೆಂಡ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡಲು ಸಜ್ಜಾದ ದಿನೇಶ್ ಕಾರ್ತಿಕ್ ?

    ಲಂಡನ್: ಡಬ್ಲ್ಯುಟಿಸಿ ಫೈನಲ್ ಪಂದ್ಯದ ಮೂಲಕ ವೀಕ್ಷಕ ವಿವರಣೆಗೆ ಪದಾರ್ಪಣೆ ಮಾಡಿರುವ ಭಾರತ ತಂಡದ ಆಟಗಾರ ದಿನೇಶ್ ಕಾರ್ತಿಕ್, ಮುಂಬರುವ ಸರಣಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುವುದಾಗಿ ಸಂದೇಶ ರವಾನಿಸಿದ್ದಾರೆ. ರಿಷಭ್ ಪಂತ್ ಹಾಗೂ ವೃದ್ಧಿಮಾನ್ ಸಾಹ ಐಸೋಲೇಷನ್‌ನಲ್ಲಿರುವ ಹಿನ್ನೆಲೆಯಲ್ಲಿ ತಜ್ಞ ವಿಕೆಟ್ ಕೀಪರ್ ಆಗಿರುವ ದಿನೇಶ್ ಕಾರ್ತಿಕ್, ಜಸ್ಟ್ ಸೇಯಿಂಗ್ ಎಂದು ಬರೆದು ತಮ್ಮ ಕೆಕೆಆರ್ ತಂಡದ ಕಿಟ್ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿಗದಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮ, ನಿಮ್ಮಲ್ಲಿ ಮತ್ತಷ್ಟು ಕ್ರಿಕೆಟ್ ಉಳಿದಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದಿನೇಶ್ ಕಾರ್ತಿಕ್, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್, ಸ್ಟಾಟ್ ಪೋಸಿಂಗ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಒಲಿಂಪಿಕ್ಸ್ ಸಿದ್ಧತೆ ನಡುವೆಯೂ ಸಾನಿಯಾ ಮಿರ್ಜಾ ಭರ್ಜರಿ ಸ್ಟೆಪ್ಸ್,

    ಐಪಿಎಲ್ ಫ್ರಾಂಚೈಸಿ ಕೆಕೆಆರ್ ತಂಡದ ಮಾಜಿ ನಾಯಕನೂ ಆಗಿರುವ ದಿನೇಶ್ ಕಾರ್ತಿಕ್, ಸದ್ಯ ಇಂಗ್ಲೆಂಡ್‌ನಲ್ಲಿ ವೀಕ್ಷಕ ವಿವರಣೆ ಮಾಡುತ್ತಿದ್ದಾರೆ. ಡಬ್ಲ್ಯುಟಿಸಿ ಫೈನಲ್ ಪಂದ್ಯದ ಬಳಿಕ, ಇಂಗ್ಲೆಂಡ್-ಶ್ರೀಲಂಕಾ ನಡುವಿನ ಸರಣಿಯನ್ನು ಸ್ಕೈಸ್ಪೋರ್ಟ್ಸ್‌ಗೆ ವೀಕ್ಷಕ ವಿವರಣೆ ನೀಡಿದ್ದರು. ಇದೀಗ ಮುಂಬರುವ ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೂ ವೀಕ್ಷಕ ವಿವರಣೆ ನೀಡಲಿದ್ದಾರೆ. ಬಳಿಕ ಕಾರ್ತಿಕ್ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ನಡೆಯಲಿರುವ 14ನೇ ಐಪಿಎಲ್ ಭಾಗ-2ರಲ್ಲಿ ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಂಚಲಿವೆ ಮೇಡ್ ಇನ್ ಇಂಡಿಯಾ ಕ್ರೀಡಾ ಸಾಮಗ್ರಿಗಳು!

    ರೂಪಾಂತರಿ ಡೆಲ್ಟಾ ಸೋಂಕಿತರಾಗಿರುವ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ದಂತವೈದ್ಯರ ಮೂಲಕ ಸೋಂಕು ಹರಡಿರಬಹುದು ಎನ್ನಲಾಗಿದೆ. ಪಂತ್‌ಗೆ ಜುಲೈ 8ರಂದು ಸೋಂಕು ಪತ್ತೆಯಾಗಿತ್ತು. ಇದಕ್ಕೂ ಮುನ್ನ ಜುಲೈ 5 ಮತ್ತು 6ರಂದು ಪಂತ್ ಲಂಡನ್‌ನಲ್ಲಿ ದಂತವೈದ್ಯರ ಬಳಿ ತೆರಳಿದ್ದರು. ಬಳಿಕ ಭಾರತ ತಂಡದ ಇತರ ಸದಸ್ಯರ ಜತೆಗೆ ಜುಲೈ 7ರಂದು ಕೋವಿಡ್ ಲಸಿಕೆಯ 2ನೇ ಡೋಸ್ ಹಾಕಿಸಿಕೊಂಡಿದ್ದರು. ಪಂತ್ ಜೂನ್ 29ರಂದು ವೆಂಬ್ಲೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್-ಜರ್ಮನಿ ನಡುವಿನ ಯುರೋ ಕಪ್ ಫುಟ್‌ಬಾಲ್ ಪಂದ್ಯ ವೀಕ್ಷಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts