More

    ರಾಜ್ಯದ ಪ್ರತಿಯೊಬ್ಬ ಬಡವನಿಗೆ 5kg ಅಕ್ಕಿ ಸಿಗುತ್ತಿರುವುದು ಮೋದಿಯಿಂದಲ್ಲ ಬದಲಿಗೆ..: ದಿನೇಶ್ ಗುಂಡೂರಾವ್

    ಬೆಂಗಳೂರು: ರಾಜ್ಯದ ಜನತೆಗೆ ಅಕ್ಕಿ ಕೊಡುವ ವಿಚಾರದಲ್ಲಿ ಇದೀಗ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಡುವೆ ಟ್ವೀಟ್ ಸಮರ ತಾರಕಕ್ಕೇರಿದ್ದು, ಬಿಜೆಪಿ ಶಾಸಕ ಸಿ.ಟಿ. ರವಿ(CT Ravi) ಮತ್ತು ಸಚಿವ ದಿನೇಶ್ ಗುಂಡೂರಾವ್(Dinesh Gundu rao) ನಡುವೆ ಟ್ವೀಟ್ ಜಟಾಪಟಿ ನಡೆದಿದೆ.

    ಇದನ್ನೂ ಓದಿ: ಬಿಜೆಪಿಗರ ಯಾವ ಕುತಂತ್ರವೂ ಅನ್ನಭಾಗ್ಯದ ದಾಸೋಹವನ್ನು ತಡೆಯಲು ಸಾಧ್ಯವಿಲ್ಲ: ಕಾಂಗ್ರೆಸ್​

    “ರಾಜ್ಯದ ಪ್ರತಿಯೊಬ್ಬ ಬಡವರಿಗೂ ಪ್ರತಿ ತಿಂಗಳೂ ಐದು ಕೆಜಿ ಅಕ್ಕಿ ಕೊಡುತ್ತಿರುವುದು ನರೇಂದ್ರ ಮೋದಿ(Narendra Modi) ಅವರ ನೇತೃತ್ವದ ಬಿಜೆಪಿ ಸರಕಾರ. ಸಿದ್ದರಾಮಯ್ಯನವರೇ ನಿಮ್ಮ ಪ್ರಣಾಳಿಕೆ ಪ್ರಕಾರ ನೀವು ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಿ. ಅಕ್ಕಿ ಹೊಂದಿಸಲು ಸಾಧ್ಯವಾಗದಿದ್ದರೆ ಅಲ್ಲಿಯವರೆಗೆ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿಯ ಮಾರುಕಟ್ಟೆ ದರವನ್ನು ಬಡವರ ಖಾತೆಗೆ ಹಾಕಿ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಟಿ. ರವಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು.

    ಸಿ.ಟಿ. ರವಿ ಟ್ವೀಟ್​ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, “ಸಿ.ಟಿ. ರವಿ ಅವರೇ ರಾಜ್ಯದ ಪ್ರತಿಯೊಬ್ಬ ಬಡವನಿಗೆ 5kg ಅಕ್ಕಿ ಸಿಗುತ್ತಿರುವುದು ನಿಮ್ಮ ಮೋದಿಯಿಂದಲ್ಲ ಬದಲಿಗೆ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್(UPA2) ಅವಧಿಯಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯ್ದೆಯಿಂದಾಗಿ. ದೇಶದ 66% ರಷ್ಟು ಜನರ ಹೊಟ್ಟೆ ತುಂಬಿಸುತ್ತಿರುವುದು ನಾವು ತಂದ ಕಾಯ್ದೆಯೇ ಹೊರತು ಇದರಲ್ಲಿ ನಿಮ್ಮ‌ ಮೋದಿ ಸರ್ಕಾರದ ಹೆಚ್ಚುಗಾರಿಕೆಯೇನಿಲ್ಲ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಏಷ್ಯಾಕಪ್​ 2023 ವೇಳಾಪಟ್ಟಿ ಪ್ರಕಟ: 15 ವರ್ಷದ ಬಳಿಕ ಪಾಕ್​ ಆತಿಥ್ಯ, ಶತ್ರು ನೆಲದಲ್ಲಿ ಭಾರತ ಆಡಲಿದೆಯೇ?

    “ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ 10kg ಅಕ್ಕಿ ಕೊಟ್ಟೇ ಕೊಡುತ್ತೀವಿ. ನಿಮಗೆ ರಾಜ್ಯದ ಜನರ ಮೇಲೆ ಅಷ್ಟು ಕಾಳಜಿ ಇದ್ದರೆ, ನಮ್ಮ ರಾಜ್ಯಕ್ಕೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿರುವುದು ಯಾಕೆ ಎಂದು ನಿಮ್ಮ ಮೋದಿಯನ್ನು ಪ್ರಶ್ನಿಸಿ. ಕೇಂದ್ರದ ಮೇಲೆ ಒತ್ತಡ ಹೇರಿ. ಮರೆಯಬೇಡಿ 35% ಬಿಜೆಪಿಗೆ ಮತ ಹಾಕಿದವರಿಗೂ 1೦ಕೆಜಿ ದೊರಕಲಿದೆ” ಎಂದು ಟ್ವೀಟ್ ಮೂಲಕ ಸಿ.ಟಿ. ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಕೇರಳದಲ್ಲಿ ಕೆಎಂಎಫ್ ಉತ್ಪನ್ನಗಳ‌ ಮಾರಾಟಕ್ಕೆ ವಿರೋಧ: ಕಾಂಗ್ರೆಸ್‌ನ ಒಡಕು ನೀತಿಯೇ ಇದಕ್ಕೆ ಕಾರಣ ಎಂದ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts