More

    ‘ದೀದಿ ಡೆಂಗ್ಯು-ಮಲೇರಿಯಾದೊಂದಿಗೆ ಸ್ನೇಹ ಹೊಂದಿದ್ದಾರೆ’ ಎಂದ ಷಾ!

    ಕೊಲ್ಕತಾ : ಚುನಾವಣೆ ಸಮಯ ಬಂದರೆ ರಾಜಕಾರಣಿಗಳ ಮಾತು ಎಲ್ಲಿಂದ ಎಲ್ಲಿಗೋ ಹೋಗುತ್ತದೆ. ಇಂಥದೇ ಒಂದು ಮಾತನ್ನು ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಡಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೇಲೆ ‘ಮಲೇರಿಯಾ-ಡೆಂಗ್ಯುವಿನೊಂದಿಗೆ ಸ್ನೇಹ ಹೊಂದಿರುವ’ ವಿಚಿತ್ರ ಆರೋಪ ಮಾಡಿದ್ದಾರೆ!

    ಆದಿವಾಸಿಗಳ ಜನಸಂಖ್ಯೆ ಹೆಚ್ಚಿರುವ ಬಂಗಾಳದ ಝರ್​ಗ್ರಾಮದಲ್ಲಿ ಇಂದು ಚುನಾವಣಾ ಪ್ರಚಾರ ರಾಲಿಯಲ್ಲಿ ಮಾತನಾಡುತ್ತಿದ್ದ ಅಮಿತ್​ ಷಾ, “ದೀದಿ ಹೋಗುವವರೆಗೆ ನೀವು ಮಲೇರಿಯಾ ಮುಕ್ತರಾಗುವುದಿಲ್ಲ. ಅವರು ಡೆಂಗ್ಯು ಮತ್ತು ಮಲೇರಿಯಾದೊಂದಿಗೆ ಸ್ನೇಹ ಹೊಂದಿದ್ದಾರೆ. ನಮಗೆ ಮತ ಹಾಕಿ, ನಾವು ಈ ಖಾಯಿಲೆಗಳನ್ನು ಎರಡು ವರ್ಷಗಳಲ್ಲಿ ನಿರ್ಮೂಲನೆ ಮಾಡುತ್ತೇವೆ” ಎಂದಿದ್ದಾರೆ.

    ಇದನ್ನೂ ಓದಿ: ಸಿಡಿನಾ? ಅದ್ಯಾವುದು? … ನಂಗೆ ಗೊತ್ತೇ ಇಲ್ಲ… ನಿಮಗೇ ಚೆನ್ನಾಗಿ ಗೊತ್ತಿರ್ಬೇಕಲ್ಲಮ್ಮಾ… ಎಂದು ನಕ್ಕ ಸಿಎಂ

    ಮುಂದುವರೆದು ಮಾತನಾಡಿದ ಷಾ, “ಒಂದೆಡೆ ಪ್ರಧಾನಿ ಮೋದಿ ಅವರು ಆದಿವಾಸಿಗಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಇನ್ನೊಂದೆಡೆ ದೀದಿ ತಮ್ಮ ಸೋದರಳಿಯನ ಉದ್ಧಾರಕ್ಕಾಗಿ ದುಡಿಯುತ್ತಿದ್ದಾರೆ. ನಿಮಗೆ ಯಾರು ಬೇಕು ?” ಎಂದು ಕೇಳಿದರು.

    “ಝರ್​ಗ್ರಾಮವು ಆದಿವಾಸಿಗಳ, ಕಾಡುಗಳ ಮತ್ತು ಕೆಂಪು ಮಣ್ಣಿನ ನಾಡು. ಮಾ ಮಾಟಿ ಮಾನುಷ್ ಎನ್ನುತ್ತಾ ದೀದಿ ಸರ್ಕಾರ ಮಾಡಿದರು. ಆದರೆ ಅವರು ನಿಮಗಾಗಿ ಏನೂ ಮಾಡಲಿಲ್ಲ. ಕುಡಿಯುವ ನೀರು ಕೂಡ ಇಲ್ಲ. ದೀದಿಯನ್ನು ಬಿಡಿ, ಮೋದಿಜಿ ಅವರ ಕಮಲಕ್ಕೆ ಮತ ಹಾಕಿ. ಐದು ವರ್ಷಗಳಲ್ಲಿ ನಾವು ಕುಡಿಯುವ ನೀರು ತರುತ್ತೇವೆ” ಎಂದು ಷಾ ಭರವಸೆ ನೀಡಿದರು. (ಏಜೆನ್ಸೀಸ್)

    ‘ಎಲೆಕ್ಷನ್ ಡ್ಯೂಟಿಗೆ ಯುಪಿ ಪೊಲೀಸ್ ಬೇಡ’ : ಟಿಎಂಸಿ ತಕರಾರು

    ಹ್ಯಾಪಿ ಶಾಪಿಂಗ್ : ಕರೊನಾ ಲಸಿಕೆ ಪಡೆದವರಿಗೆ ಡಿಸ್ಕೌಂಟ್ ಕೂಪನ್​ !

    “ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ” ಎಂದ ಡಿಎಂಕೆ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts