More

    IPL 2024: ಮುಂಬರುವ ಪಂದ್ಯಗಳಿಗೆ ಧೋನಿಯೇ ಕ್ಯಾಪ್ಟನ್​! ಸಿಕ್ಕಿದೆ ಹೊಸ ಸುಳಿವು…

    ಚೆನ್ನೈ: ಮಾರ್ಚ್​ 22ರಂದು ಅದ್ದೂರಿ ಚಾಲನೆ ಮೂಲಕ ಪ್ರಾರಂಭವಾದ ಇಂಡಿಯನ್​ ಪ್ರೀಮಿಯರ್ ಲೀಗ್​ 2024ರ ಆವೃತ್ತಿಯು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಮನರಂಜನೆಯ ಭರವಸೆ ಮೂಡಿಸಿದ್ದು, ಮೊದಲ ಪಂದ್ಯದಲ್ಲೇ ಮುಖಾಮುಖಿಯಾದ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಭರ್ಜರಿ ಪೈಪೋಟಿ ನಡೆಸಿತು. ಅಂತಿಮವಾಗಿ ಎಂದಿನಂತೆ ಟೂರ್ನಿಯಲ್ಲಿ ಗೆಲುವಿನ ಮುಖೇನ ಶುಭಾರಂಭ ಮಾಡಿದ್ದು, ಧೋನಿ ಪಡೆ.

    ಇದನ್ನೂ ಓದಿ: ಪರೋಕ್ಷವಾಗಿ ಮಾಧ್ಯಮದವರಿಗೆ ದೇಶ ದ್ರೋಹಿಗಳು ಎಂದ್ರಾ ಸದಾನಂದಗೌಡ್ರು?

    ಕಳೆದ 16 ಸೀಸನ್​ಗಳಲ್ಲಿ 14 ಬಾರಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, ಈ ಬಾರಿ ತಮ್ಮ ನಾಯಕತ್ವದಿಂದ ಹೊರಗುಳಿದು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಿಕೊಟ್ಟರು. ಸಿಎಸ್​ಕೆ ತಂಡಕ್ಕೆ ಓಪನರ್​ ಆಗಿ ಕಣಕ್ಕಿಳಿಯುವ ರುತುರಾಜ್ ಗಾಯಕ್ವಾಡ್​ಗೆ ಚೆನ್ನೈ ತಂಡದ ಕ್ಯಾಪ್ಟನ್ಸಿಯನ್ನು ಹಸ್ತಾಂತರಿಸಲಾಯಿತು.

    ಇಷ್ಟು ಸೀಸನ್​ಗಳಲ್ಲಿ ಸಿಎಸ್​ಕೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಧೋನಿ ಕ್ಯಾಪ್ಟನ್ಸಿ ಇನ್ನುಂದೆ ಕಾಣಿಸುವುದಿಲ್ಲ ಎಂಬ ಸಂಗತಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಭಾರೀ ನೋವುಂಟು ಮಾಡಿತು. ಆರ್​ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ರುತುರಾಜ್​ ಕ್ಯಾಪ್ಟನ್​ ಆಗಿ ಸಿಎಸ್​ಕೆ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿ, ಗೆಲುವಿನೆಡೆಗೆ ಕೊಂಡೊಯ್ದರು. ಇದು ಕ್ರಿಕೆಟ್​ ಅಭಿಮಾನಿಗಳಿಗೆ ಸಂತಸ ತಂದರೂ, ಧೋನಿ ನಾಯಕತ್ವ ಇರದಿರುವುದು ಬೇಸರ ಮೂಡಿಸಿತ್ತು.

    ಇದನ್ನೂ ಓದಿ: ದರೋಡೆಕೋರರು ಎಂದು ಸ್ನೇಹಿತರಿಬ್ಬರ ಕೊಲೆ: ನಾಲ್ವರು ಅರೆಸ್ಟ್​

    ಆದರೆ, ಆರ್​ಸಿಬಿ ವಿರುದ್ಧ ಮೊದಲ ಪಂದ್ಯದಲ್ಲಿ ಕಂಡುಬಂದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಸಿಎಸ್​ಕೆ ಅಭಿಮಾನಿಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಕ್ಯಾಪ್ಟನ್ ಆಗಿ ಗ್ರೌಂಡ್​ನಲ್ಲಿ ರುತುರಾಜ್​ ಕಾಣಿಸಿಕೊಂಡರು, ಫೀಲ್ಡಿಂಗ್ ಸೆಟ್​ ಮಾಡಿದ್ದು ಧೋನಿ! ಈ ದೃಶ್ಯ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಕಮೆಂಟ್ ಮಾಡಿದ ಫ್ಯಾನ್ಸ್​, ಅಸಲಿಗೆ ನಾಯಕ ಯಾರು? ನಮ್ಮ ಕ್ಯಾಪ್ಟನ್ ಮಾಹಿಯೇ ಎಂದೆಲ್ಲಾ ಅಭಿಪ್ರಾಯಿಸಿದ್ದಾರೆ.

    ಈ ವೀಡಿಯೋವನ್ನು ನೋಡಿದ ಸಿಎಸ್​ಕೆ ಅಭಿಮಾನಿಗಳು ಕಳೆದ ವರ್ಷದಂತೆಯೇ ಈ ಸೀಸನ್​ನಲ್ಲಿ​ ಕೂಡ ಮಧ್ಯಂತರ ಪಂದ್ಯಗಳಿಂದ ಧೋನಿ ನಾಯಕತ್ವದ ಜವಾಬ್ದಾರಿ ಸ್ವೀಕರಿಸಬಹುದು ಎಂದು ಊಹಿಸಿದ್ದಾರೆ. ಆದ್ರೆ, ಇದು ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್),.

    ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts