More

  ದರೋಡೆಕೋರರು ಎಂದು ಸ್ನೇಹಿತರಿಬ್ಬರ ಕೊಲೆ: ನಾಲ್ವರು ಅರೆಸ್ಟ್​

  ನವದೆಹಲಿ: ದರೋಡೆಕೋರರು ಎಂದು ತಪ್ಪಾಗಿ ಭಾವಿಸಿ ತನ್ನ ಇಬ್ಬರು ಸ್ನೇಹಿತರನ್ನು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

  ಇದನ್ನೂ ಓದಿ: ತನ್ನನ್ನು ಹುಚ್ಚ ಎಂದಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ!

  ದೆಹಲಿಯ ರಣಹೊಲ್ಲಾ ಪ್ರದೇಶದಲ್ಲಿ ಕಳೆದ ಶುಕ್ರವಾರ ರಾಜೇಶ್ ಯಾದವ್ ಮತ್ತು ಮುಖೇಶ್ ಸಿಂಗ್ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  ಬಂಧಿತ ನಾಲ್ವರು ಸ್ನೇಹಿತರನ್ನು ಮಾರ್ಚ್ 15 ರಂದು ಇಬ್ಬರು ವ್ಯಕ್ತಿಗಳು ತಮ್ಮ ಸ್ನೇಹಿತರನ್ನು ದರೋಡೆ ಮಾಡಿದ್ದರು. ಅದಕ್ಕೆ ಪಾಠ ಕಲಿಸಬೇಕೆಂದು ನಾಲ್ಕು ಮಂದಿ ದರೋಡೆಕೋರರನ್ನು ಹುಡುಕಲು ಪ್ರಾರಂಭಿಸಿದ್ದರು. ಎರಡು ದಿನಗಳ ನಂತರ ದರೋಡೆಕೋರರು ಆ ಪ್ರದೇಶದ ಬಾರ್​​ವೊಂದರಲ್ಲಿ ಮದ್ಯಪಾನ ಮಾಡುತ್ತಿದ್ದರೆಂಬ ಮಾಹಿತಿ ಅವರಿಗೆ ಸಿಕ್ಕಿತ್ತು.

  ದರೋಡೆಕೋರರ ಸಹಚರರು ಎಂದು ಭಾವಿಸಿ ನಾಲ್ವರು ಆರೋಪಿಗಳು ರಾಜೇಶ್​ ಯಾದವ್​ ಮತ್ತು ಮುಕೇಶ್​ ಸಿಂಗ್ ಮೇಲೆ ಚಾಕು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ರಾಜೇಶ್ ಮತ್ತು ಮುಖೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

  ಗೌರವ್ ಕುಮಾರ್, ಕೇಶ್ರಿ ಕುಮಾರ್ ಪಾಂಡೆ, ಸಂದೇಶ್ ಕುಮಾ ಮತ್ತು ಗೌರವ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  ರೈಲಿನೊಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ: ಸ್ಥಳದಲ್ಲೇ ನಾಮಕರಣ! ಹೆಸರು ಕೇಳಿದ್ರೆ ಶಾಕ್ ಆಗ್ತೀರಾ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts