More

    ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸಿಎಸ್‌ಕೆ ನಾಯಕ ಧೋನಿಗೆ ನೀಡಿದ ಸಲಹೆ ಏನು ಗೊತ್ತೇ?

    ನವದೆಹಲಿ: ಮಾಜಿ ಕ್ರಿಕೆಟಿಗ ಗೌತಮ್ ಗಂಭಿರ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ ಕ್ರಿಕೆಟ್ ಜತೆಗಿನ ನಂಟು ಮಾತ್ರ ಬಿಟ್ಟಿಲ್ಲ. ತಂಡದ ಆಡಳಿತ ಮಂಡಳಿ ವಿರುದ್ಧ ಹೋಟೆಲ್ ಕೊಠಡಿ ವಿಚಾರಕ್ಕೆ ಮುನಿಸಿಕೊಂಡು ಸಿಎಸ್‌ಕೆ ಆಲ್ರೌಂಡರ್ ಸುರೇಶ್ ರೈನಾ ವಾಪಸಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಗಂಭೀರ್, ಧೋನಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಕ್ರಿಕೆಟ್ ವಲಯದಲ್ಲಿ ಬೆಸ್ಟ್ ಫಿನಿಷರ್ ಎನಿಸಿಕೊಂಡಿರುವ ಧೋನಿ, ರೈನಾ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯವಂತೆ ಗಂಭೀರ್ ಸಲಹೆ ನೀಡಿದ್ದಾರೆ. ಇದರೊಂದು ಉತ್ತಮ ಅವಕಾಶ ಕೂಡ ಎಂದು ಗಂಭೀರ್ ಹೇಳಿದ್ದಾರೆ.

    ಇದನ್ನೂ ಓದಿ: VIDEO | ಶ್ರೀಶಾಂತ್​ ನಿಷೇಧ ಮುಕ್ತಾಯಕ್ಕೆ ದಿನಗಣನೆ, ಬೌಲಿಂಗ್​ ಅಭ್ಯಾಸ ಆರಂಭ

    ಕಳೆದ ಒಂದು ವರ್ಷದಿಂದ ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ತಮ್ಮ ಎಂದಿನ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಲು ಮೂರನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗಿಳಿಯಬೇಕು ಎಂದು ಗಂಭೀರ್ ತಿಳಿಸಿದ್ದಾರೆ. ಫಿನಿಷರ್ ಸ್ಥಾನದಲ್ಲಿ ಯಾರು ಬೇಕಾದರೂ ಬ್ಯಾಟಿಂಗ್ ಮಾಡಬಹುದು ಎಂದು ಕೆಕೆಆರ್ ಪರ 2 ಬಾರಿ ಟ್ರೋಫಿ ಜಯಿಸಿರುವ ಗಂಭೀರ್ ಹೇಳಿದ್ದಾರೆ. ರೈನಾ ಅನುಪಸ್ಥಿತಿಯಲ್ಲಿ ಧೋನಿ 3ನೇ ಕ್ರಮಾಂಕದಲ್ಲಿ ಬರುವುದು ಅಗತ್ಯ ಇದೆ ಎಂದಿದ್ದಾರೆ.

    ಇದನ್ನೂ ಓದಿ: ವಿಂಡೀಸ್​ ದಿಗ್ಗಜ ಕರ್ಟ್ನಿ ವಾಲ್ಶ್​ ಪ್ರಕಾರ, ಆಂಡರ್​ಸನ್​ ದಾಖಲೆಯನ್ನು ಮುರಿಯಬಲ್ಲ ಭಾರತದ ವೇಗಿ ಯಾರು ಗೊತ್ತೇ?

    ಧೋನಿ 3ನೇ ಕ್ರಮಾಂಕದಲ್ಲಿ ಬಂದರೆ, ಡ್ವೇನ್ ಬ್ರಾವೊ, ಸ್ಯಾಮ್ ಕರ‌್ರನ್, ಕೇದಾರ್ ಜಾಧವ್ ಎಲ್ಲರೂ ಫಿನಿಷಿಂಗ್ ಸ್ಥಾನಕ್ಕೆ ಸೂಕ್ತವಾಗಿದ್ದಾರೆ ಎಂದು ಗಂಭೀರ್ ಹೇಳೀದ್ದಾರೆ. ಗಂಭೀರ್ ಸಾರಥ್ಯದಲ್ಲಿ ಕೆಕೆಆರ್ 2012, 2014ರಲ್ಲಿ ಪ್ರಶಸ್ತಿ ಜಯಿಸಿತ್ತು.

    VIDEO | ಕನ್ನಡಿಗ ಜಾವಗಲ್​ ಶ್ರೀನಾಥ್​ ಬರ್ತ್​ಡೇಗೆ ವಿಶೇಷ ವಿಡಿಯೋ ಹಂಚಿಕೊಂಡ ಯುವರಾಜ್​ ಸಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts