More

    ಧಾರವಾಡದಲ್ಲಿ ಶುರುವಾಯ್ತು ಹತ್ತಿ ವ್ಯಾಪಾರಿಗಳ ವಿರುದ್ಧ ರೈತರ ಹೋರಾಟ

    ಧಾರವಾಡ: ಹತ್ತಿ ಬೆಳೆಗಾರರ ಜೊತೆ ವ್ಯಾಪಾರಿಗಳು ಚೆಲ್ಲಾಟವಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು ವ್ಯಾಪಾರಿಗಳು ಮಾಡಿದ್ದೇ ರೇಟು, ಆಡಿದ್ದೇ ಆಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

    ವ್ಯಾಪಾರಿಗಳ ಚೆಲ್ಲಾಟದಿಂದ ರೈತರು ರೋಸಿ ಹೋಗಿದ್ದು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಏಕಾಏಕಿ ಹತ್ತಿ ಬೆಲೆ ಕುಸಿತಗೊಂಡಿದೆ. ಆರಂಭದಲ್ಲಿ ಕ್ವಿಂಟಾಲ್ ಹತ್ತಿಗೆ 10 ಸಾವಿರದ ಮೇಲೆ ದರ ಇತ್ತು. ಆದರೆ ಇತ್ತೀಚೆಗೆ ದಿಢೀರ ವ್ಯಾಪಾರಿಗಳು ದರ ಕಡಿಮೆ ಮಾಡಿದ್ದಾರೆ. ಈಗ ಪ್ರತೀ ಕ್ವಿಂಟಾಲ್​ಗೆ 8500ರೂ. ವರೆಗೆ ವ್ಯಾಪಾರಿಗಳು ದರವನ್ನು ಇಳಿಸಿದ್ದಾರೆ.

    ಕಳೆದ ವರ್ಷ 14 ಸಾವಿರಕ್ಕೆ ದರ ಏರಿತ್ತು. ಇದನ್ನು ಆಧರಿಸಿ 15 ಸಾವಿರ ಆಗಬಹುದು ಎಂದು ರೈತರು ಲೆಕ್ಕಾಚಾರ ಮಾಡಿದ್ದರು. ಆದರೆ ರೈತರ ಲೆಕ್ಕಾಚಾರವನ್ನು ವ್ಯಾಪಾರಿಗಳು ಬುಡಮೇಲು ಮಾಡಿದ್ದು ಬೆಳೆಗಾರರಿಗೆ ಆಘಾತ ನೀಡಿದ್ದಾರೆ.

    ಹತ್ತಿ ವ್ಯಾಪಾರಿಗಳ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದಿರುವ ಕಾರಣ ಈ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ. ಸರ್ಕಾರದಿಂದ ಖರೀದಿ ಕೇಂದ್ರ ಆರಂಭವೂ ವಿಳಂಬ ಆಗುತ್ತಿರುವುದನ್ನೇ ಲಾಭವಾಗಿಸಿಕೊಂಡಿರುವ ವ್ಯಾಪಾರಿಗಳು ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮನೆಗಳಲ್ಲಿ ಹತ್ತಿ ದಾಸ್ತಾನು ಇಟ್ಟುಕೊಳ್ಳಲೂ ರೈತರು ಪರದಾಡುತ್ತಿದ್ದು ಮನೆಗಳಲ್ಲಿಯೇ ಇಟ್ಟುಕೊಂಡು ಖರೀದಿ ಕೇಂದ್ರ ಆರಂಭವಾಗುವುದಕ್ಕೆ ರೈತರು ಕಾಯುತ್ತಿದ್ದಾರೆ. ಇದೀಗ ಧಾರವಾಡದಲ್ಲಿ ದರ ಕುಸಿತದ ವಿರುದ್ಧ ರೈತರು ಹೋರಾಟ ಶುರುಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts