More

    ಇಂದು ನಡೆಯಲಿದೆ ಬಿಜೆಪಿ ನಾಯಕರ ಹೈ ವೋಲ್ಟೇಜ್​ ಮೀಟಿಂಗ್​!

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಚುನಾವಣೆ ಗೆಲ್ಲಲು ಬಿಜೆಪಿ ಮಹಾತಂತ್ರ ರಚಿಸುತ್ತಿದ್ದು ದೆಹಲಿಯಲ್ಲಿ ಸಭೆ ನಂತರ ರಾಜ್ಯದಲ್ಲೂ ಮಹತ್ವಕಾರಿ ಸಭೆ ನಡೆಯಲಿದೆ.

    ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ನಾಯಕರು ಸೂಚಿಸಿರುವ ಕಾರ್ಯತಂತ್ರಗಳು, ಕೊಟ್ಟ ಕಾರ್ಯಗಳ ಅನುಷ್ಠಾನ ಸಂಬಂಧ ಸಭೆ ನಡೆಯಲಿದ್ದು ಇಂದು ರಾಜ್ಯ ನಾಯಕರ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಆ ತಂತ್ರಗಳನ್ನು ಇಲ್ಲಿ ಜಾರಿ ಮಾಡುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಸಭೆ ನಡೆಯಲಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ‌ ಮುಂತಾದ ಪ್ರಮುಖರು ಸಭೆಯಲ್ಲಿ ಮುಂದಿನ ದಿನಗಳ ಚುನಾವಣೆಗೆ ಅಂತಿಮ ರೂಟ್ ಮ್ಯಾಪ್ ತಯಾರಿ ಮಾಡಲಿದ್ದಾರೆ.

    ಕಾಂಗ್ರೆಸ್, ಜೆಡಿಎಸ್ ನ ಫ್ರೀ ಯೋಜನೆ ಗಳಿಗೂ ಪ್ರತಿ ಯೋಜನೆಗಳ ಘೋಷಣೆ ಸಂಬಂಧ ಚರ್ಚೆ ನಡೆಯಲಿದ್ದು ಕಾಂಗ್ರೆಸ್, ಜೆಡಿಎಸ್ ತಂತ್ರಗಳಿಗೆ ಪ್ರತಿತಂತ್ರವನ್ನು ಇಂದು ಹೂಡಲಿದ್ದಾರೆ.

    ಇಂದು ನಿರ್ಣಾಯಕ ಸಮುದಾಯ ಗಳನ್ನು ಸೆಳೆಯುವುದರ ಬಗ್ಗೆ, ಕಾಂಗ್ರೆಸ್, ಜೆಡಿಎಸ್​ನ ಪ್ರಬಲ ನಾಯಕರ ಕ್ಷೇತ್ರಗಳಲ್ಲಿ ಯಾವ ರೀತಿ ತಂತ್ರ ಮಾಡಬೇಕು, ಚುನಾವಣಾ ಪ್ರಣಾಳಿಕೆ, ಪ್ರಚಾರದ ಬಗ್ಗೆ ಚರ್ಚೆ ನಡೆಯಲಿದ್ದು ಈ ಬಾರಿ ಪ್ರಚಾರಕ್ಕೆ ಸ್ಟಾರ್ ಕ್ಯಾಂಪನೇರ್ ಯಾರಾಗಲಿದ್ದಾರೆ ಎನ್ನುವ ಬಗ್ಗೆಯೂ ಮಹತ್ವದ ನಿರ್ಧಾರ ಇಂದು ರಾಜ್ಯ ಬಿಜೆಪಿ ನಾಯಕರು ಕೈಗೊಳ್ಳಲಿದ್ದಾರೆ.

    ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಬಗ್ಗೆಯೂ ಚರ್ಚೆ ನಡೆಯಲಿದ್ದು 224 ಕ್ಷೇತ್ರಗಳಿಗೆ ಟಿಕೆಟ್ ಆಯ್ಕೆ ಸಂಬಂಧವೂ ಮಹತ್ವದ ಚರ್ಚೆ ನಡೆಯಲಿದೆಯಾ ಎನ್ನುವ ಪ್ರಶ್ನೆ ಎದ್ದಿದೆ?

    ಜನಸಂಕಲ್ಪ, ವಿಜಯ ಸಂಕಲ್ಪ, ಬಸ್ಸು ಯಾತ್ರೆ ಯಶಸ್ವಿಯಾಗಿದ್ದು ಜನರನ್ನು ಸೆಳೆಯಲು ಮಾಡಬೇಕಾದ ತಂತ್ರಗಾರಿಕೆ ಎಂದು ಹೈಕಮಾಂಡ್ ನಾಯಕರು ತಂತ್ರಗಳನ್ನು ಹಾಕಿ ಕೊಟ್ಟಿದ್ದಾರೆ. ಆ ತಂತ್ರಗಳ ಆಧಾರದಲ್ಲಿ ಇಲ್ಲಿ ರಣತಂತ್ರ ರೂಪಿಸುವುದು ಬಿಜೆಪಿಯ ಆಲೋಚನೆ. ಬೂತ್ ಮಟ್ಟದಿಂದ ಪಕ್ಷ ಬಲವರ್ಧನೆ ಮಾಡುವ ಬಗ್ಗೆ ಈ ಮಹತ್ವಕಾರಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು ಚುನಾವಣೆಗೆ ಬಿಜೆಪಿ ಯನ್ನು ಸನ್ನದ್ಧಗೊಳಿಸುವುದು ಈ ಹೈ ವೋಲ್ಟೇಜ್​ ಮೀಟಿಂಗ್​ನ ಪ್ರಮುಖ ಉದ್ದೇಶವಾಗಿದೆ.

    ಕೆಲ ಜಿಲ್ಲೆಗಳಲ್ಲಿ ಉಂಟಾಗಿರುವ ಭಿನ್ನಮತಶಮನ ಮಾಡುವ ಬಗ್ಗೆ ಸಮಾಲೋಚನೆ ಮಾಡಲಿದ್ದು ವಿಧಾನಸಭಾ ಕ್ಷೇತ್ರ, ಜಿಲ್ಲೆಗಳಲ್ಲಿ ಪಕ್ಷ ಗಟ್ಟಿಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಚಾರದ ಬಗ್ಗೆ ಚರ್ಚೆ ಮಾಡುವ ಆಲೋಚನೆ ರಾಜ್ಯ ನಾಯಕರಿಗಿದ್ದು ಸಭೆ ನಂತರ ಪದಾಧಿಕಾರಿಗಳ ಜೊತೆಗೂ ಬಿ ಎಲ್ ಸಂತೋಷ್ ಸಭೆ ನಡೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts