More

    ಯಾದಗಿರಿಯಲ್ಲಿ 5104 ಕೋಟಿ ರೂ. ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

    ಯಾದಗಿರಿ: ಕರ್ನಾಟಕದ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಂಕುಸ್ಥಾಪನೆ ಮತ್ತು ಯೋಜನೆಗಳ ಉದ್ಘಾಟನೆ ನೆರವೇರಿಸಿದರು. ಮಧ್ಯಾಹ್ನ 12:15ಕ್ಕೆ ಸಭಾ ಕಾರ್ಯಕ್ರಮ ಶುರುವಾಗಿದ್ದು ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆಗಳನ್ನು ಪ್ರಧಾನಿ ಮೋದಿ ನೆರವೇರಿಸಿದ್ದಾರೆ.

    ಕೊಡೇಕಲ್ ನಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಉಪಕ್ರಮವು ಯಾದಗಿರಿ ಜಿಲ್ಲೆಯ 15.85 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಯೋಜಿಸಲಾಗಿದೆ.

    2,050 ಕೋಟಿಗೂ ಹೆಚ್ಚು ವೆಚ್ಚದ ಈ ಯೋಜನೆಯು ಯಾದಗಿರಿ ಜಿಲ್ಲೆಯ 700 ಕ್ಕೂ ಹೆಚ್ಚು ಗ್ರಾಮೀಣ ವಾಸಸ್ಥಳಗಳು ಮತ್ತು ಮೂರು ಪಟ್ಟಣಗಳ ಸುಮಾರು 2.3 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.

    ಕುಡಿಯುವ ನೀರಿನ ಯೋಜನೆಯ ಜೊತೆಗೆ, ನಾರಾಯಣಪುರ ಎಡದಂಡೆ ಕಾಲುವೆ – ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಯೋಜನೆ (NLBC – ERM) ಅನ್ನು ಸಹ ಪ್ರಧಾನಿ ಮೋದಿ ಉದ್ಘಾಟಿಸಿದರು, ಇದು 4,700 ಕೋಟಿ ರೂ. 10,000 ಕ್ಯೂಸೆಕ್ ಸಾಮರ್ಥ್ಯದ ಕಾಲುವೆಯೊಂದಿಗೆ ಯೋಜನೆಯು 4.5 ಲಕ್ಷ ಹೆಕ್ಟೇರ್ ಕಮಾಂಡ್ ಪ್ರದೇಶಕ್ಕೆ ನೀರಾವರಿ ಮಾಡಬಹುದು. ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ 560 ಗ್ರಾಮಗಳ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ ಇದು ಪ್ರಯೋಜನವಾಗಲಿದೆ.

    ಅಕ್ಕಲ್​ಕೋಟ್​ ಕರ್ನೂಲ್​ ಗ್ರೀನ್​ ಫೀಲ್ಡ್​ ಹೈವೇ ಯೋಜನೆಯ ಮೊದಲ ಭಾಗವಾಗಿ ಬಡದಾಳ್​ ಹಾಗೂ ಮರಡಗೀ ಎಸ್​ ಅಡೋಲಾ ನಡುವಿನ ರಸ್ತೆಗೆ ಚಾಲನೆ ನೀಡಿದ್ದಾರೆ.

    ಮೋದಿ ಭಾಷಣ:
    ‘ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು’ ಎಂದು ಕರ್ನಾಟಕದ ಜನರಿಗೆ ವಂದಿಸಿದ ಮೋದಿಗೆ ಜನರು ‘ಮೋದಿ ಮೋದಿ’ ಘೋಷಣೆ ಕೂಗುತ್ತಾ ಪ್ರತಿಕ್ರಿಯೆ ನೀಡಿದರು. ಭಾಷಣದಲ್ಲಿ ಯಾದಗಿರಿ ಜಿಲ್ಲೆಯ ಬಗ್ಗೆಯೂ ಮಾತನಾಡಿದ್ದು ‘ಯಾದಗರಿ ಒಂದು ಸಮೃದ್ಧ ಇತಿಹಾಸವನ್ನು ಹೊಂದಿದೆ. ರಟ್ಟಿಹಳ್ಳಿ ಕೋಟೆ ನಮ್ಮ ಪೂರ್ವಜರ ಸಾಮರ್ಥ್ಯಕ್ಕೆ ಒಂದು ಉದಾಹರಣೆಯಾಗಿದೆ’ ಎಂದಿದ್ದಾರೆ. ಐತಿಹಾಸಿಕ ವ್ಯಕ್ತಿ ವೆಂಕಟಪ್ಪ ನಾಯಕನನ್ನೂ ಉಲ್ಲೇಖಿಸಿದ್ದು ಸ್ಥಳೀಯರ ಮನಸ್ಸನ್ನು ಗೆದ್ದರು.

    ಉದ್ಘಾಟಿಸಿದ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಿ ‘ನೀರು ಹಾಗೂ ರಸ್ತೆಗೆ ಸಂಬಂಧಪಟ್ಟ ದೊಡ್ಡ ಯೋಜನೆಗಳ ಶಿಲಾನ್ಯಾಸ ಹಾಗೂ ಇನ್ನು ಕೆಲವುಗಳನ್ನು ಲೋಕಾರ್ಪಣೆ ಗೊಳಿಸಲಾಗಿದೆ. ಇದರಿಂದ ರೈತ ಹಾಗೂ ಸಾಮಾನ್ಯ ವರ್ಗದ ಜನರಿಗೆ ಲಾಭವಾಗಲಿದೆ’ ಎಂದರು.

    ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅಭಿನಂದಿಸಿದ ಮೋದಿ:
    ‘ಉತ್ತರ ಕರ್ನಾಟಕದ ವಿಕಾಸದ ಬೆಳವಣಿಗೆಗೆ ವೇಗವಾಗಿ ಕೆಲಸ ನಡೆಯುತ್ತಿದ್ದು ಅದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಗೆ ಅಭಿನಂದನೆಗಳು’ ಎಂದಿದ್ದಾರೆ.

    ದೇಶ ಅಮೃತಕಾಲದಲ್ಲಿ ಇರುವ ಕಾರಣ ಎಲ್ಲರೂ ಜೊತೆಗೆ ಶ್ರಮಿಸಬೇಕು ಎಂದು ಸಂದೇಶ ನೀಡಿದ ಪ್ರಧಾನಿ ‘ದೇಶದ ಪ್ರತೀ ರಾಜ್ಯಕ್ಕೆ ಅಮೃತಕಾಲ. ಈಗ ಭಾರತವನ್ನು ವಿಕಸಿತವಾಗಿ ಮಾಡಬೇಕು. ಪ್ರತಿಯೊಬ್ಬ ನಾಗರಿಕ, ಪ್ರತೀ ರಾಜ್ಯ ಕೈಸೇರಿಸಿದರೆ ಭಾರತ ವಿಕಸಿತ ದೇಶವಾಗುತ್ತದೆ. ಬೆಳೆ ಹೆಚ್ಚಾಗುತ್ತಾ ಕೈಗಾರಿಕೆ ಕೂಡ ಅಭಿವೃದ್ಧಿಯಾದಾಗ ದೇಶ ಅಭಿವವೃದ್ಧಿ ಆಗುತ್ತದೆ’ ಎಂದರು.

    ಇದೇ ಸಂದರ್ಭ ಹಿಂದಿನ ಸರ್ಕಾರಗಳ ಕಾಲೆಳೆದ ಮೋದಿ ‘ಹಳೆ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು. ಹಿಂದಿನ ಸರ್ಕಾರಗಳ ರೀತಿ ತಪ್ಪು ನೀತಿಗಳನ್ನು ಕೈಗೊಳ್ಳಬಾರದು. ಹಿಂದಿನ ಸರ್ಕಾರಗಳು ಈ ಪ್ರದೇಶ ಹಿಂದುಳಿದ ಪ್ರದೇಶ ಎಂದು ಕೈ ಬಿಟ್ಟಿದ್ದರು. ವೋಟ್​ ಬ್ಯಾಂಕ್​ ರಾಜಕೀಯದಿಂದಾಗಿ ಈ ಪ್ರದೇಶವನ್ನು ಹಿಂದುಳಿದ ಪ್ರದೇಶವಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಕಷ್ಟ ಉಂಟಾಗಿದೆ. ನಮ್ಮ ಸರ್ಕಾರ ವೋಟ್​ ಬ್ಯಾಂಕ್​ ಅಲ್ಲ, ಬದಲಾಗಿ ವಿಕಾಸವನ್ನೇ ಗುರಿಯಾಗಿ ಇಟ್ಟುಕೊಂಡಿದೆ’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts