More

    ಕಲ್ಯಾಣ ಕರ್ನಾಟಕದಲ್ಲಿ ಮೋದಿ ಟೈಮ್​ ಟೇಬಲ್​ ಹೀಗಿದೆ…

    ಬೆಂಗಳೂರು: ಕಲ್ಯಾಣ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಆಗಮಿಸಲಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೋಟೆಯಲ್ಲಿ ಪ್ರಧಾನಿ ಮೋದಿ ಘರ್ಜಿಸಲಿದ್ದಾರೆ. ಕಲಬುರಗಿ- ಯಾದಗಿರಿಯಲ್ಲಿ ಮೋದಿ ಮೇನಿಯಾ ಪ್ರಾರಂಭವಾಗಲಿದೆ. ಬೆಳಗ್ಗೆ ದೆಹಲಿಯಿಂದ ವಿಶೇಷ IAF BBJ ವಿಮಾನ ಮೂಲಕ ಕಲಬುರಗಿಗೆ ಮೋದಿ ಆಗಮಿಸಲಿದ್ದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಲ್ಯಾಂಡ್​ ಆಗಲಿದ್ದಾರೆ.

    ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಇತರ ಕರ್ನಾಟಕದ ಸಚಿವರು ಸ್ವಾಗತಿಸಲಿದ್ದಾರೆ. ಬೆಳಿಗ್ಗೆ 11:05ಕ್ಕೆ ಕಲಬುರಗಿಯಿಂದ AMI-17 ಹೆಲಿಕಾಪ್ಟರ್​ನಲ್ಲಿ ಯಾದಗಿರಿಗೆ ಪ್ರಯಾಣ ಬೆಳೆಸಲಿದ್ದು ಯಾದಗಿರಿ ಜಿಲ್ಲೆಯ ಕೊಡೆಕಲ್ ಹೆಲಿಪ್ಯಾಡ್ ನಿಲ್ದಾಣದಲ್ಲಿ ಮೋದಿ ಲ್ಯಾಂಡಿಂಗ್ ಮಾಡಲಿದ್ದಾರೆ.

    ಕೊಡೆಕಲ್ ಹೆಲಿಪ್ಯಾಡ್​ನಿಂದ ಕಾರ್ಯಕ್ರಮ ಸ್ಥಳಕ್ಕೆ ರಸ್ತೆ ಮೂಲಕ ಪ್ರಯಾಣ ಬೆಳೆಸಲಿರುವ ಪ್ರಧಾನಿ 12 ಗಂಟೆಗೆ ವಿವಿಧ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ ಕಾರ್ಯಕ್ರಮ ಮುಗಿಸಿ 1:05 ನಿಮಿಷಕ್ಕೆ ಕಾರ್ಯಕ್ರಮ ಸ್ಥಳದಿಂದ ಕೊಡೆಕಲ್ ಹೆಲಿಪ್ಯಾಡ್ ಸ್ಥಳಕ್ಕೆ ರಸ್ತೆ ಮೂಲಕ ಹಿಂತಿರುಗಲಿದ್ದಾರೆ. 1:10ಕ್ಕೆ ಕೊಡೆಕಲ್ ಹೆಲಿಪ್ಯಾಡ್​ನಿಂದ ಮಳಖೇಡನತ್ತ ಪ್ರಯಾಣ ಬೆಳೆಸಲಿದ್ದಾರೆ.

    ನಂತರ ಪ್ರಧಾನಿ ಮೋದಿ 2:15 ಕ್ಕೆ ಲಂಬಾಣಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಜೊತೆಯಲ್ಲೇ ವಿವಿಧ ಯೋಜನೆಗಳ ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 3:00 ಗಂಟೆಗೆ ಕಾರ್ಯಕ್ರಮ ವೇದಿಕೆಯಿಂದ ಮೋದಿ ನಿರ್ಗಮಿಸಲಿದ್ದು ಅಲ್ಲಿಂದ ಹೆಲಿಪ್ಯಾಡ್​ ತಲುಪಿ ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 3:30 ಕ್ಕೆ ಕಲಬುರಗಿ ಏರ್ಪೋರ್ಟ್ ಮೋದಿ ತಲುಪಲಿದ್ದು 3:35 ಕ್ಕೆ ಕಲಬುರಗಿ ವಿಮಾನ ನಿಲ್ದಾಣ ದಿಂದ ವಿಶೇಷ ವಿಮಾನ ಮೂಲಕ ಮುಂಬೈನತ್ತ ಮೋದಿ ಪ್ರಯಾಣ ಬೆಳೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts