More

    ಈ ಆರು ಸೂಪರ್​ ಫುಡ್​ ಬಳಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ!

    ನವದೆಹಲಿ: ನಿಮ್ಮ ಆಹಾರದಲ್ಲಿನ ಸಣ್ಣ ಬದಲಾವಣೆ ಮಾಡಿಕೊಂಡರೂ ಸಾಕು, ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ನಮ್ಮಲ್ಲಿ ಹಲವರು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಎದುರಿಸಬಹುದು. ಇದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಬಿ 12 ಮತ್ತು ಎ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ವಿಟಮಿನ್ ಡಿ ಕೊರತೆಯಿಂದ ಕಡಿಮೆ ರಕ್ತದಲ್ಲಿ ಕಡಿಮೆ ಕ್ಯಾಲ್ಸಿಯಂ ಮಟ್ಟ, ರಿಕೆಟ್ಸ್​, ವಯಸ್ಕರಲ್ಲಿ ಮೂಳೆಗಳ ಮೃದು ಆಗುವುದಕ್ಕೂ ಇದು ಕಾರಣವಾಗಬಹುದು.

    ಬಾದಾಮಿ, ಗೋಡಂಬಿ, ವಾಲ್‌ನಟ್ ಮತ್ತು ಕಡಲೆಕಾಯಿಗಳಂತಹ ಬೀಜಗಳು ಬಿ-ವಿಟಮಿನ್‌ಗಳು, ಫೋಲೇಟ್ ಮತ್ತು ವಿಟಮಿನ್ ಇ ಗಳ ಉತ್ತಮ ಮೂಲವಾಗಿದೆ. ಈ ಸೂಪರ್‌ಫುಡ್‌ಗಳನ್ನು ನಿಯಮಿತವಾಗಿ ಸೇವಿಸಿದರೆ ಆರೋಗ್ಯ ವೃದ್ಧಿಯಲಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಬೀಜಗಳನ್ನು ನೆನೆಸಿಟ್ಟರೆ ದೇಹವು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿಯಿಡೀ ನೆನೆಸುವುದರಿಂದ ಫೈಟಿಕ್ ಆಮ್ಲವನ್ನು ತೆಗೆದುಹಾಕಬಹುದು. ಇದರಿಂದಾಗಿ ಈ ಬೀಜಗಳು ಸುಲಭವಾಗಿ ಜೀರ್ಣವಾಗುತ್ತವೆ. ಇದರಿಂದಾಗಿ ಅವುಗಳ ರುಚಿ ಕೂಡ ಉತ್ತಮವಾಗುತ್ತದೆ.

    ಈ ಸೂಪರ್​ಫುಡ್​ ಸೇವಿಸಿದರೆ ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಹುದು:
    1. ಮೊಡವೆ ನಿವಾರಣೆಗೆ ಬಾದಾಮಿ ಚಮತ್ಕಾರ:

    ಈ ಆರು ಸೂಪರ್​ ಫುಡ್​ ಬಳಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ!
    ನೆನೆಸಿದ ಬಾದಾಮಿಯನ್ನು ತಿನ್ನುವುದು ಪಿಸಿಓಎಸ್, ಮೊಡವೆಗಳನ್ನು ನಿವಾರಿಸಲು ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. 5-7 ಬಾದಾಮಿಯನ್ನು ರಾತ್ರಿ ನೆನೆಸಿ, ಬೆಳಿಗ್ಗೆ ಸಿಪ್ಪೆ ತೆಗೆದು ಪ್ರತಿದಿನ ಸೇವಿಸಬೇಕು.

    2. ಪೀರಿಯೆಡ್ಸ್​ ತೊಂದರೆಗೆ ನೆನೆಸಿದ ಒಣದ್ರಾಕ್ಷಿ ಮತ್ತು ಕೇಸರ್ ಪರಿಹಾರ:

    ಈ ಆರು ಸೂಪರ್​ ಫುಡ್​ ಬಳಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ!
    ಮುಟ್ಟಿನ ನೋವು ಮತ್ತು ಅನಿಯಮಿತವಾಗಿ ಮುಟ್ಟಾಗುವುದಕ್ಕೆ, 6-8 ನೆನೆಸಿದ ಒಣದ್ರಾಕ್ಷಿ ಮತ್ತು 2 ಎಳೆಗಳ ಕೇಸರ್ ಅನ್ನು ರಾತ್ರಿಯಿಡೀ ನೆನೆಸಿಡಬೇಕು. ಮರುದಿನ ಬೆಳಗ್ಗೆ ಎದ್ದು ಇದನ್ನು ಸೇವಿಸಿದರೆ ಅನೇಕ ಮುಟ್ಟಿನ ತೊಂದರೆಗಳಿಂದ ಪಾರಾಗಬಹುದು.

    3. ಕೂದಲು ಉದುರುವಿಕೆಗಾಗಿ ನೆನೆಸಿದ ಕಪ್ಪು ಒಣದ್ರಾಕ್ಷಿ:

    ಈ ಆರು ಸೂಪರ್​ ಫುಡ್​ ಬಳಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ!
    ಕೂದಲು ಉದುರುವಿಕೆ ಮತ್ತು ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಪ್ಪು ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಸೇವಿಸಿ.

    4. ನೆನಪಿನಶಕ್ತಿ ಮತ್ತು ಏಕಾಗ್ರತೆಗಾಗಿ ನೆನೆಸಿದ ವಾಲ್​ನಟ್ಸ್ ಪರಿಹಾರ:

    ಈ ಆರು ಸೂಪರ್​ ಫುಡ್​ ಬಳಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ!
    ಮೆದುಳಿನ ಶಕ್ತಿ, ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಎರಡು ವಾಲ್​ನಟ್ಸ್ ಅನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ತಿನ್ನಬೇಕು. ಮಕ್ಕಳಿಗೆ ತಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

    5. ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕಾಗಿ ಮೊಳಕೆ ಬರಿಸಿದ ಹೆಸರುಕಾಳು:

    ಈ ಆರು ಸೂಪರ್​ ಫುಡ್​ ಬಳಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ!
    ಉತ್ತಮ ಕೂದಲು, ಸ್ನಾಯುಗಳ ಆರೋಗ್ಯ ಮತ್ತು ಉತ್ತಮ ಚರ್ಮಕ್ಕಾಗಿ 2 ಟೀಸ್ಪೂನ್ ಹೆಸರುಕಾಳನ್ನು ನೆನೆಸಿ ಮತ್ತು ಬೆಳಿಗ್ಗೆ ಸೇವಿಸಿ. ಇದು ಹದಿಹರೆಯದವರು ಮತ್ತು ಮಹಿಳೆಯರಿಗೆ ವಿಶೇಷ ಆಹಾರವಾಗಿದೆ.

    6. ಮಲಬದ್ಧತೆಗೆ ನೆನೆಸಿದ ಅಂಜೂರ:

    ಈ ಆರು ಸೂಪರ್​ ಫುಡ್​ ಬಳಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ!
    ಎರಡು ನೆನೆಸಿದ ಅಂಜೂರದ ಹಣ್ಣುಗಳು ನಿಮ್ಮ ಕರುಳಿನ ಆರೋಗ್ಯಕ್ಕೆ ಅದ್ಭುತಗಳನ್ನು ಮಾಡಬಹುದು. ವಿಶೇಷವಾಗಿ ಗರ್ಭಿಣಿಯರು ಮತ್ತು ಹಿರಿಯ ನಾಗರಿಕರಲ್ಲಿ ಮಲಬದ್ಧತೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

    ಈ ಎಲ್ಲಾ ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಪರಿಣಾಮ ಹೆಚ್ಚು

    ಬೀಜ, ನಟ್ಸ್​ಗಳನ್ನು ನೆನೆಸುವುದು ಹೇಗೆ?
    – ಚೆನ್ನಾಗಿ ತೊಳೆಯಿರಿ
    – ಶುದ್ಧ ಕುಡಿಯುವ ನೀರಿನಲ್ಲಿ ರಾತ್ರಿ ನೆನೆಸಿ
    – ಬೆಳಿಗ್ಗೆ ನೀರನ್ನು ಎಸೆಯಿರಿ
    – ವಾಲ್‌ನಟ್ಸ್/ಅಂಜೂರದ ಹಣ್ಣುಗಳನ್ನು ನೇರವಾಗಿ ಸೇವಿಸಿ.
    – ಹೆಸರುಕಾಳನ್ನು 6-8 ಗಂಟೆಗಳ ಕಾಲ ಮೊಳಕೆಯೊಡೆಯಲು ಜರಡಿ ಅಥವಾ ಬಟ್ಟೆಯಿಂದ ಮುಚ್ಚಿ ಬಿಡಬಹುದು. ಇದನ್ನು ಸಣ್ಣಗೆ ಹಬೆಯಲ್ಲಿ ಬೇಯಿಸಿ ಮತ್ತು ಸಲಾಡ್‌ನೊಂದಿಗೆ ತಿನ್ನಬಹುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts