More

    ಉಪಸಭಾಪತಿ ಆತ್ಮಹತ್ಯೆ; ರೈಲ್ವೆ ಹಳಿ ಮೇಲೆ ಧರ್ಮೇಗೌಡರ ಶವ ಪತ್ತೆ

    ಕಡೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಸೋಮವಾರ ರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹದ ಜೇಬಿನಲ್ಲೇ ಸಿಕ್ಕಿತೆನ್ನಲಾದ ಡೆತ್​ನೋಟ್​ನಲ್ಲಿ ಮೇಲ್ಮನೆ ಘಟನೆ ಜತೆಗೆ ತಮ್ಮ ಆಸ್ತಿ ವಿವರ ದಾಖಲಿಸಿ, ಸೋಮವಾರವಷ್ಟೇ ಭೂಮಿಪೂಜೆ ಮಾಡಿರುವ ಮನೆ ನಿರ್ವಣವನ್ನು ಪೂರ್ಣಗೊಳಿಸುವಂತೆ ಮಗನಿಗೆ ತಿಳಿಸಿದ್ದಾರೆನ್ನಲಾಗಿದೆ. ಈ ಘಟನೆ ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದೆ.

    ಮಂಗಳವಾರ ಶಿವಮೊಗ್ಗದಲ್ಲಿ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಮುಗಿದ ನಂತರ ಸಖರಾಯಪಟ್ಟಣಕ್ಕೆ ಕೊಂಡೊಯ್ದು ಸರ್ಕಾರಿ ಕಾಲೇಜು ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ನಂತರ ಸರಪನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಅವಿಶ್ವಾಸ ವಿಚಾರವಾಗಿ ಇತ್ತೀಚೆಗೆ ವಿಧಾನಪರಿಷತ್​ನಲ್ಲಿ ನಡೆದ ಘಟನೆಯಿಂದ ತೀವ್ರವಾಗಿ ನೊಂದಿದ್ದ ಅವರು ಸೋಮವಾರ ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ.ರವಿ ಅವರೊಂದಿಗೆ ಜಿಮ್ ಉದ್ಘಾಟನೆ ಮತ್ತು ಜಿಲ್ಲಾ ಯುವಜನೋತ್ಸವದಲ್ಲಿ ಪಾಲ್ಗೊಂಡಿದ್ದರು. ಬಳಿಕ ಸಖರಾಯಪಟ್ಟಣದಲ್ಲಿರುವ ತೋಟದ ಮನೆಗೆ ತೆರಳಿದ್ದರು.

    ಸಂಜೆ ಖಾಸಗಿ ಡ್ರೖೆವರ್​ನನ್ನು ಕರೆದುಕೊಂಡು ಬಾಣಾವರ ಕಡೆ ಹೊರಟ ಅವರು, ಪೆಟ್ರೋಲ್ ಬಂಕ್​ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿ ಬಂಕ್ ಮಾಲೀಕರೊಂದಿಗೂ ಕೆಲ ಸಮಯ ಮಾತನಾಡಿದ್ದಾರೆ. ಗುಣಸಾಗರ ಸಮೀಪ ಬಂದಾಗ ಆತ್ಮೀಯರೊಂದಿಗೆ ಖಾಸಗಿಯಾಗಿ ಮಾತನಾಡುವುದಿದೆ ನೀನು ಹೋಗು ಎಂದು ಡ್ರೖೆವರ್​ನನ್ನು ಕಳುಹಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಧಮೇಗೌಡರು, ಕಡೂರು ಪಟ್ಟಣದ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಜನಶತಾಬ್ಧಿ ರೈಲು ಕಡೂರಿಗೆ ಎಷ್ಟು ಗಂಟೆಗೆ ಬರುತ್ತದೆ, ಎಷ್ಟೊತ್ತಿಗೆ ಹೊರಡುತ್ತದೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಮೊಬೈಲ್ ಕರೆಯ ಮಾಹಿತಿಗಳಲ್ಲಿ ಇದೇ ಕೊನೆಯ ಕರೆ. ನಂತರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಗೊತ್ತಾಗಿದೆ. ರಾತ್ರಿ ಎಷ್ಟೊತ್ತಾದರೂ ಧಮೇಗೌಡರು ಮನೆಗೆ ಬಾರದಿದ್ದಾಗ ಅವರ ಮಗ ಡ್ರೖೆವರ್​ಗೆ ಫೋನ್ ಮಾಡಿ ಎಲ್ಲಿದ್ದೀರಿ ಎಂದು ವಿಚಾರಿಸಿದ್ದಾರೆ. ತನ್ನನ್ನು ಬಿಟ್ಟು ಹೋದ ಬಗ್ಗೆ ಡ್ರೖೆವರ್ ಮಾಹಿತಿ ನೀಡಿದ ಬಳಿಕ ತಕ್ಷಣ ಹುಡುಕಾಟ ಆರಂಭಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೊನೆಯ ಮೊಬೈಲ್ ಕರೆಯ ಜಾಡು ಹಿಡಿದು ಹುಡುಕಾಟ ಆರಂಭಿಸಿದಾಗ ಗುಣಸಾಗರ ಸಮೀಪ ರೈಲ್ವೆ ಹಳಿ ಮೇಲೆ ಮೃತದೇಹ ಪತ್ತೆಯಾಗಿದೆ.

    ಗಣ್ಯರಿಂದ ಅಂತಿಮ ದರ್ಶನ: ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ತರೀಕೆರೆ ಶಾಸಕ ಸುರೇಶ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

    ಕೃಷಿಯಿಂದ ಅಸೆಂಬ್ಲಿವರೆಗೆ

    • ಮೂಲತಃ ಕೃಷಿಕ ಕುಟುಂಬದವರಾದ ಧಮೇಗೌಡರ ಸೋದರ ಭೋಜೇಗೌಡ ಸಹ ವಿಧಾನ ಪರಿಷತ್ ಸದಸ್ಯರು
    • 2004ರಲ್ಲಿ ಧಮೇಗೌಡರು ಬೀರೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು
    • ಬೀರೂರು ಕ್ಷೇತ್ರ ರದ್ದಾದ ಬಳಿಕ 2013ರಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಸಿ.ಟಿ.ರವಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

    ಸಾರ್ವಜನಿಕ ಕ್ಷೇತ್ರದಲ್ಲಿದ್ದ ವ್ಯಕ್ತಿಯ ಸಾವಿನ ಕಾರಣ ತಿಳಿದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಮೇಲ್ಮನೆ ಮೇಲಾಟ ಮುಗಿದು 15 ದಿನ ಕಳೆದಿದೆ. ಅವರ ನಡೆ-ನುಡಿ ಗಮನಿಸಿದವರಿಗೆ ದುರ್ಬಲ ವ್ಯಕ್ತಿಯಲ್ಲ ಎಂಬುದು ಗೊತ್ತಿದೆ. ಹೀಗಾಗಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತನಿಖೆಯಿಂದ ಬಯಲಿಗೆ ಬರಬೇಕು.

    | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

    ಮದ್ವೆಯಾಗಿ ಮನೆಗೆ ಬಂದವಳಿಗೆ ಕಾದಿತ್ತು ಶಾಕ್​: ಪೊಲೀಸ್​ ರಕ್ಷಣೆಯಲ್ಲಿದ್ದ ವಧು ಸಖಿ ಕೇಂದ್ರದಲ್ಲೇ ದುರಂತ ಸಾವು!

    ‘ನನ್ನನ್ನು ರಕ್ಷಿಸಿ..’ ಎಂದು ಅಪ್ಪನ ವಿರುದ್ಧವೇ ದೂರು ಕೊಟ್ಟಳು ಮಾಜಿ ಸಚಿವರ ಮಗಳು!

    ಚೆನ್ನಾಗ್ ಓದು ಎಂದು ಮನೇಲಿ ಹೇಳಿದ್ದಕ್ಕೆ ಏನ್​ ಮಾಡ್ದ ನೋಡಿ ಈ ಪೋರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts