More

    ಇಬ್ಬರು ನಾಯಕಿಯರೊಂದಿಗೆ ಬುಲೆಟ್​ ಹತ್ತಿ ಹೊರಟ ಧರ್ಮ …

    ಬೆಂಗಳೂರು: ‘ಬೆಂಗಳೂರು ಇನ್​’, ‘ದಿ ವೈರಸ್​’, ‘ವಸುಂಧರಾ ದೇವಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ಧರ್ಮ ಕೀರ್ತಿರಾಜ್​, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ ‘ಬುಲೆಟ್​’. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಆರ್.ಟಿ. ನಗರದ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದೆ.

    ಇದನ್ನೂ ಓದಿ: ಪುಷ್ಪ ಚಿತ್ರದ​ ಕಲೆಕ್ಷನ್​​ ರೆಕಾರ್ಡ್​ ಬ್ರೇಕ್ ಮಾಡಿದ ಕಾಂತಾರ: ಪುಷ್ಪರಾಜ್ ಎದುರು ಗೆದ್ದು ಬೀಗಿದ ಡಿವೈನ್​​​​ ಸ್ಟಾರ್

    ಈ ಚಿತ್ರವನ್ನು ಸತ್ಯಜಿತ್​ ನಿರ್ಮಿಸಿ-ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕುರಿತು ಮಾಹಿತರಿ ನೀಡುವ ಅವರು, ‘ಬೆಂಗಳೂರು, ಗೋವಾ, ಮಂಗಳೂರು ಮುಂತಾದ ಕಡೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಧರ್ಮ ಕೀರ್ತಿರಾಜ್​ಗೆ ನಾಯಕಿಯರಾಗಿ ಮುಂಬೈನ ಶ್ರೀಯಾ ಶುಕ್ಲಾ ಹಾಗೂ ಅಜಿತಾ ಜಾ ಇದ್ದಾರೆ. ಶ್ರೀಯಾ ಅವರು ಸುಶಾಂತ್ ಸಿಂಗ್ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಅಜಿತಾ ವೆಬ್ ಸೀರಿಸ್​ಗಳಲ್ಲಿ ನಟಿಸಿದ್ದಾರೆ. ಇದೊಂದು ಕ್ರೈಮ್​ ಥ್ರಿಲ್ಲರ್​ ಚಿತ್ರವಾಗಿದ್ದು, ಫ್ಯಾಮಿಲಿ ಸೆಂಟಿಮೆಂಟ್ ಸಹ ಇದೆ’ ಎಂದು ಮಾಹಿತಿ ನೀಡುತ್ತಾರೆ.

    ಕಥೆ ಬಹಳ ಚೆನ್ನಾಗಿದೆ ಎನ್ನುವ ಧರ್ಮ, ‘ಅಪ್ಪ-ಮಗನ ಸೆಂಟಿಮೆಂಟ್ ಸನ್ನಿವೇಶಗಳು ಜನರಿಗೆ ಹತ್ತಿರವಾಗಲಿದೆ. ನನ್ನ ತಂದೆಯ ಪಾತ್ರದಲ್ಲಿ ಸತ್ಯಜಿತ್ ಅವrE ಅಭಿನಯಿಸುತ್ತಿದ್ದಾರೆ. ಎರಡು ಶೇಡ್​ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ’ ಎಂದರು ನಾಯಕ ಧರ್ಮ ಕೀರ್ತಿರಾಜ್.

    ಇದನ್ನೂ ಓದಿ: ನ್ಯಾಯಾಲಯಕ್ಕೆ ತಲೆಬಾಗಿದ ‘ಕಾಂತಾರ’ ಚಿತ್ರತಂಡ; ಯೂಟ್ಯೂಬ್​ನಿಂದ ‘ವರಾಹ ರೂಪಂ’ ಹಾಡು ಡಿಲೀಟ್

    ನಾಯಕಿಯರಾದ ಶ್ರೀಯಾ ಶುಕ್ಲ ಹಾಗೂ ಅಜಿತಾ ಜಾಗೆ ಕನ್ನಡದಲ್ಲಿ ನಟಿಸುತ್ತಿರುವ ಖುಷಿ ಇದೆಯಂತೆ. ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ ಮತ್ತು ರಾಜ್​ ಭಾಸ್ಕರ್​ ಅವರ ಸಂಗೀತವಿದೆ.

    ಬಾಲಿವುಡ್​ ಚಿತ್ರ ನಿರ್ದೇಶನಕ್ಕೆ ನೋ ಎಂದ ರಿಷಭ್; ಕನ್ನಡದಲ್ಲಿ ನಿರ್ದೇಶನ ಮಾಡುವುದಾಗಿ ಹೇಳಿಕೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts