More

    ಪ್ಯಾನ್​ ಇಂಡಿಯಾ ಚಿತ್ರದಲ್ಲಿ ‘ಡಾಲಿ’ ಧನಂಜಯ್; ಹೆಸರು ರಿವೀಲ್​ ಆಯ್ತು!

    ಬೆಂಗಳೂರು: ತೆಲುಗಿನ ‘ಪುಷ್ಪ’ ನಂತರ ‘ಡಾಲಿ’ ಧನಂಜಯ್ ಅಭಿನಯದ ‘ಹೆಡ್​ ಬುಷ್​’ ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಬರೀ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಿದರು. ಈಗ ಅವರ ಹೊಸ ಚಿತ್ರವೊಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

    ಇದನ್ನೂ ಓದಿ: ಉರ್ಫಿ ಜಾವೆದ್​ಗೆ ಬಾಡಿಗೆ ಮನೆ ಕೊಡಲು ಯಾರೂ ಒಪ್ಪುತ್ತಿಲ್ಲವಂತೆ!

    ತೆಲುಗಿನ ಸತ್ಯದೇವ್ ಜೊತೆಯಾಗಿ ಧನಂಜಯ್​ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕಳೆದ ವರ್ಷ ಕೇಳಿಬಂದಿತ್ತು. ಈ ಚಿತ್ರವನ್ನು ಮೊದಲು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿ, ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಸುದ್ದಿ ಇತ್ತು. ಈಗ ಆ ಚಿತ್ರವನ್ನು ಬರೀ ಎರಡು ಭಾಷೆಗಳಿಗೆ ಸೀಮಿತಗೊಳಿಸದೆ, ಐದು ಭಾಷೆಗಳಲ್ಲಿ ಬಿಡುಗಡೆ ಮಾಡುವ ಮೂಲಕ ಪ್ಯಾನ್​ ಇಂಡಿಯಾ ಚಿತ್ರ ಮಾಡಬೇಕು ಎಂಬುದು ಚಿತ್ರತಂಡದ ಯೋಚನೆ.

    ಈ ಚಿತ್ರಕ್ಕೆ ‘ಜೀಬ್ರಾ’ ಎಂದು ನಾಮಕರಣ ಮಾಡಲಾಗಿದ್ದು, ಓಲ್ಡ್ಟೌನ್ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳಡಿ ಈ ಚಿತ್ರವನ್ನು ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಈ ಮಲ್ಟಿಸ್ಟಾರರ್ ಚಿತ್ರವನ್ನು ‘ಪೆಂಗ್ವಿನ್’ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ.

    ಇದನ್ನೂ ಓದಿ: 2023ರ ಆಸ್ಕರ್​ ನಾಮಿನೇಷನ್ ಪಟ್ಟಿ ಪ್ರಕಟ; ಆರ್​ಆರ್​ಆರ್​ ಸೇರಿ ಆಸ್ಕರ್​ಗೆ ಮೂರು ಭಾರತೀಯ ಸಿನಿಮಾಗಳು

    ಈಗಾಗಲೇ 50 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಬಾಕಿ ಉಳಿದಿರುವ ಚಿತ್ರೀಕರಣವನ್ನು ಹೈದರಾಬಾದ್, ಕೊಲ್ಕತ್ತಾ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಧನಂಜಯ ಮತ್ತು ಸತ್ಯದೇವ್ ಜೊತೆಗೆ ‘ಕಟ್ಟಪ್ಪ’ ಖ್ಯಾತಿಯ ಸತ್ಯರಾಜ್, ಸುನೀಲ್ ಮುಂತಾದವರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಮತ್ತು ಸತ್ಯ ಪೊನ್ಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ನಿಮ್ಮ ಸಮಸ್ಯೆ ಏನೆಂದು ಹೇಳದೆ ನಿಂದಿಸಬೇಡಿ: ಟ್ರೋಲರ್​ಗಳ ಬಗ್ಗೆ ರಶ್ಮಿಕಾ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts