More

    ಈ ದೇವಸ್ಥಾನದಲ್ಲಿ ಮಕ್ಕಳ ತೂಕದ ಮಲ್ಲಿಗೆ ಹೂವು ಯಾಕೆ ಅರ್ಪಿಸುತ್ತಾರೆ?

    ಮೊಳಕಾಲ್ಮೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಪೂಜೆಯಿಲ್ಲದೆ ಸ್ತಬ್ಧವಾಗಿದ್ದ ದೇಗುಲಗಳತ್ತ ಭಕ್ತರು ಮುಖ ಮಾಡಿದ್ದು, ಜೀವಕಳೆ ಬಂದಿದೆ. ತಾಲೂಕಿನ ರಾಯಾಪುರದ ಮ್ಯಾಸರಹಟ್ಟಿಯಲ್ಲಿ ನೆಲೆಸಿರುವ ಮಾರಿಮಹೇಶ್ವರಿ ಅಮ್ಮನ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಭಕ್ತ ಕುಟುಂಬವೊಂದು 9 ತಿಂಗಳ ಗಂಡು ಮಗುವಿನ ತೂಕದಷ್ಟು ಮಲ್ಲಿಗೆ ಹೂವು ನೀಡಿ ಹರಕೆ ತೀರಿಸಿತು.

    ಹಲವು ವರ್ಷಗಳಿಂದಲೂ ಇಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯ ನೆರವೇರುತ್ತವೆ. ದೂರದ ಊರುಗಳಿಂದ ಬಸ್, ಕಾರು, ಬೈಕ್‌ಗಳಲ್ಲಿ ಭಕ್ತರು ಬಂದು ಒಂದು ರಾತ್ರಿ ತಂಗುತ್ತಾರೆ. ಹರಕೆ ಹೊತ್ತುಕೊಂಡರೆ ಮಕ್ಕಳ ಫಲ ದೊರೆಯುತ್ತದೆ, ಕುಟುಂಬದಲ್ಲಿ ವಿರಸ ನಾಶವಾಗುತ್ತದೆ, ದೇವಿ ಜಾನುವಾರುಗಳ ರಕ್ಷಣೆ ಮಾಡುತ್ತಾಳೆ. ಹೂವು ಅರ್ಪಿಸಿದರೆ ಅಂದುಕೊಂಡ ಕಾರ್ಯ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆ.

    ಹೈದರಾಬಾದ್, ಕರ್ನೂಲ್, ಅನಂತಪುರ, ಬೆಂಗಳೂರು, ರಾಮನಗರ, ಶಿವಮೊಗ್ಗ, ಹಾಸನ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಯಿಂದ ಭಕ್ತರು ಆಗಮಿಸುತ್ತಾರೆ. ದಶಕಗಳ ಹಿಂದೆ ಪೂಜೆ ಮಲ್ಲಯ್ಯ ಎಂಬ ಭಕ್ತ ಆಂಧ್ರದಿಂದ ದೇವಿಯ ವಿಗ್ರಹವಿರುವ ಪುಟ್ಟಿ ಮತ್ತು ಎರಡು ಕುದುರೆ ಸಮೇತ ಇಲ್ಲಿಗೆ ಬಂದು ನೆಲೆಗೊಂಡ ಎಂಬ ಪ್ರತೀತಿ ಇದೆ.

    ಪ್ರತಿ ವರ್ಷ ಜನವರಿ ಶೂನ್ಯ ಮಾಸದ ಮೂಲಾ ನಕ್ಷತ್ರದ ದಿನ ಸಿಡಿ ಉತ್ಸವ ಹಾಗೂ ಅಗ್ನಿ ಕೆಂಡೋತ್ಸವ ನಡೆಯುತ್ತದೆ. ಬೆಂಗಳೂರು ಮತ್ತು ಬಳ್ಳಾರಿ ಮಾರ್ಗವಾಗಿ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ದೇವಿಯ ಸನ್ನಿಧಾನ ಇದೆ.

    ಹನುಮನ ದೇಗುಲಗಳಲ್ಲಿ ಹನುಮ ನಾಮ ಜಪಿಸಿದ ಭಕ್ತರು

    ದೇವರ ದರ್ಶನ ಪಡೆದು ಪುನೀತರಾದ ಭಕ್ತರು

    ಬಾಗಿಲು ತೆರೆದ ದೇವಳ, ಭಕ್ತರು ವಿರಳ

    ಹಂಪಿ ಶ್ರೀ ವಿರೂಪಾಕ್ಷನ ಕಂಡು ಧನ್ಯರಾದ ಭಕ್ತರು, ಹೊರಗೆ ನಿಂತು ಕೈಮುಗಿದ ಮಕ್ಕಳು, ವೃದ್ಧರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts