More

    ಹಂಪಿ ಶ್ರೀ ವಿರೂಪಾಕ್ಷನ ಕಂಡು ಧನ್ಯರಾದ ಭಕ್ತರು, ಹೊರಗೆ ನಿಂತು ಕೈಮುಗಿದ ಮಕ್ಕಳು, ವೃದ್ಧರು

    ಹೊಸಪೇಟೆ: ಎರಡೂವರೆ ತಿಂಗಳಿಂದ ಕಾಯುತ್ತಿದ್ದ ಭಕ್ತರಿಗೆ ಸೋಮವಾರ ಹಂಪಿ ವಿರೂಪಾಕ್ಷ ದೇವಸ್ಥಾನ ಬಾಗಿಲು ತೆರೆಯಿತು. ಸಾರಿಗೆ ಸೌಕರ್ಯ ಇಲ್ಲದ್ದರಿಂದ ಭಕ್ತರು ಸ್ವಂತ ವಾಹನದಲ್ಲಿ ಬಂದು ದರ್ಶನ ಪಡೆದು, ದೇಶವನ್ನು ಕರೊನಾದಿಂದ ಮುಕ್ತಿಗೊಳಿಸು ಎಂದು ಪ್ರಾರ್ಥಿಸಿದರು. ಮೊದಲ ದಿನ ಭಕ್ತರ ಸಂಖ್ಯೆ ಕಡಿಮೆಯಿದ್ದು, ಬರಿಗೈಲಿ ಪ್ರಾರ್ಥಿಸಿ ತೆರಳಿದರು.

    ಮಾಸ್ಕ್ ಹಾಕಿದ್ದವರಿಗೆ ಮಾತ್ರ ಸ್ಯಾನಿಟೈಸರ್ ಹಾಕಿ ದರ್ಶನಕ್ಕೆ ಕಳುಹಿಸಲಾಯಿತು. ಮಕ್ಕಳು, ವೃದ್ಧರು ದೇವಸ್ಥಾನದ ಹೊರಗಡೆಯಿಂದ ಕೈಮುಗಿದರು. ಬಿಷ್ಟಪ್ಪಯ್ಯ ಗೋಪುರದಿಂದ ಪ್ರವೇಶಿಸಿ, ಉತ್ತರ ಬಾಗಿಲಲ್ಲಿ ಭಕ್ತರು ನಿರ್ಗಮಿಸಿದರು. ದೈಹಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗಿತ್ತು. ವಿರೂಪಾಕ್ಷೇಶ್ವರ ಸ್ವಾಮಿ, ಪಂಪಾಂಬಿಕೆ ಹಾಗೂ ಭುವನೇಶ್ವರಿ ಮೂರ್ತಿಗಳಿಗೆ ಅರ್ಚಕರಾದ ಜೆ.ಎಸ್.ಶ್ರೀನಾಥಶರ್ಮಾ, ಜೆ.ಎಸ್.ಮುರಳಿಧರ ಶಾಸ್ತ್ರಿ ಮತ್ತು ಪಿ.ಶ್ರೀನಿವಾಸ ಶರ್ಮಾ ವಿಶೇಷಾಲಂಕಾರ ಮಾಡಿದ್ದರು. ಹೂ-ಹಣ್ಣು, ಕಾಯಿ ನಿಷೇಧ ಹೇರಿದ್ದರಿಂದ ಬರಿಗೈಲಿ ಬರುತ್ತಿದ್ದ ಭಕ್ತರನ್ನು ವಾನರರ ಸಮೂಹವು ಅವರ ಕೈಗಳನ್ನೇ ಕಣ್ಣರಳಿಸಿ ನೋಡುತ್ತಿದ್ದವು. ದೇವಸ್ಥಾನದಲ್ಲಿ ಎಂದಿನಂತೆ ಬೆಳಗ್ಗೆ 6.30 ರಿಂದ 1.15 ಮತ್ತು ಮಧ್ಯಾಹ್ನ ಮೂರರಿಂದ ರಾತ್ರಿ ಎಂಟರವರೆಗೆ ದರ್ಶನಕ್ಕೆ ಅವಕಾಶವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts